Get Even More Visitors To Your Blog, Upgrade To A Business Listing >>

ದಾರುನ್ನಜಾತ್ ಎಜುಕೇಶನ್ ಸೆಂಟರ್ ಏಳನೇ ವಾರ್ಷಿಕ ಹಾಗು ಅಜ್ಮೀರ್ ಮೌಲೀದ್ ಸಮಾರೋಪ

vlcsnap-2017-04-24-15h06m15s187-copy

ಮಂಜೇಶ್ವರ : ಕಳೆದ ಎರಡು ದಿವಸಗಳಿಂದ ಚಿಗುರುಪಾದೆ ಚಿನಾಲ ದಲ್ಲಿ ಜರಗಿದ ದಾರುನ್ನಜಾತ್ ಎಜುಕೇಶನ್ ಸೆಂಟರಿನ 7 ನೇ ವಾರ್ಷಿಕ ಹಾಗೂ ಅಜ್ಮೀರ್ ಮೌಲೀದ್ ಸಮಾರೋಪ ಗೋಂಡಿತು.ಶನಿವಾರದಂದು ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಉದ್ಘಾಟನೆಗೊಂಡ ಕಾರ್ಯಕ್ರಮ ರಾತ್ರಿ ಸಯ್ಯದ್ ಹಬೀಬುರಹ್ಮಾನ್ ಇರಿಕ್ಕೂರು ರವರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಿತು. vlcsnap-2017-04-24-15h06m29s72-copy

vlcsnap-2017-04-24-15h05m17s119-copyಬಳಿಕ ಭಾನುವಾರ ಬೆಳಿಗ್ಗೆ ಮೌಲೀದ್ ಪಾರಾಯಣದೊಂದಿಗೆ 10 ಘಂಟೆಗೆ ವ್ಯೆದ್ಯಕೀಯ ಶಿಬಿರ ನಡೆಯಿತು. ವೈದ್ಯಕೀಯ ಶಿಬಿರದಲ್ಲಿ ಹಲವಾರು ಮಂದಿ ರೋಗಿಗಳು ಇದರ ಪ್ರಯೋಜನ ಪಡೆದರು. ಈ ಸಂದರ್ಭ v4 ನ್ಯೂಸ್ ನೊಂದಿಗೆ ಮಾತನಾಡಿದ ದಾರುನ್ನಜಾತ್ ಎಜುಕೇಶನ್ ಸೆಂಟರಿನ ಮುಖ್ಯಸ್ಥ ಮಾತನಾಡಿ ಕಳೆದ ಎರಡು ದಿವಸಗಳಿಂದ ನಡೆದ ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯ ವ್ಯಕ್ತಿಗಳು ಆಗಮಿಸಿ ಉಪದೇಶ ನಿರ್ಧೇಶಗಳನ್ನು ನೀಡಿದ್ದಾರೆ. 2009 ರಲ್ಲಿ ಆರಂಭಗೊಂಡ ಈ ಸಂಸ್ಥೆಯು ಏಳು ವರ್ಷವಾಗುತ್ತಿರುವಾಗ 40 ವಿದ್ಯಾರ್ಥಿಗಳು ಕಲಿಯುತಿದ್ದಾರೆ. ಲೌಕಿಕ ಹಾಗು ಧಾರ್ಮಿಕ ವಿದ್ಯಾಭ್ಯಾಸವನ್ನು ಇಲ್ಲಿ ನೀಡಲಾಗುತ್ತಿದೆ. ಎಂದು ಹೇಳಿದರು. ಬಳಿಕ ಸಮಸ್ತ ಕರ್ನಾಟಕ ಜಂಇಯ್ಯತುಲ್ ಉಲಮಾ ದ ಪ್ರಧಾನ ಕಾರ್ಯದರ್ಶಿ ಮಾಣಿ ಉಸ್ತಾದ್ ರವರು ದಾರುನ್ನಜಾತ್ ಎಜುಕೆಶನಿನ ಎರಡನೇ ಮಹಡಿಯ ಕಟ್ಟಡದ ಉದ್ಘಾಟನೆ ನಡೆಸಿದರು. ಬಳಿಕ ಸಂಜೆ ಮೊಹಮ್ಮದ್ ಆಟಕೋಯ ತಂಘಲ್ ಮಾಣಿಮೂಲೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನುಶರಫುಲ್ ಉಲಮಾ ಪಿ ಎಂ ಅಬ್ಬಾಸ್ ಮುಸ್ಲಿಯಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಂದು ಮಿಹ್ ರಾಜ್ ರಾತ್ರಿಯಾಗಿದೆ ಇಂತಹ ಶುಭ ದಿನದಲ್ಲಿ ಏರ್ಪಡಿಸಿದ ಕಾರ್ಯಕ್ರಮಕ್ಕೆ ಬಹಳ ಪುಣ್ಯವೆದೆಯೆಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ ಪಿ ಆರ್ ಶೆಟ್ಟಿ ಕುಳೂರು ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ  ಪಿ ಆರ್ ಶೆಟ್ಟಿ ಕುಳೂರು ರವರು ದಾರುನ್ನಜಾತ್ ಎಜುಕೇಶನ್ ಸೆಂಟರ್ ಚಿನಾಳ ಎಂಬ ಪುಟ್ಟ ಗ್ರಾಮದಲ್ಲಿ ಪ್ರಜ್ವಲಿಸುತ್ತಾ ಇದೆ. ಇಂದು ವಿದ್ಯಾಭ್ಯಾಸವೆಂಬುದು ಒಂದು ವ್ಯಾಪಾರೀಕರಣವಾಗಿದೆ. ಎಲ್ಲೂ ಪೈಪೋಟಿಗಳು ನಡೆಯುತ್ತಿರುವುದನ್ನು ನಾವು ಗಮನಿಸ ಬಹುದಾಗಿದೆ. ಅಂತಹ ಸಂದರ್ಭದಲ್ಲೂ ಇಲ್ಲಿ ಉತ್ತಮವಾದ ಶಿಕ್ಷಣವನ್ನು ನೀಡುತ್ತಿರುವುದು ಅಭಿನಂದನೀಯವೆಂದು ಹೇಳಿದರು. ವೇದಿಕೆಯಲ್ಲಿ ಬಡ ಕುಟುಂಬಗಳಿಗೆ ಅಕ್ಕಿಯನ್ನು ವಿತರಿಸಲಾಯಿತು. ಜತೆಯಾಗಿ ವಿದ್ಯೆಯಲ್ಲಿ ಉತ್ತಮ ಅಂಕವನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಯ್ಯದ್ ಆಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ ವಿಶೇಷ ಪ್ರಾರ್ಥಣೆ ಗೈದರು. ಉಸ್ಮಾನ್ ಜೌಹರಿ ನೆಲ್ಯಾಡಿ ಮುಖ್ಯ ಪ್ರಭಾಷಣ ನೀಡಿದರು. ಈ ಸಂದರ್ಭ ಮೊಯಿದು ಸಹದಿ ಚೇರೂರು, ಸಿದ್ದೀಖ್ ಸಖಾಫಿ ಆವಳಂ, ಅಬ್ದುಲ್ ರಹ್ಮಾನ್ ಸಹದಿಕಬೀರ್ ಬಾಖವಿ ಸೇರಿದಂತೆ ಹಲವು ಗಣ್ಯರು ಉಪಸ್ಥರಿದ್ದರುThis post first appeared on V4news, please read the originial post: here

Share the post

ದಾರುನ್ನಜಾತ್ ಎಜುಕೇಶನ್ ಸೆಂಟರ್ ಏಳನೇ ವಾರ್ಷಿಕ ಹಾಗು ಅಜ್ಮೀರ್ ಮೌಲೀದ್ ಸಮಾರೋಪ

×

Subscribe to V4news

Get updates delivered right to your inbox!

Thank you for your subscription

×