Get Even More Visitors To Your Blog, Upgrade To A Business Listing >>

ಸಿಂಗಾಪುರ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್, ಐತಿಹಾಸಿಕ ಭಾರತೀಯರ ಫೈನಲ್‌ನಲ್ಲಿ ಪ್ರಣೀತ್‌ಗೆ ಜಯ

58208925

ಸೂಪರ್ ಸೀರಿಸ್ ಟೂರ್ನಿಯೊಂದರಲ್ಲಿ ಫೈನಲ್ ತಲುಪಿದ ಮೊದಲ ಪಂದ್ಯದಲ್ಲಿಯೇ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಬಿ. ಸಾಯಿ ಪ್ರಣೀತ್ ಸಿಂಗಾಪುರದಲ್ಲಿ ಭಾರತದ ಭರವಸೆಯ ಆಟಗಾರರಾಗಿ ಹೊರಹೊಮ್ಮಿದ್ದಾರೆ.
ಸಿಂಗಪುರ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪಂದ್ಯ ಭಾರತದ ಪಾಲಿಗೆ ಐತಿಹಾಸಿಕ ಕ್ಷಣ ಎನಿಸಿದೆ. ಬ್ಯಾಡ್ಮಿಂಟನ್ ಇತಿಹಾಸದಲ್ಲಿಯೇ ಭಾರತದ ಇಬ್ಬರು ಆಟಗಾರರು ಅಂತರರಾಷ್ಟ್ರೀಯ ಟೂರ್ನಿಯೊಂದರಲ್ಲಿ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಿದ್ದು ಇದೇ ಮೊದಲು. ಈ ವಿಭಾಗದಲ್ಲಿ ಭಾರತ ಗೆದ್ದ ಮೊದಲ ಪ್ರಶಸ್ತಿ ಕೂಡ ಇದಾಗಿದೆ. ಸೈನಾ ನೆಹ್ವಾಲ್ ೨೦೧೦ರಲ್ಲಿ ಚಾಂಪಿಯನ್ ಆಗಿದ್ದರು. ವಿಶ್ವ ರ್ಯಾಂಕಿಂಗ್ನಲ್ಲಿ ೩೦ನೇ ಸ್ಥಾನದಲ್ಲಿರುವ ಪ್ರಣೀತ್ ೧೭-೨೧, ೨೧-೧೭, ೨೧-೧೨ರಲ್ಲಿ ೨೯ನೇ?ಸ್ಥಾನದಲ್ಲಿರುವ ಕೆ. ಶ್ರೀಕಾಂತ್ಗೆ ಆಘಾತ ನೀಡಿದ್ದಾರೆ. ಇತ್ತೀಚೆಗೆ ಕೆನಡಾ ಓಪನ್ ಗೆದ್ದುಕೊಂಡಿದ್ದ ಪ್ರಣೀತ್, ಸೈಯದ್ ಮೋದಿ ಗ್ರ್ಯಾನ್ ಪ್ರಿ ಗೋಲ್ಡ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದರು.
ಟೂರ್ನಿಯ ಎಲ್ಲಾ?ಪಂದ್ಯಗಳಲ್ಲೂ ತಮ್ಮ ಅಮೋಘ ಸಾಮರ್ಥ್ಯದ ಆಟ ಪ್ರದರ್ಶಿಸಿದ್ದ ಪ್ರಣೀತ್ ಕ್ವಾರ್ಟರ್ಫೈನಲ್ನಲ್ಲಿ ಥಾಯ್ಲೆಂಡ್ನ ಎಂಟನೇ?ಶ್ರೇಯಾಂಕದ ಆಟಗಾರ ತೊಂಗ್ಸಕ್ ಸೆನ್ಸೊಬೂನ್ಸಕ್ ಅವರನ್ನು ಮಣಿಸಿದ್ದರು. ಸೆಮಿಫೈನಲ್ನಲ್ಲಿ ೨೧-೬, ೨೧-೮ರಲ್ಲಿ ದಕ್ಷಿಣ ಕೊರಿಯಾದ ಲೀ ಡಾಂಗ್ ಕೊಯೆನ್ಗೆ ಆಘಾತ ನೀಡಿದ್ದರು. ಶ್ರೀಕಾಂತ್ ಹಾಗೂ ಪ್ರಣೀತ್ ಇಬ್ಬರೂ ಫೈನಲ್ ತಲುಪಿದ್ದು ಹೆಮ್ಮೆ ಎನಿಸಿತು. ಇದು ದೊಡ್ಡ ಟೂರ್ನಿ. ಪ್ರಣೀತ್ ಯುವ ಆಟಗಾರ. ಅವರಿಗೆ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಳ್ಳಲು ಮುಂದಿನ ಟೂರ್ನಿಗಳಲ್ಲಿ ಸಾಕಷ್ಟು ಅವಕಾಶ ಇದೆ ಎಂದು ರಾಷ್ಟ್ರೀಯ ತಂಡದ ಕೋಚ್ ಪುಲ್ಲೇಲ ಗೋಪಿಚಂದ್ ಹೇಳಿದ್ದಾರೆ.



This post first appeared on V4news, please read the originial post: here

Share the post

ಸಿಂಗಾಪುರ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್, ಐತಿಹಾಸಿಕ ಭಾರತೀಯರ ಫೈನಲ್‌ನಲ್ಲಿ ಪ್ರಣೀತ್‌ಗೆ ಜಯ

×

Subscribe to V4news

Get updates delivered right to your inbox!

Thank you for your subscription

×