Get Even More Visitors To Your Blog, Upgrade To A Business Listing >>

ಏಳು ಕೊಪ್ಪದಲ್ಲಿದ್ದರೆ ಏಳು ಕೊರಪಳರು? ಏಪ್ರಿಲ್ ೧೫ರಂದು ಮಂಗಳೂರಿನಲ್ಲಿ ನಡೆದ ಸಂವಾದ

p2080044

jaru
ಪೇರೂರಿನ ತುಳು ಧರ್ಮ ಸಂಶೋಧನಾ ಕೇಂದ್ರವು ಏಪ್ರಿಲ್ ೧೫ರ ಶನಿವಾರ ಸಂಜೆ ೪ ಗಂಟೆಗೆ ಡಾನ್ ಬಾಸ್ಕೋ ಮಿನಿ ಹಾಲ್‌ನಲ್ಲಿ ಏಳು ಕೊಪ್ಪದಲ್ಲಿದ್ದರೆ ಏಳು ಕೊರಪಳರು? ಎಂಬ ತುಳು ಸಂವಾದವನ್ನು ನಡೆಸಿಕೊಟ್ಟಿತು.
ತುಧಸಂಕೇಂ ಸಂಚಾಲಕ ಪೇರೂರು ಜಾರು ಮಾತನಾಡಿ, ಗೋಕುಲ್‌ದಾಸ್‌ರಿಂದ ಹಿಡಿದು ಹಲವು ಕೊರಗ ಜನಾಂಗದ ಹಿರಿಯರನ್ನು ಕಂಡು ಮಾತನಾಡಿದರೂ ಒಂದೇ ಉತ್ತರ, ಏಳು ಕೊರಪಳು ಎಂಬ ಪ್ರಸ್ತಾಪ ನಮ್ಮ ಜಾತಿಯಲ್ಲಿ ಇಲ್ಲ ಎಂಬುದಾಗಿದೆ. ಕೊರಗ ತನಿಯ ಪಾಡ್ದನ ಮತ್ತು ಕೆಲವು ತುಳು ಜನಪದಗಳಲ್ಲಿ ಏಳು ಕೊಪ್ಪದ ಸಂಗತಿ ಬರುತ್ತದೆ. ಆದರೆ ಅಲ್ಲೆಲ್ಲೂ ಏಳು ಕೊರಪಳು ವಿಚಾರವಿಲ್ಲ. ಕೊರಗ ಕೊರಪಳು ಎನ್ನುವುದು ತುಳುವರಲ್ಲಿ ಹಿಂದೆ ಸಾಮಾನ್ಯವಾಗಿದ್ದ ಹೆಸರು. ಕೊರಪಳು ಎಂದರೆ ಕೊರಗ ಮಹಿಳೆಯ ಮಡಿಲಿಗೆ ಮಗುವನ್ನು ಹಾಕಿ ಅವರಿಂದಲೇ ಇಂಥ ಹೆಸರು ಇಡಿಸುತ್ತಿದ್ದುದೂ ಇತ್ತು. ಇಂದು ತುಳುವರ ಬೇರೆ ಜಾತಿ ಬಿಡಿ ಕೊರಗ ಜನಾಂಗದಲ್ಲೇ ಆ ರೀತಿ ಉಲ್ಲೇಖ ಕಡಿಮೆಯಾಗಿದೆ. ಕುಡ್ಲದಂಚಿನಲ್ಲಿ ಕೆಲವರ ಚಿತಾವಣೆಯಿಂದ ಎದ್ದ ಏಳು ಕೊರಪಳು ಕೋಲ ಆಮೇಲೆ ಏಳು ಶಕ್ತಿ ಕೋಲವಾಗಿ ಇದ್ದುಳ್ಳವರ, ಸ್ಥಳೀಯತೆ ಕೊಲ್ಲುವವರ ನಾಟಕವಾಗಿ ಪರಿಣಮಿಸಿತು. ಪ್ರಕಟಣೆಯಲ್ಲಿ ಕಪ್ಪು ನಾಯಕಿಯರನ್ನು ಚಿತ್ರಿಸಿ ಒಂದೆರಡು ದಿನದಲ್ಲಿ ಬಿಳಿ ಮೇಕಪ್‌ನಲ್ಲಿ ಕೋಲ ನಡೆಸಿ ಮುಗಿಸಿದ್ದು, ವಯ್ದಿಕರು ಎಷ್ಟು ಬೇಗ ಕತೆ ತಿರುಚಬಲ್ಲರು ಮತ್ತು ಬಣ್ಣ ಸಹಿತ ಮತಾಂತರ ಮಾಡಬಲ್ಲರು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಕಲ್ಲು ವಿಚಾರಕ್ಕೆ ಬಂದರೆ ಕೊರಗ ಜನಾಂಗದಲ್ಲಿ ಎಲ್ಲ ಶುಭ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮಂಜ ಇದೆಯೇ ಹೊರತು ಕೊರಪಳು ಕಲ್ಲು ಇಲ್ಲ. ಭಾರತದಲ್ಲಿ ೬೭ ಜನಾಂಗಗಳು ಅದರಲ್ಲೂ ಜಾರ್‌ವಾ, ಸೆಂಟಿನಲ್, ಗ್ರೇಟ್ ಅಂಡಮಾನಿ, ತೋಡ, ಕೊರಗ ಬುಡಕಟ್ಟು ಜನರ ಸಂಖ್ಯೆಯು ಪ್ರತಿದಿನ ಕಡಿಮೆಯಾಗುತ್ತಿರುವುದು, ಭಾರತದ ಅಳಿವಿನಪಾಯದ ಜನಾಂಗವೆಂದು ಸೂಚಿಸಿರುವುದು ವಿವೇಚಿಸಬೇಕಾದ ಸಂಗತಿಯಾಗಿದೆ. ಕೋಲ ತಂಬಿಲವೆಲ್ಲ ಆ ಸಮಸ್ಯೆಗೆ ಪರಿಹಾರವಲ್ಲ; ಸರಕಾರಗಳು ಸಮಗ್ರ ಮಾಹಿತಿಯೊಡನೆ ಸಮಾಜ ಕಲ್ಯಾಣಕ್ಕಿಳಿಯಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಡಾ. ವಾಸುದೇವ ಬೆಳ್ಳೆಮಾತನಾಡಿ ಕೋಲವೆಂಬ ನಂಬಿಕೆಯನ್ನು ಇವರು ಬೇಕಾದಂತೆ ತಿರುಚುವ ನಾಟಕ ಕಂಪೆನಿ ಮಾಡಿದರೆ ಎಂದು ಪ್ರಶ್ನಿಸಿದ್ದಲ್ಲದೆ ಕೊರಗ ತನಿಯ ಪಾಡ್ದನದಲ್ಲಿ ಆತನು ಏಳು ಜನರ ಕೆಲಸ ಮಾಡಿದ ಉಲ್ಲೇಖವಿದೆಯೇ ಹೊರತು ಏಳು ಕೊರಪಳುಗಳದ್ದಲ್ಲ. ಮತ್ತಾಡಿ ನಾಯರ್‌ಪಲ್ಕೆ ಮಾತನಾಡಿ, ಈ ನಿಟ್ಟಿನಲ್ಲಿ ಇನ್ನಷ್ಟು ಸಂಘಟಿತ ಹೋರಾಟ ಆಗಬೇಕು, ನಮ್ಮ ದೂರನ್ನು ಜಿಲ್ಲಾಡಳಿತ ಮನ್ನಿಸಿದರೂ ಕೋಲವು ಕೆಲವು ಒಪ್ಪಂದ ಮುರಿದು ನಡೆದಿದೆ ಎಂದರು. ಎಂ. ಸುಂದರ ಮಾತನಾಡಿ ಇನೋಳಿ ಸುಂದರ, ಕುತ್ತಾರ್ ರಘು, ಕೆ. ಕೆ. ಪೇಜಾವರ ಎಂಬ ದಲಿತರು ಇದರ ಹಿಂದೆ ಇದ್ದರೆ ಕೆಲವರು ಇದರ ಮೂಲಕ ಕಪ್ಪು ಹಣ ಬಿಳಿ ಮಾಡಿದರು ಎಂದರು. ಪ್ರವೀಣ್ ಶೆಟ್ಟಿ, ಕ್ರಿಷ್ಣಾನಂದ ಡಿ; ರಮೇಶ್ ಗುಂಡವುಪದವು, ಕುಡುಪ ಸಚ್ಚರಿಪೇಟೆ, ಕೊಗ್ಗ, ಸುಮಧುರ ಮೊದಲಾದವರು ತಮ್ಮ ಅಭಿಪ್ರಾಯ ತಿಳಿಸಿದರು.This post first appeared on V4news, please read the originial post: here

Share the post

ಏಳು ಕೊಪ್ಪದಲ್ಲಿದ್ದರೆ ಏಳು ಕೊರಪಳರು? ಏಪ್ರಿಲ್ ೧೫ರಂದು ಮಂಗಳೂರಿನಲ್ಲಿ ನಡೆದ ಸಂವಾದ

×

Subscribe to V4news

Get updates delivered right to your inbox!

Thank you for your subscription

×