Get Even More Visitors To Your Blog, Upgrade To A Business Listing >>

೨.೫ ಲಕ್ಷ ಮೀಟರ್ ಸಾಮರ್ಥ್ಯದ ಹಾಲಿನ ಡೇರಿ, ಉಪ್ಪೂರಿನಲ್ಲಿ ಕಚೇರಿ ಸಂಕೀರ್ಣಕ್ಕೆ ಶಂಕುಸ್ಥಾಪನೆ

dairy

dairyu
ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮದಲ್ಲಿ ನೂತನವಾಗಿ ೨.೫ ಲಕ್ಷ ಲೀಟರ್ ಸಾಮರ್ಥ್ಯದ ಹಾಲಿನ ಡೇರಿ ಮತ್ತು ಆಡಳಿತ ಕಚೇರಿ ಸಂಕೀರ್ಣ ನಿರ್ಮಾಣವಾಗಲಿದ್ದು ಇದಕ್ಕೆ ಇಂದು ಸಂಸದೆ, ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.
ಮಣಿಪಾಲ ವಲಯವು ಉಡುಪಿ ಜಿಲ್ಲೆಯ ವ್ಯಾಪ್ತಿ ಹೊಂದಿರುವ ೯೫ ಹಾಲು ಉತ್ಪಾದಕರ ಮಹಿಳಾ ಸಂಘ ಸೇರಿದಂತೆ ಒಟ್ಟು ೩೨೬ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು ೧೭ ಹಾಲು ಸಂಗ್ರಹಣಾ ಮಾರ್ಗಗಳು ಮತ್ತು ೪೦ ಬಿ.ಎಂ.ಸಿ. ಕೇಂದ್ರಗಳ ಮೂಲಕ ದಿನವಾಹೀ ಸರಾಸರಿ ೧.೮೭ ಲಕ್ಷ ಲೀ ಹಾಲು ಸಂಗ್ರಹಣೆಯಾಗುತ್ತಿದೆ. ಬೇಡಿಕೆ ಜಾಸ್ತಿ ಇರುವ ಹಿನ್ನಲೆಯಲ್ಲಿ ಈಗಿರುವ ಮಣಿಪಾಲದಲ್ಲಿ ಅನೇಕ ಅಡೆತಡೆಯ ಕಾರಣ ಉಪ್ಪೂರಿನಲ್ಲಿ ೫.೯ ಎಕ್ರೆ ಜಾಗದಲ್ಲಿ ಸುಮಾರು ೯೨ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿ ವತಿಯಿಂದ ಟರ್ನ್ ಕೀ ಆಧಾರದಲ್ಲಿ ೨.೫ ಲಕ್ಷ ಲೀ. ಸಾಮರ್ಥ್ಯದ ಈ ಡೇರಿ ನಿರ್ಮಾಣಕ್ಕೆ ಮುಂದಾಗಿದ್ದು ಇಂದು ಈ ಡೇರಿಗೆ ಸಂಸದೆ ಶೋಭಾ ಕರಂದ್ಲಾಜೆ ಶಂಕು ಸ್ಥಾಪನೆ ನೆರವೇರಿಸಿದರು. ಸಚಿವ ಪ್ರಮೋದ್ ಮದ್ವರಾಜ್ ಆಡಖಿತ ಕಚೇರಿಗೆ ಶಂಕು ಸ್ಥಾಪನೆ ಹಾಗೂ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಬರದ ಪರಿಸ್ಥಿತಿಯ ಹಿನ್ನಲೆಯಲ್ಲಿ ರೈತ ಕಂಗೆಟ್ಟಿದ್ದಾನೆ. ಕರಾವಳಿಯಲ್ಲಿ ಬರದ ನಡುವೆಯೂ ಹೈನುಗಾರಿಕೆ ಮತ್ತು ಮೀನುಗಾರಿಕೆಯಿಂದ ಜೀವನ ಸಾಧ್ಯ. ಅದೆಷ್ಟೋ ಜನರಿಗೆ ಹೈನುಗಾರಿಕೆ ಕೈ ಹಿಡಿದಿದೆ ಎಂದರು.
ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಸಿದ್ದರಾಮಯ್ಯ ಸರ್ಕಾರ ಹಾಲಿನ ಪ್ರೋತ್ಸಾಹ ಧನವನ್ನು ೫ ರೂಗೆ ಏರಿಸಿದ್ದು ಮಾತ್ರವಲ್ಲದೇ ಬ್ಯಾಂಕ್ ಖಾತೆಯ ಮೂಲಕ ಯಾರಿಗೆ ಪ್ರೋತ್ಸಾಹ ಧನ ಸಿಗಬೇಕೋ ಅವರಿಗೇ ಸಿಗುವಂತೆ ಮಾಡಿದ್ದಾರೆ. ಉಡುಪಿ ಜಿಲ್ಲೆಗೆನೇ ೨೧ ಕೋಟಿಯಷ್ಟು ಸಬ್ಸಿಡಿ ಈ ಹಾಲಿನ ಮೂಲಕ ರೈತರಿಗೆ ಸಿಗುತ್ತಿದೆ. ಎಪ್ರಿಲ್ ತಿಂಗಳಲ್ಲಿ ಸಬ್ಸಿಡಿ ಹಣ ಸಿಗಲಿದೆ ಎಂದರು. ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಜಿಪಂ ಅದ್ಯಕ್ಷ ದಿನಕರ್ ಬಾಬು, ಉಪಾದ್ಯಕ್ಷೆ ಶೀಲಾ ಶೆಟ್ಟಿ, ತಾಪಂ ಅದ್ಯಕ್ಷೆ ನಳಿನಿ ಪ್ರದೀಪ್ ರಾವ್, ದಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.



This post first appeared on V4news, please read the originial post: here

Share the post

೨.೫ ಲಕ್ಷ ಮೀಟರ್ ಸಾಮರ್ಥ್ಯದ ಹಾಲಿನ ಡೇರಿ, ಉಪ್ಪೂರಿನಲ್ಲಿ ಕಚೇರಿ ಸಂಕೀರ್ಣಕ್ಕೆ ಶಂಕುಸ್ಥಾಪನೆ

×

Subscribe to V4news

Get updates delivered right to your inbox!

Thank you for your subscription

×