Get Even More Visitors To Your Blog, Upgrade To A Business Listing >>

ಕೇಪು-ಮೈರ ಶ್ರೀ ದುರ್ಗಾ ಮಿತ್ರ ವೃಂದದ ವಾರ್ಷಿಕೋತ್ಸವ, ಸಾಧನೆಗೈದವರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ

vlcsnap-2017-04-16-16h18m42s108-copy

ವಿಟ್ಲದ ಕೇಪು ಗ್ರಾಮದ ಮೈರ ದುರ್ಗಾ ರಂಗ ಮಂದಿರದಲ್ಲಿ ಕೇಪು-ಮೈರ ಶ್ರೀ ದುರ್ಗಾ ಮಿತ್ರ ವೃಂದದ ವಾರ್ಷಿಕೋತ್ಸವ, ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದವರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭ ಸುಮಾರು 30 ವರ್ಷಗಳ ಕಾಲ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ, ಮಾಜಿ ಅಧ್ಯಕ್ಷ, ಸಹಕಾರಿ ಧುರೀಣ, ಧಾರ್ಮಿಕ ಮುಖಂಡ ಶ್ರೀನಿವಾಸ ರೈ ಕುಂಡಕೋಳಿ ಅವರನ್ನು ಸಮ್ಮಾನಿಸಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ಹರ್ಷಿತಾ ಅವರಿಗೆ ಸಂಘದ ವತಿಯಿಂದ 10800 ರೂ.ಗಳ ಧನಸಹಾಯ ಮಾಡಲಾಯಿತು. ಇದೇ ಸಮದರ್ಭ ಕೇಪು ಗ್ರಾಮದ ಪ್ರತಿಭಾನ್ವಿತರಾದ ಶ್ರೇಯ ಬಿ., ಚರಣ್ ಡಿ.ಎಸ್., ಶ್ರೀಪ್ರಿಯ ಕೆ., ಶ್ರಾವ್ಯಾ, ಚೈತ್ರಾ ಕೆ.ಟಿ., ವಿನಯಶಂಕರ ಉಪಾಧ್ಯಾಯ, ಸುಶ್ಮಿತಾ ಕೆ., ಭರತ್ ಎ.ಕೆ., ದೀಕ್ಷಾ ಜೋಗಿ, ಗಾಯತ್ರಿ ಕೆ.ಎಸ್., ಶಿವಪ್ರಸಾದ್, ಕ್ಷಿತಿಜ್ ರೈ ಕೆ., ಶ್ರುತಿ ಕೆ.ಆರ್., ತೇಜಸ್ ಎ.ಕೆ., ಪ್ರತೀಕ್, ಅಭಿಷೇಕ್ ಎಂ., ಯಶಸ್, ಬಿಪಿನ್ ಕೆ., ಪವನ್ ಕುಮಾರ್ ಕೆ.ಎಸ್., ಅವರನ್ನು ಪುರಸ್ಕರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪುತ್ತೂರು ಶಂಕರ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಸತ್ಯಶಂಕರ ಭಟ್ ಅವರು ಮಾತನಾಡಿ ಉನ್ನತವಾದ ಗುರಿ ಒಂದೇ ಇರಲಿ ಮತ್ತು ಹಲವು ಗುರಿಗಳನ್ನು ಇರಿಸಿ, ಮುನ್ನಡೆದಾಗ ಯಶಸ್ವಿಯಾಗಲು ಅಸಾಧ್ಯ. ಅನಾರೋಗ್ಯದಿಂದ ಬಳಲುತ್ತಿರುವ ಹರ್ಷಿತಾ ಅವರಿಗೆ ಕಂಪ್ಯೂಟರ್ ನೀಡುವುದಾಗಿ ಅವರು ಭರವಸೆ ನೀಡಿದರು.ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಘು ಟಿ.ವೈ, ಕೇಪು ಗ್ರಾ.ಪಂ.ಅಧ್ಯಕ್ಷ ಕೆ.ತಾರಾನಾಥ ಆಳ್ವ ಮದಕ, ಪುರೋಹಿತ ಬಾಲಕೃಷ್ಣ ಕಾರಂತ ಎರುಂಬು, ಕೇಪು ಗ್ರಾ.ಪಂ.ಸದಸ್ಯರಾದ ನಿರಂಜನ ಕಲ್ಲಪಾಪು, ದಿವ್ಯಾ ಮೈರ, ವೃಂದದ ಅಧ್ಯಕ್ಷ ಅಶೋಕ ಎ. ಇರಾಮೂಲೆ, ವೃಂದದ ಗೌರವಾಧ್ಯಕ್ಷ ಜಗಜ್ಜೀವನ್ ರಾಮ್ ಶೆಟ್ಟಿ, ಉಪಾಧ್ಯಕ್ಷ ಪುರುಷೋತ್ತಮ ಗೌಡ ಕಲ್ಲಂಗಳ, ಗಿರೀಶ್ ಕಲ್ಲಪಾಪು, ಉಮೇಶ್ ಕಲ್ಲಪಾಪು, ಜತೆಕಾರ್ಯದರ್ಶಿ ರಾಜೇಶ್ ಮೈರ, ಸತೀಶ್ ಕೇಪು, ದೀಕ್ಷಿತ್ ಮೈರ, ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕರವೀರ, ಸೇಸಪ್ಪ ಮಾಸ್ಟರ್ ಕಲ್ಲಪಾಪು, ಅಶೋಕ ಕರವೀರ, ಸಂಘಟನ ಕಾರ್ಯದರ್ಶಿ ಬಾಲಕೃಷ್ಣ ಪೆಲತ್ತಡಿ ಕೇಪು, ಭರತ್ ಮೈರ, ಬಾಲಕೃಷ್ಣ ಮೈರ, ಮಿಥುನ್ ಮೈರ, ರಘುನಾಥ ಮೈರ, ಸಿದ್ಧೀಕ್ ಸಿ.ಎಂ., ಚಿದಾನಂದ, ಶೈಲೇಶ್ ಅಮೈ, ಪದ್ಮನಾಭ ಕಲ್ಲಂಗಳ, ಭರತ್ ಎ.ಕೆ., ಸಂದೇಶ್, ಶ್ರೇಯಸ್, ಪ್ರವೀಣ ಶೆಟ್ಟಿ, ಮಾಧವ ಮೈರ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ರೂಪೇಶ್ ರೈ ಅಳಿಕೆಗುತ್ತು, ಗೋವಿಂದರಾಯ ಶೆಣೈ ಅಡ್ಯನಡ್ಕ, ಪ್ರಕಾಶ್ ಶೆಟ್ಟಿ ಕಲ್ಲಂಗಳಗುತ್ತು, ರಾಮಚಂದ್ರ ಉಳಯ, ರಾಜಶೇಖರ ರೈ ತಾಳಿಪಡ್ಪು, ವಿಜಯ ಕುಮಾರ್ ಮಂಗಳೂರು, ಮೋನಪ್ಪ ಕುಲಾಲ್, ಪ್ರಧಾನ ಕಾರ್ಯದರ್ಶಿ ಶೀನ ನಾಯ್ಕ ಕಲ್ಲಪಾಪು, ಕೋಶಾಧಿಕಾರಿ ಪುರುಷೋತ್ತಮ್ ಮೈರ, ಮಹಮ್ಮದ್‌ಹಾರೀಸ್ ಮೈರ ಪ್ರತಿಭಾನ್ವಿತರ, ತೇಜಸ್ ಎ.ಕೆ.ಆಶಯಗೀತೆ, ಉಪಾಧ್ಯಕ್ಷ ರಾಜೇಶ್ ಕರವೀರ ವಂದಿಸಿದರು. ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ, ಸುರೇಶ್ ಕೋಡಂದೂರು ಉಪಸ್ಥಿತರಿದ್ದರು.
ಬೆಳಗ್ಗೆ ಧ್ವಜಾರೋಹಣ, ಗಣಪತಿ ಹವನ, ರಾತ್ರಿ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ದುರ್ಗಾ ಕಲಾ ತಂಡದ ಪುಗರ್ತೆ ಕಲಾವಿದರಿಂದ ಎಲ್ಯಣ್ಣೆ ಎಂಬ ನಾಟಕ ಪ್ರದರ್ಶನ ಮತ್ತು ಶಾರದಾ ಕಲಾ ಆರ್ಟ್ಸ್ ಅವರಿಂದ ಸುದ್ದಿ ತಿಕ್ಕ್ಂಡ ಎಂಬ ನಾಟಕ ಪ್ರದರ್ಶನವಿತ್ತು.This post first appeared on V4news, please read the originial post: here

Share the post

ಕೇಪು-ಮೈರ ಶ್ರೀ ದುರ್ಗಾ ಮಿತ್ರ ವೃಂದದ ವಾರ್ಷಿಕೋತ್ಸವ, ಸಾಧನೆಗೈದವರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ

×

Subscribe to V4news

Get updates delivered right to your inbox!

Thank you for your subscription

×