Get Even More Visitors To Your Blog, Upgrade To A Business Listing >>

ಏಶಿಯನ್ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್, ಏಳನೆ ಬಾರಿ ಮತ್ತೊಮ್ಮೆ ಗೆದ್ದ ಪಂಕಜ್ ಅಡ್ವಾಣಿ

46341-jgpvonfzep-1480328560

ಹದಿನಾರು ಬಾರಿ ವಿಶ್ವ ಚಾಂಪಿಯನ್ಷಿಪ್ ಗೆದ್ದಿರುವ ಪಂಕಜ್ ಅಡ್ವಾಣಿ ಅವರ ಮುಡಿಗೆ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ ಪ್ರಶಸ್ತಿ ಸೇರಿಕೊಂಡಿತು.
ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಪಂಕಜ್ ೬-೩ ಫ್ರೇಮ್ಗಳಲ್ಲಿ ಭಾರತದವರೇ ಆದ ಸೌರವ್ ಕೊಠಾರಿ ಅವರನ್ನು ಮಣಿಸುವ ಮೂಲಕ ಇಲ್ಲಿ ಆರನೇ?ಪ್ರಶಸ್ತಿ ಗೆದ್ದುಕೊಂಡ ಸಂಭ್ರಮ ಆಚರಿಸಿದರು. ಒಟ್ಟಾರೆ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಪಂಕಜ್ ಗೆದ್ದ ಏಳನೇ ಪ್ರಶಸ್ತಿ ಇದಾಗಿದೆ. ಹೋದ ವರ್ಷ ೬ ರೆಡ್ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಅವರು ಚಾಂಪಿಯನ್ ಆಗಿದ್ದರು. ಮಧ್ಯಂತರದ ವೇಳೆಗೆ ಕೊಠಾರಿ ೩-೧ರಲ್ಲಿ ಮುನ್ನಡೆ ಸಾಧಿಸಿದ್ದರು. ವಿರಾಮ ದ ಬಳಿಕ ಅಡ್ವಾಣಿ ಪಂದ್ಯದ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆಯುವ ಮೂಲಕ ಆಡಿದ ಐದೂ ಫ್ರೇಮ್ಗಳನ್ನು ರೋಚಕವಾಗಿ ಗೆದ್ದರು.
ಏಳನೇ ಬಾರಿ ಸ್ವರ್ಗಕ್ಕೆ ಕಾಲಿಟ್ಟ ಅನುಭವ ಆಗುತ್ತಿದೆ. ಏಕೆಂದರೆ ಏಳು ಬಾರಿ ಇಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದೇನೆ. ಐದು ವರ್ಷಗಳ ಬಳಿಕ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ ಜಯಿಸಿದ್ದೇನೆ. ಇದು ಫಾರ್ಮ್ಗೆ ಮರಳಿ ನೀಡಿದ ಪ್ರದರ್ಶನ ಎನಿಸಿತು. ಐದೂ ಫ್ರೇಮ್ಗಳನ್ನು ಒಟ್ಟಿಗೆ ಗೆದ್ದುಕೊಂಡಿದ್ದು ಅಪೂರ್ವ ಅನುಭವ ನೀಡಿತು ಎಂದು ಅಡ್ವಾಣಿ ಹೇಳಿದ್ದಾರೆ. ಏಪ್ರಿಲ್ ೨೨ರಿಂದ ದೋಹಾದಲ್ಲಿ ನಡೆಯುವ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಅಡ್ವಾಣಿ ಸ್ಪರ್ಧಿಸಲಿದ್ದಾರೆ.This post first appeared on V4news, please read the originial post: here

Share the post

ಏಶಿಯನ್ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್, ಏಳನೆ ಬಾರಿ ಮತ್ತೊಮ್ಮೆ ಗೆದ್ದ ಪಂಕಜ್ ಅಡ್ವಾಣಿ

×

Subscribe to V4news

Get updates delivered right to your inbox!

Thank you for your subscription

×