Get Even More Visitors To Your Blog, Upgrade To A Business Listing >>

ನೂರಹನ್ನೊಂದು ದೇಶಗಳ ಆರುನೂರು ಅತಿಥಿಗಳು, ಉಪಾಹಾರ ನೀಡಿ ಗಿನ್ನೆಸ್ ದಾಖಲೆ ಮಾಡಿದ ದುಬಾಯಿ ಗುರುದ್ವಾರ

581989-india-vs-pakistan-fans-getty

ಒಂದೇ ಜಾಗದಲ್ಲಿ ಅತಿ ಹೆಚ್ಚು ರಾಷ್ಟ್ರಗಳ ಜನರಿಗೆ ಉಪಾಹಾರ ನೀಡುವ ಮೂಲಕ ದುಬೈನ ಗುರುದ್ವಾರವೊಂದು ಗಿನ್ನಿಸ್ ದಾಖಲೆ ನಿರ್ಮಿಸಿದೆ.
ಇಲ್ಲಿನ ಗುರುನಾನಕ್ ದರ್ಬಾರ್ ಗುರುದ್ವಾರಾದಲ್ಲಿ ೧೦೧ ರಾಷ್ಟ್ರಗಳ ೬೦೦ ಮಂದಿಗೆ ಗುರುವಾರ ವಿವಿಧತೆಗಾಗಿ ಉಪಾಹಾರ ಬ್ರೇಕ್ಫಾಸ್ಟ್ ಫಾರ್ ಡೈವರ್ಸಿಟಿ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಲಾಯಿತು ಎಂದು ಖಲೀಜ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಶಾಲಾ ಮಕ್ಕಳು, ವಿವಿಧ ಇಲಾಖೆಗಳ ಅಧಿಕಾರಿಗಳು, ರಾಜತಾಂತ್ರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಯು‌ಎ‌ಇಯಲ್ಲಿರುವ ಭಾರತೀಯ ರಾಯಭಾರಿ ನವದೀಪ್ ಸಿಂಗ್ ಸೂರಿ ಮುಖ್ಯ ಅತಿಥಿಯಾಗಿದ್ದರು.
೨೦೧೫ರಲ್ಲಿ ಇಟಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ೫೫ ರಾಷ್ಟ್ರಗಳ ಪ್ರತಿನಿಧಿಗಳು ಉಪಾಹಾರ ಸೇವಿಸಿದ್ದು ಈವರೆಗಿನ ದಾಖಲೆಯಾಗಿತ್ತು ಎಂದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಪ್ರತಿನಿಧಿಗಳು ತಿಳಿಸಿದ್ದಾರೆ. ಇಲ್ಲಿಯ ಗುರುದ್ವಾರಾ ಸಮಿತಿ ಹಲವು ವರ್ಷಗಳಿಂದ ಸ್ವಾರ್ಥರಹಿತ ಸೇವೆ ಮಾಡುತ್ತಿದೆ. ಈಗ ಹೊಸದಾಖಲೆ ನಿರ್ಮಿಸಿರುವುದು ಸಂತಸ ತಂದಿದೆ ಎಂದು ಸಮಿತಿ ಅಧ್ಯಕ್ಷ ಸುರೇಂದ್ರ ಕಂದಹಾರಿ ಹೇಳಿದ್ದಾರೆ.



This post first appeared on V4news, please read the originial post: here

Share the post

ನೂರಹನ್ನೊಂದು ದೇಶಗಳ ಆರುನೂರು ಅತಿಥಿಗಳು, ಉಪಾಹಾರ ನೀಡಿ ಗಿನ್ನೆಸ್ ದಾಖಲೆ ಮಾಡಿದ ದುಬಾಯಿ ಗುರುದ್ವಾರ

×

Subscribe to V4news

Get updates delivered right to your inbox!

Thank you for your subscription

×