Get Even More Visitors To Your Blog, Upgrade To A Business Listing >>

ಮತ ಚಲಾಯಿಸಿ ಬರುತ್ತಿದ್ದ ಯುವಕನನ್ನು ಜೀಪಿಗೆ ಕಟ್ಟಿದ ಮಿಲಿಟರಿ, ಕಾಶ್ಮೀರದ ಬಿರ್ವಾದಲ್ಲಿ ಕಲ್ಲೆಸೆತ ತಡೆಯಲು ಮಾನವ ಗುರಾಣಿಯಂತೆ ಬಳಕೆ

Tags: agravesup

klkdjkd-nataiiv

ಸೇನಾ ವಾಹನಗಳ ಮೇಲೆ ಕಲ್ಲು ತೂರಾಟ ನಡೆಯುವುದನ್ನು ತಡೆಯಲು ಯುವಕನನ್ನು ವಾಹನದ ಮುಂಭಾಗದಲ್ಲಿ ಕಟ್ಟಿ ಕರೆದೊಯ್ದಿರುವ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಬಹಿರಂಗಗೊಂಡಿದೆ.
ಜಮ್ಮು ಮತ್ತು ಕಾಶ್ಮೀರದ ಬಡ್ಗಾಂವ್ ಜಿಲ್ಲೆಯ ಬೀರ್ವ್ಹಾದ ಗುಂಡಿಪೊರ ಗ್ರಾಮದಲ್ಲಿ ಯುವಕನನ್ನು ಮಾನವ ರಕ್ಷಣಾ ಕವಚದಂತೆ ಬಳಸಿರುವ ವಿಡಿಯೊವನ್ನು ಬೀರ್ವ್ಹಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಟ್ವಿಟರ್ನಲ್ಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ತುರ್ತು ಕ್ರಮ ಅಗತ್ಯ ಎಂಬ ಶೀರ್ಷಿಕೆಯಲ್ಲಿ ಇದನ್ನು ಪ್ರಕಟಿಸಿದ್ದಾರೆ. ಸೈನಿಕರ ಮೇಲೆ ಯುವಕರು ಕಲ್ಲೆಸೆಯುವುದನ್ನು ತಡೆಯಲು ಈ ರೀತಿ ಮಾಡಲಾಗಿದೆ. ಸಿ‌ಆರ್ಪಿ‌ಎಫ್ ಯೋಧರ ಮೇಲೆ ಪ್ರತಿಭಟನಕಾರರು ನಡೆಸಿದ ದಾಳಿಗೆ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಯಿತು. ಅದೇ ರೀತಿಯ ಸಿಟ್ಟು ಈ ಕೃತ್ಯಕ್ಕೆ ಏಕೆ ವ್ಯಕ್ತವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದು, ಈ ಬಗ್ಗೆ ವಿಸ್ತೃತ ತನಿಖೆಗೆ ಅವರು ಒತ್ತಾಯಿಸಿದರು.
ಆನ್ಲೈನ್ನಲ್ಲಿರುವ ವಿಡಿಯೊ ಪರಿಶೀಲಿಸಲಾಗುತ್ತಿದ್ದು, ತನಿಖೆಗೆ ಸೂಚಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ. ಜೀಪಿನಲ್ಲಿ ಕಟ್ಟಿ ಕರೆದೊಯ್ದ ಯುವಕನನ್ನು ಬಡ್ಗಾಂವ್ ಜಿಲ್ಲೆಯ ಖಾಗ್ ತಾಲ್ಲೂಕಿನ ಶಿತಾಹರನ್ ಗ್ರಾಮದ ಫಾರೂಕ್ ದಾರ್ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ರೈಫಲ್ಸ್ನ ೫೩ನೇ ತುಕಡಿಯ ಸೈನಿಕರು ಈ ರೀತಿ ಮಾಡಿದ್ದಾರೆ ಎಂದು ತನಿಖೆ ವೇಳೆ ಗೊತ್ತಾಗಿದೆ. ಮತ ಚಲಾಯಿಸಿ, ಸಹೋದರಿಯ ಮನೆಗೆ ತೆರಳುತ್ತಿದ್ದ ಫಾರೂಕ್ನನ್ನು ಬೀರ್ವ್ಹಾ ಗ್ರಾಮದ ಮತಗಟ್ಟೆಗೆ ಸೇನಾಧಿಕಾರಿಗಳು ರಕ್ಷಣಾಕವಚವಾಗಿ ಬಳಸಿಕೊಂಡರು. ೧೦ರಿಂದ ೧೨ ಗ್ರಾಮಗಳಿಗೆ ಕರೆದೊಯ್ದುನಂತರ ಅವರನ್ನು ಬಿಡಲಾಗಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.This post first appeared on V4news, please read the originial post: here

Share the post

ಮತ ಚಲಾಯಿಸಿ ಬರುತ್ತಿದ್ದ ಯುವಕನನ್ನು ಜೀಪಿಗೆ ಕಟ್ಟಿದ ಮಿಲಿಟರಿ, ಕಾಶ್ಮೀರದ ಬಿರ್ವಾದಲ್ಲಿ ಕಲ್ಲೆಸೆತ ತಡೆಯಲು ಮಾನವ ಗುರಾಣಿಯಂತೆ ಬಳಕೆ

×

Subscribe to V4news

Get updates delivered right to your inbox!

Thank you for your subscription

×