Get Even More Visitors To Your Blog, Upgrade To A Business Listing >>

ನಮ್ಮ ಭೂಮಿ ನಮ್ಮ ಹಕ್ಕು ರಥಯಾತ್ರೆ, ಕುಂದಾಪುರದ ಶಾಸ್ತ್ರೀ ವೃತ್ತದಿಂದ ಎಸಿ ಶಿಲ್ಪಾನಾಗ್‌ರಿಂದ ಚಾಲನೆ

ambedkar

ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನೆನಪಿನಲ್ಲಿ ನಮ್ಮ ಭೂಮಿ ನಮ್ಮ ಹಕ್ಕು ಅಭಿಯಾನದಡಿಯಲ್ಲಿ ಜಯ ಭೀಮ್ ರ್‍ಯಾಲಿಯ ರಥ ಯಾತ್ರೆಗೆ ಕುಂದಾಪುರದ ಶಾಸ್ತ್ರೀ ವೃತ್ತದಿಂದ ಚಾಲನೆ ದೊರೆಯಿತು.
ಕುಂದಾಪುರದ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್ ಜೈ ಭೀಮ್ ಧ್ವಜ ತೋರಿಸುವ ಮೂಲಕ ರಥಯಾತ್ರೆಗೆ ಚಾಲನೆ ನೀಡಿದರು, ಅನಂತರ ಮಾತನಾಡಿದ ಅವರು, ಶಿಕ್ಷಣವನ್ನೇ ಮೂಲ ಮಂತ್ರವನ್ನಾಗಿಸಿಕೊಂಡಿದ್ದ ಅಂಬೇಡ್ಕರ್ ಅವರು ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ್ದವರು. ಶಿಕ್ಷಣದ ಮೂಲಕ ಸಮಾಜದಲ್ಲಿರುವ ಅಲ್ಪಸ್ವಲ್ಪ ಅಸ್ಪೃಶ್ಯತೆಯನ್ನೂ ತೊಡೆದು ಹಾಕುವ ಪ್ರಮಾಣ ವಚನವನ್ನು ಸ್ವೀಕರಿಸಬೇಕು. ದಲಿತರ ಸರ್ವತೋಮುಖ ಅಭಿವೃದ್ಧಿಗೆ ಇಲಾಖೆ ಕಂಕಣಬದ್ಧವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಮುಖಂಡ ಮಂಜುನಾಥ ಗಿಳಿಯಾರ್, ಸಂವಿಧಾನದ ಜೊತೆಗೆ ಭಾಷಾವಾರು ಪ್ರಾಂತ್ಯ ರಚನೆಯಲ್ಲಿ ಅಂಬೇಡ್ಕರ್ ಮಹತ್ತರವಾದ ಪಾತ್ರ ವಹಿಸಿದ್ದಾರೆ. ಕಾನೂನು ಕಾಯ್ದೆ, ಕಾರ್ಖಾನೆ ಕಾಯ್ದೆ, ಹಿಂದೂ ಬಿಲ್ ಕೋಡ್ ಹೀಗೇ ಎಲ್ಲಾ ಕ್ಷೇತ್ರಗಳಲ್ಲಿಯೂ ಅಂಬೇಡ್ಕರ್ ಚಿಂತನೆ ಹಾಸು ಹೊಕ್ಕಾಗಿದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಚಿಂತನೆಯನ್ನು ಅನುಷ್ಟಾನಕ್ಕೆ ತರುವಲ್ಲಿ ಎಲ್ಲಾ ಇಲಾಖೆಗಳೂ ಕಾರ್ಯೋನ್ಮುಖವಾಗಬೇಕಿದೆ ಎಂದು ಹೇಳಿದರು. ಪುರಸಭಾಧ್ಯಕ್ಷೆ ವಸಂತಿ ಸಾರಂಗ, ಡಿವೈ‌ಎಸ್ಪಿ ಪ್ರವೀಣ್ ನಾಯ್ಕ್, ಡಾ. ರಂಜನ್ ಕುಮಾರ್ ಶೆಟ್ಟಿ ವಿಕಾಸ್ ಹೆಗ್ಡೆ ಮೊದಲಾದವರು ಇದ್ದರು.



This post first appeared on V4news, please read the originial post: here

Share the post

ನಮ್ಮ ಭೂಮಿ ನಮ್ಮ ಹಕ್ಕು ರಥಯಾತ್ರೆ, ಕುಂದಾಪುರದ ಶಾಸ್ತ್ರೀ ವೃತ್ತದಿಂದ ಎಸಿ ಶಿಲ್ಪಾನಾಗ್‌ರಿಂದ ಚಾಲನೆ

×

Subscribe to V4news

Get updates delivered right to your inbox!

Thank you for your subscription

×