Get Even More Visitors To Your Blog, Upgrade To A Business Listing >>

ವೃದ್ಧನ ಕೊಲೆ, ಮಗನ ಮೇಲೆ ಮಾರಣಾಂತಿಕ ಹಲ್ಲೆ, ಹೊಸಬೆಟ್ಟುವಿನ ಕರಿಂಗಾನ ಎಂಬಲ್ಲಿ ನಡೆದ ಘಟನೆ

Tags: agravesup

murdu

ಗುಡ್‌ಫ್ರೈಡೇ ದಿನವಾದ ನಿನ್ನೆ ಕ್ರೈಸ್ತ ಕುಟುಂಬವೊಂದರ ತಂದೆ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆದು, ತಂದೆ ಸಾವನ್ನಪ್ಪಿದ್ದು ಮಗ ಗಂಭೀರ ಗಾಯಗೊಂಡ ಘಟನೆ ಹೊಸಬೆಟ್ಟು ಗ್ರಾಮದ ಕರಿಂಗಾನ ಎಂಬಲ್ಲಿ ನಡೆದಿದೆ.
ಮೂಡಬಿದರೆಯ ಶೇಡಿಗುರಿ ಚೈತನ್ಯ ಯುವಕ ಮಂಡಲದ ಹತ್ತಿರದ ನಿವಾಸಿಯಾಗಿದ್ದ ಪೌಲ್ ಗೋವಿಯಸ್ ಕೊಲೆಯಾದ ವ್ಯಕ್ತಿ ಇವರ ಪುತ್ರ ಸ್ಟ್ಯಾನಿ ಗೋವಿಯಸ್ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೌಲ್ ಗೋವಿಯಸ್‌ರ ಪತ್ನಿ ಎರಡು ವರ್ಷಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನೇಣು ಹಾಕಿದ್ದ ಸ್ಥಿತಿಯಲ್ಲಿದ್ದ ಪೌಲ್ ಗೋವಿಯಸ್‌ರ ಪತ್ನಿಯದ್ದು ಕೊಲೆಯೆಂಬ ಸಂಶಯವನ್ನು ಕುಟುಂಬಸ್ಥರೇ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮೂಡಬಿದರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗ ಈ ಹಲ್ಲೆ ಮತ್ತು ಕೊಲೆ ಪ್ರಕರಣವನ್ನು ಕಗ್ಗಂಟಾಗಿಸಿದೆ.



This post first appeared on V4news, please read the originial post: here

Share the post

ವೃದ್ಧನ ಕೊಲೆ, ಮಗನ ಮೇಲೆ ಮಾರಣಾಂತಿಕ ಹಲ್ಲೆ, ಹೊಸಬೆಟ್ಟುವಿನ ಕರಿಂಗಾನ ಎಂಬಲ್ಲಿ ನಡೆದ ಘಟನೆ

×

Subscribe to V4news

Get updates delivered right to your inbox!

Thank you for your subscription

×