Get Even More Visitors To Your Blog, Upgrade To A Business Listing >>

ನೈಜ ಕಥೆಯನ್ನಾಧಾರಿತ ಕತ್ತಲೆ ಕೋಣೆ : ಸಿನಿಮಾ ಟ್ರೀಸರ್ ಬಿಡುಗಡೆ

vlcsnap-2017-03-30-16h31m43s94-copy

ಉಡುಪಿ : ಮಲೆನಾಡಿನ ತಪ್ಪಲಿನಲ್ಲಿದ್ದ ಹುಡುಗನೊಬ್ಬ ದೇಶಕ್ಕಾಯೊ ಯೋಧನಾಗು ಕನಸ್ಸು ಕಂಡು ಸೈಕೋ ನಾದ ಕತೆ ಹಾರರ್, ಥ್ರೀಲ್ಲರ್, ಶೇಡಿನಲ್ಲಿ ಮೂಡಿ ಬರುತ್ತಿದೆ. ಕರಾವಳಿ ಯುವಕನೊಬ್ಬ ನವಯುವಕರ ಗುಂಪು ಕಟ್ಟಿಗೊಂಡು ಕತ್ತಲೆಕೋಣೆ ಚಿತ್ರವನ್ನು ಬೆಳ್ಳಿತೆರೆ ತರುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾನೆ.vlcsnap-2017-03-30-16h30m54s109-copy

vlcsnap-2017-03-30-16h32m05s59-copyಹಳ್ಳಿಯ ಹುಡುಗನೊಬ್ಬ ಶಾಲೆಗೆ ಗುಡ್ ಬೈ ಹೇಳಿ ಉದ್ಯೋಗಕ್ಕಾಗಿ ಮುಂಬಾಯಿ ರೈಲು ಹತ್ತಿದ್ದ. ಆ ವೇಳೆ ಮಲೆನಾಡಿನ ತಪ್ಪಲಿನಲ್ಲಿ ನಡೆದ ನೈಜ ಘಟನೆಯೊಂದು ಮನಸ್ಸಿನಲ್ಲಿ ಜೀವಂತಾಗಿತ್ತು. ಮತ್ತೆ ವರುಷಗಳು ಕಳೆದು ಮತ್ತೆ ಹುಟ್ಟೂರಿಗೆ ಕಾಲಿಟ್ಟ ವೇಳೆಗೆ ಆತನೊಳ್ಳ ಆ ನೈಜ ಘಟನೆ ಕತೆ ಮೂಡಿದೆ. ಆ ಕತೆಯಯನ್ನು ಚಿತ್ರವಾಗಿ ಮೂಡಿಸಲು ಆತನ 7 ವರುಷದ ಪ್ರಯತ್ನ ಈಗ ಸಕಾರಾಗೊಂಡಿದೆ. ಬಾಲ್ಯದಿಂದ ನಾಟಕ,ಅಭಿನಯ ಹುಚ್ಚು ಬೆಳೆಸಿಕೊಂಡ ಆ ಯುವಕ ದುಡಿಮೆ ಗಾಗಿ ಮುಂಬಯಿ ಮಹಾನಗರಿ ಸೇರಿ,ಹಗಲು ದುಡಿದು, ರಾತ್ರಿ ಶಾಲೆಯಲ್ಲಿ ಓದಿ ಪಡವಿ ಮೂಗಿಸಿದ ಯುವಕ. ಪ್ರತಿಕೆ ವಾಹಿನಿಗಳಲ್ಲಿ ಜೀವನಕ್ಕಾಗಿ ಉದ್ಯೋಗ ಕೈಹಿಡಿದ್ರು. ಚಿತ್ರ ನಿರ್ದೇಶನ ಕನಸ್ಸು ಬಿಡದೆ. ತಪ್ಪಸಿನಂತೆ ದುಡಿಮೆ ಜೊತೆ ಚಿತ್ರ ನಿರ್ಮಾಣದ ಹಿಂದೆ ಬಿದ್ದು ಈಗ ಕತ್ತಲೆ ಕೋಣೆ ಎಂಬ ನೈಜ ಕತೆ ಜೀವತುಂಬವುಕ್ಕೆ ಹೊಟಿದ್ದಾನೆ. ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿಗೆ ಛಾಯಗ್ರಾಹಣದಲ್ಲಿ ಆರ್ ಕೆ ಮಂಗಳೂರು, ಸಹ ನಿರ್ದೇಶಕನಾಗಿ ತಮಿಳು, ಮಲೆಯಾಳಂ ಚಿತ್ರದಲ್ಲಿ ಕೆಲಸಮಾಡಿದ ಅನುಭವಿ ಜೀತ್ ಸಾತ್ ನೀಡಿದ್ದಾರೆ.ಹಳ್ಳಿಯ, ಕಷ್ಟಜೀವಿ ಕುಟುಂಬದೊಳಗೆ ದೇಶ ಭಕ್ತಿ, ರಾಷ್ಟ್ರ ಕಾಯೋ ಕನಸ್ಸು ಹುಟ್ಟುವುದು ಸಹಜವೆಂಬತಾಗಿದೆ. ಆದ್ರೆ ತನ್ನಾಸೆ ಪ್ರೋತ್ಸಾಹ ಸಿಗದೆ ಹೋದಾಗ ಎಳೆಯ ಮನಸ್ಸೊಂದು ಏನಾಗುತ್ತೆ. ದೇಹಾ ನಶಿಸಿದ್ರು ಆತ್ಮದಾಸೆ ಹೇಗೆ ಜೀವಂತಾಗಿರುತ್ತೆ . ಆ ಹಠ ಸೇಡಾಗಿ ಹೇಗೆ ಭಾದಿಸುತ್ತೆ ಅನ್ನುವ ಕಥಾವಸ್ತು ಇರುವ ಚಿತ್ರವೇ ಕತ್ತಲೆಕೋಣೆ.ಕತ್ತಲೆ ಕೋಣೆ ಚಿತ್ರದ ಚಿತ್ರೀಕರಣ 60ಶೇ ಮುಗಿದಿದೆ.ಕುಂದಾಪುರ ,ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ಸಾಗಿದೆ. ಚಿತ್ರಕತೆ, ನಿರ್ದೇಶನ ಸಂದೇಶ್ ಶೆಟ್ಟಿ ಅಜ್ರಿ. ನಿರ್ಮಾಣ ಭಾರವನ್ನು ಮುಂಯಿಯಾ ಪಿವಿ ಅಮೀನ್ ಹೊತ್ತುಕೊಂಡ್ರೆ, ಕರಾವಳಿ ಕುಂದಾಪುರ ಹಲವು ಯುವಪ್ರತಿಭೆಗಳು ಚಿತ್ರದಲ್ಲಿ ನಟಿಸುತ್ತಿದ್ದು. ಕೇರಳ ನುರಿತ ತಂತ್ರಜ್ಜರ ತಂಡ ಚಿತ್ರಕ್ಕಾಗಿ ಕೆಲಸ ಮಾಡುತ್ತಿದೆ.ಚಿತ್ರಕ್ಕಾಗಿ 1 ಕೋಟಿ ರೂ ವೆಚ್ಚವಾಗಲಿದ್ದು ಚಿತ್ರದ ಎರಡು ಹಾಡು ಹಾಗೂ ಕ್ಲೈಮೇಕ್ಸ್ ಚಿತ್ರೀಕರಣ ಮಾತ್ರ ಭಾಕಿ ಉಳಿದಿದ್ದು ಇನ್ನೂ ಎರಡು ತಿಂಗಳಿನೊಳಗೆ ಕತ್ತಲೆ ಕೋಣೆ ಚಿತ್ರ ತೆರೆಗೆ ಬರಲಿದೆ.ಕತ್ತಲೆ ಕೋಣೆ ಚಿತ್ರದ ಪ್ರೋಮೋ ಬಿಡುಗಡೆಯಾಗಿ ಭಾರಿ ಪ್ರಚಾರ ಪಡೆದಿದ್ರೆ. ಚಿತ್ರದ ಟ್ರೀಸರ್ ಈಗ ಬಿಡುಗಡೆಯಾಗಿದೆ. ಕುಂದಾಪುರದಲ್ಲಿ ಮೀರಕಲ್ ಡಾನ್ಸ್ ಗ್ರೂಪ್ ಉದ್ಘಾಟನೆಯ ಜೊತೆ ಚಿತ್ರದ ಟ್ರೀಸರ್ ಬಿಡುಗಡೆಗೊಂಡಿದೆ. ಕತ್ತಲೆ ಕೋಣೆಚಿತ್ರ ಟೀಸರ್ ನ್ನು ಪತ್ರಕರ್ತೆ ಚಿತ್ರಕಲಾ ಬಿಡುಗಡೆ ಗೊಳ್ಳಿಸಿದ್ರು. ಕಮಲ ಶಿಲೆಯ ಧರ್ಮದರ್ಶಿ ಚಿದಾನಂದ ಚಾತ್ರ, ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ್ರು. ಕೊಲ್ಲೂರು ಮಾಜಿ ಧರ್ಮಧರ್ಶಿ ಸುಕುಮಾರ್ ಶೆಟ್ಟಿ, ಪತ್ರಕರ್ತ ಮಲ್ಲಿಕಾರ್ಜುನ್ ,ಹಲವು ಚಿತ್ರಾಭಿಮಾನಿಗಳು ಚಿತ್ರತಂಡಕ್ಕೆ ಶುಭಾಹಾರೈಸಿದ್ರು.



This post first appeared on V4news, please read the originial post: here

Share the post

ನೈಜ ಕಥೆಯನ್ನಾಧಾರಿತ ಕತ್ತಲೆ ಕೋಣೆ : ಸಿನಿಮಾ ಟ್ರೀಸರ್ ಬಿಡುಗಡೆ

×

Subscribe to V4news

Get updates delivered right to your inbox!

Thank you for your subscription

×