Get Even More Visitors To Your Blog, Upgrade To A Business Listing >>

ಟರ್ಪಲ್ ಹೊದಿಕೆಯಲ್ಲಿ ಬ್ರಿಟಿಷರ ಕಾಲದ ಸಂಪಾಜೆ ನಾಡ ಕಚೇರಿ

Tags: agravesup

vlcsnap-2017-03-30-16h54m22s116-copy

ಹಳೆಯ ಕಾಲದ ಸಂಪಾಜೆ ನಾಡ ಕಚೇರಿ ಮರದ ಪಕ್ಕಾಸುಗಳು ಮತ್ತು ಹಂಚುಗಳ ಶಿಥಿಲತೆಯಿಂದಾಗಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಟರ್ಪಲ್ ಹೊದಿಕೆಯಲ್ಲಿ ನಾಡ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೇ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳು ಭಯದಿಂದಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗವಾದ ಮಡಿಕೇರಿ ತಾಲೂಕು ಕೇಂದ್ರದ ಸಂಪಾಜೆ ಹೋಬಳಿಯ ನಾಡಕಚೇರಿ ಪೆರಾಜೆ, ಸಂಪಾಜೆ, ಮದೆ, ಚೆಂಬು, ಕಾಟಿಕೇರಿ, ಮೇಕೇರಿ, ಬಿಳಿಗೇರಿ, ಹಾಕತ್ತೂರು, ಕಗ್ಗೊಡ್ಲು, ಹೆರವನಾಡು, ಅರ‍್ವತ್ತೊಕ್ಲು ಮೊದಲಾದ ಗ್ರಾಮಗಳನ್ನು ಹೊಂದಿದೆ.
ಆದರೆ ನಾಡಕಚೇರಿ ಕಟ್ಟಡ ಬ್ರಿಟಿಷರ ಕಾಲದಾಗಿದ್ದು, ಕಟ್ಟಡ ಮಾತ್ರ ಸೋರುತ್ತಿದೆ. ಅಲ್ಲದೆ ಇದಕ್ಕೆ ಪರಿಹಾರವಾಗಿ ಕಟ್ಟಡಕ್ಕೆ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಹಾಸಲಾಗಿದೆ. ಆದರೂ ಮಳೆಗಾಲದಲ್ಲಿ ಕಚೇರಿ ಸಂಪೂರ್ಣ ಸೋರುತ್ತಿದೆ. ಇಲ್ಲಿ ಸಾವಿರಾರು ಜನರ ಮೂಲದಾಖಲಾತಿದ್ದರೂ ಅದು ಮಳೆನೀರಿಗೆ ಒದ್ದೆಯಾಗುವ ಸ್ಥಿತಿ ನಿರ್ಮಾಣವಾಗಿದೆ.ನಾಡಕಚೇರಿ ಸಂಪೂರ್ಣ ಬೀಳುವ ಸ್ಥಿತಿ ಒಂದು ಕಡೆಯಾದರೆ ಇಲ್ಲಿ ಇಂಟರ್‌ನೆಟ್ ಸಮಸ್ಯೆಯೂ ಇನ್ನೊಂದು ಕಡೆಯಾಗಿದೆ. ಇದರಿಂದ ಅಂತರ್ಜಾಲದ ಮೂಲಕ ಆಗುವ ಕೆಲಸಗಳು, ಸಾಮಾನ್ಯರಿಗೆ ಬೇಕಾಗುವ ಆರ್‌ಟಿಸಿ ಇತರ ಎಲ್ಲ ಕೆಲಸ ಕಾರ್ಯಗಳು ಕಡಿತಗೊಂಡು ನಾಡಕಚೇರಿ ವ್ಯಾಪ್ತಿಯ ಜನ ಪ್ರತಿದಿನ ಕೆಲಸ ಕಾರ್ಯಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸಂಪಾಜೆ ನಾಡಕಚೇರಿ 10 ಗ್ರಾಮಗಳನ್ನು ಹೊಂದಿದ್ದು, ಇಲ್ಲಿ ಉಪತಹಸೀಲ್ದಾರ್ ಇರಬೇಕಾಗಿದೆ. ಆದರೆ ಆ ಹುದ್ದೆ ಖಾಲಿ ಇದ್ದು, ಕಂದಾಯ ನಿರೀಕ್ಷಕರ ಹುದ್ದೆಯೂ ಪ್ರಭಾರದಲ್ಲಿದೆ. ಅಲ್ಲದೆ ಗ್ರಾಮಕರಣಿಕರ ಹುದ್ದೆಯೂ ಖಾಲಿ ಇದೆ. ಇದರ ಜತೆಯಲ್ಲಿ ಸಿಬ್ಬಂದಿಗಳ ಕೊರತೆಯೂ ಇದೆ. ಇಷ್ಟೆಲ್ಲ ಸಮಸ್ಯೆಗಳ ಸರಮಾಲೆಯನ್ನು ಹೊಂದಿದ್ದ, ನಾಡಕಚೇರಿ ಬಗ್ಗೆ ಸರಕಾರ, ಜನಪ್ರತಿನಿಧಿಗಳು ಎಚ್ಚೆತ್ತು ಕೂಡಲೇ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಲಿ ಎಂಬುದು ಈ ಭಾಗದ ಜನರ ಬೇಡಿಕೆಯಾಗಿದೆ.
ಈ ಬಗ್ಗೆ ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಕಳಗಿ ಪ್ರತಿಕ್ರಿಯೆ ನೀಡಿ ನಾಡ ಕಚೇರಿಯ ಪ್ರಮುಖ ಸಮಸ್ಯೆ ಬಗೆಹರಿಸುವುದು ಜನತೆಯ ಹಲವಾರು ವರ್ಷಗಳ ಬೇಡಿಕೆ. ಆದರೆ ಈ ಸಮಸ್ಯೆ ಈಡೇರದೆ ಜನಸಾಮಾನ್ಯರು ಕಷ್ಟಪಡುವಂತಾಗಿದೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು.



This post first appeared on V4news, please read the originial post: here

Share the post

ಟರ್ಪಲ್ ಹೊದಿಕೆಯಲ್ಲಿ ಬ್ರಿಟಿಷರ ಕಾಲದ ಸಂಪಾಜೆ ನಾಡ ಕಚೇರಿ

×

Subscribe to V4news

Get updates delivered right to your inbox!

Thank you for your subscription

×