Get Even More Visitors To Your Blog, Upgrade To A Business Listing >>

ಮಲ್ಪೆ-ಪಡುಕೆರೆ ಸೇತುವೆ ರಾಜಕೀಯ : ಶಿ ಲಾನ್ಯಾಸ ಮಾಡಿದವರಿಗೆ ಆಹ್ವಾನ ಇಲ್ಲ : ಪ್ರಮೋದ್-ರಘುಪತಿಭಟ್‌ಗೆ ಪ್ರತಿಷ್ಟೆಯಾದ ಪಡುಕೆರೆ ಸೇತುವೆ

vlcsnap-2017-03-18-11h50m06s166-copy

ಇದು ಮಲ್ಪೆ , ಪಡುಕೆರೆ ಭಾಗದ ಜನರ ದಶಕಗಳ ಬೇಡಿಕೆ. ಈಗ ಈ ಜನರ ಆಸೆ ಇಡೇರಿದೆ. ಆದ್ರೆ ರಾಜಕೀಯ ಮಾತ್ರ ಗರಿಗೆದರಿಗೆ. ಹಾಲಿಹಾಗೂ ಮಾಜಿ ಶಾಸಕರು ಈ ಸೇತುವೆ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಏಕೆ? ಇಲ್ಲಿದೆ ನೋಡಿ ಡೀಟೇಲ್ಸ್.vlcsnap-2017-03-18-11h49m48s245-copy

vlcsnap-2017-03-18-11h57m33s34-copy

vlcsnap-2017-03-18-11h57m55s253-copy

vlcsnap-2017-03-18-11h58m22s5-copyನೀವು ನೋಡುತ್ತಿರುವ ಸುಂದರ ಸೇತುವೆ ಮಲ್ಪೆ-ಪಡುಕೆರೆ ಸೇತುವೆ. ಈ ಸೇತುವೆ ಜನರ ದಶಕಗಳ ಬೇಡಿಕೆ ಆದ್ರೆ ತಪ್ಪಾಗೋದಿಲ್ಲ. ಯಾಕೆ ಅಂದ್ರೆ ಮಲ್ಪೆಯಿಂದ ಪಡುಕೆರೆ ಸಾಗಬೇಕಾದ್ರೆ ದೋಣಿಗಳನ್ನು ಅವಲಂಬಿಸಬೇಕಿತ್ತು. ಬೋಟ್ ನಿಂದ ಅರ್ಧ ಕಿಲೋ ಮೀಟರ್ ಸಾಗಿದರೆ ಪಡುಕೆರೆ ಮುಟ್ಟುತ್ತಿತ್ತು. ಬೋಟ್ ಇಲ್ಲಾಂದ್ರೆ ಸುಮಾರು ೨೫ ಕಿಲೋ ಮೀಟರ್ ದೂರ ವಾಹನದಲ್ಲಿ ಪಡುಕೆರೆಗೆ ಹೋಗುವ ಅನಿವಾರ್ಯತೆ ಇತ್ತು. ಈ ಕಾರಣದಿಂದಲೇ 10 ವರ್ಷಗಳಿಂದ ಈ ಭಾಗದಲ್ಲಿ ಮಲ್ಪೆ ಹಾಗೂ ಪಡುಕೆರೆಗೆ ಸಂಧಿಸುವ ಸಂಪರ್ಕ ಸೇತುವೆ ಆಗಬೇಕೆಂದು ಮಲ್ಪೆ ಭಾಗದ ಅದರಲ್ಲೂ ಮೀನುಗಾರರು ಬೇಡಿಕೆ ಇಟ್ಟಿದ್ದರು. ಇದಕ್ಕೆ ಅಂದಿನ ಸಚಿವ ದಿ.ವಿ.ಎಸ್ ಆಚಾರ್ಯ ಹಾಗೂ ಶಾಸಕರಾಗಿದ್ದ ರಘುಪತಿ ಭಟ್ ಸರಕಾರದಲ್ಲಿ ಒತ್ತಡ ಹಾಕಿ ಸೇತುವೆ ಮಂಜೂರು ಕೂಡಾ ಮಾಡಿದ್ರು. ಶಾಸಕರಾಗಿದ್ದ ರಘುಪತಿಭಟ್ ಶಿಲನ್ಯಾಸ ಮಾಡಿದ್ದರು. 2013ರಲ್ಲಿ ಈ ಸೇತುವೆ ಕಾಮಗಾರಿಯನ್ನು ಯೋಜಕ ಸಂಸ್ಥೆ ಕೈಗೆತ್ತಿಕೊಂಡಿತ್ತು. ಆದ್ರೆ ಈ ಸೇತುವೆಯ ವಿಚಾರದಲ್ಲಿ ರಾಜಕೀಯ ಗರಿಗೆದರಿದೆ. ಸೇತುವೆಯಕ್ರೆಡಿಟ್ ಪಡೆಯಲು ಈಗಿನ ಹಾಲಿ ಶಾಸಕ ಹಾಗೂ ಮಾಜಿ ಶಾಸಕ ರಘುಪತಿ ಭಟ್ ನಡುವೆ ಪೈಪೋಟಿ ನಡೆಯುತ್ತಿದೆ.
2013ರಲ್ಲಿ ಸೇತುವೆಯ ಕಾಮಗಾರಿ ಕೈಗೆತ್ತಿಕೊಂಡ ಬಳಿಕ ನೂತನ ಕಾಂಗ್ರೆಸ್ ಸರಕಾರ ಅಸ್ಥಿತ್ವಕ್ಕೆ ಬಂದಿದೆ. ಸೇತುವೆ ಮಂಜೂರಾಗಿ 13ಕೋಟಿ ರೂ ಹಣವನ್ನು ಮೀಸಲಿಡಲಾಗಿತ್ತು. ಆದ್ರೆ ಹಣ ಬಿಡುಗಡೆ ಆಗಿರಲಿಲ್ಲ. ಕಾಂಗ್ರೆಸ್ಸ್ ಸರಕಾರ ಬಂದಾಗ ಶಾಸಕರಾದ ಪ್ರಮೋದ್ ಮದ್ವರಾಜ್ ಈ ಸೇತುವೆಯನ್ನು ಪರಿಶೀಲಿಸಿ ವಿನ್ಯಾಸವನ್ನು ಬದಲಾಯಿಸಿದ್ದರು. ಸೇತುವೆ ಅಗಲ ಕಡಿಮೆ ಇದ್ದ ಕಾರಣ. ಅಗಲ ಜಾಸ್ತಿ ಮಾಡಲು ಇಂಜಿನಿಯರ್ ಗಳಿಗೆ ತಿಳಿಸಿ ಎಸ್ಟಿಮೇಟ್ ಮಾಡಲು ತಿಳಿಸಿದ್ದರು. ಅದರ ಪ್ರಕಾರ ಸೇತುವೆ ಅಗಲ ಮಾಡಿದ್ದು ಮಾತ್ರವಲ್ಲ ಯೋಜನಾ ವೆಚ್ಚದಲ್ಲಿ ಹೆಚ್ಚಳವಾಗಿತ್ತು. 13ಕೋಟಿಯಿಂದ 16ಕೋಟಿಗೆ ನೆಗೆದಿದ್ದು ಹಣ ಮಂಜೂರು ಮಾಡುವಲ್ಲಿ ಬಳಿಕ ಸಚಿವರಾದ ಪ್ರಮೋದ್ ಮದ್ವರಾಜ್ ಪ್ರಯತ್ನ ಮಾಡಿದ್ದಾರೆ. ಇದೀಗ 16ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಆಗಿದೆ. 215ರಲ್ಲಿ ಸೇತುವೆ ಕಾಮಗಾರಿ ಮುಗಿಯಬೇಕಿತ್ತು. ಆದ್ರೆ ವಿಳಂಬವಾಗಿ ಕಾಮಗಾರಿ ನಡೆಸಿದೆ ಮಾತ್ರವಲ್ಲ ಯೋಜಕ ಸಂಸ್ಥೆಗೆ ಸರಕಾರ ಹಣ ಮಂಜೂರು ಮಾಡದ ಕಾರಣ ಸೇತುವೆ ನಿರ್ಮಾಣ ಕಾಮಗಾರಿಗೆ ವಿಳಂಬ ಆಗಿದೆ ಅಂತ ಮಾಜಿ ಶಾಸಕ ರಘುಪತಿಭಟ್ ಆರೋಪಿಸಿದ್ದರು. ಇದೀಗ ಎಲ್ಲಾ ಅಡೆತಡೆಗಳನ್ನು ದಾಟಿ ಸೇತುವೆ ನಿರ್ಮಾಣ ಮಾಡಲಾಗಿದೆ. ಆದ್ರೆ ಉದ್ಘಾಟನೆಯ ಮೊದಲು ಈ ಸೇತುವೆಯ ಕ್ರೆಡಿಟ್ ಪಡೆಯಲು ಹಾಲಿ-ಮಾಜಿ ಶಾಸಕರ ನಡುವೆ ಪೈಪೋಟಿ ಆರಂಭವಾಗಿದೆ. ಪಡುಕೆರೆಯಲ್ಲಿ ಮಾಜಿ-ಹಾಲಿ ಶಾಸಕರ ಬ್ಯಾನರ್ ಗಳೇ ಸದ್ದು ಮಾಡುತ್ತಿವೆ.
ಒಟ್ಟಿನಲ್ಲಿ ಜನರಿಗೆ ಅಗತ್ಯವಾಗಿದ್ದ ಸೇತುವೆ ವಿಚಾರವಾಗಿ ರಾಜಕೀಯ ನಡೆಯುತ್ತಿರುವು ಮತ್ತು ಮುಖಂಡರನ್ನು ಆಹ್ವಾನಿಸದಿರುವುದು ಮುಂದಿನ ಚುನಾವಣೆಗೆ ಪ್ರಾಕ್ಟೀಸ್ ಅಂತನೇ ಜನ ಭಾವಿಸಿಕೊಳ್ಳುತ್ತಿದ್ದರೆ. ಒಟ್ಟಿನಲ್ಲಿ ಸೇತುವೆ ರಾಜಕೀಯ ಉಡುಪಿಯಲ್ಲಿ ಜನರ ಬಾಯಿಗೆ ಕೆಲ್ಸ್ ನೀಡಿರೋದು ಮಾತ್ರ ಸುಳ್ಳಲ್ಲ.
ವರದಿ:ಪಲ್ಲವಿ ಸಂತೋಷ್
____________



This post first appeared on V4news, please read the originial post: here

Share the post

ಮಲ್ಪೆ-ಪಡುಕೆರೆ ಸೇತುವೆ ರಾಜಕೀಯ : ಶಿ ಲಾನ್ಯಾಸ ಮಾಡಿದವರಿಗೆ ಆಹ್ವಾನ ಇಲ್ಲ : ಪ್ರಮೋದ್-ರಘುಪತಿಭಟ್‌ಗೆ ಪ್ರತಿಷ್ಟೆಯಾದ ಪಡುಕೆರೆ ಸೇತುವೆ

×

Subscribe to V4news

Get updates delivered right to your inbox!

Thank you for your subscription

×