Get Even More Visitors To Your Blog, Upgrade To A Business Listing >>

ಸೂಪರ್ ಸ್ಟಾರ್ ಕಷ್ಟದಲ್ಲಿದ್ದಾಗ ನೆರವು ನೀಡಿದ್ದ ಉಡುಪಿಯ ವ್ಯಕ್ತಿ, ನಾರಾಯಣ ರಾವ್‌ರನ್ನು ಡ್ಯಾಡಿ ಎಂದು ಕರೆಯುತ್ತಿದ್ದ ರಜನಿಕಾಂತ್

Tags: agravesup

rajjani

rajani
ಮನುಷ್ಯನಾದವನು ಕಷ್ಟದಲ್ಲಿದ್ದಾಗ ಅನ್ನ ನೀಡಿದಾತನನ್ನು ಯಾವತ್ತೂ ಮರೆಯಲ್ಲ. ಆತ ಆರ್ಥಿಕವಾಗಿ ಏಷ್ಟೇ ದೊಡ್ಡವನಾದರೂ ಕಷ್ಟದ ಜೀವನವನ್ನು ಯಾವತ್ತಿಗೂ ನೆನಪಿನಲ್ಲಿಟ್ಟುಕೊಳ್ಳುತ್ತಾನೆ. ಅದೇ ರೀತಿ ಸೂಪರ್ ಸ್ಟಾರ್ ರಜನೀಕಾಂತ್‌ಗೆ ಸಿನಿಮಾ ಸೇರುವ ಮೊದಲು ಅನ್ನ ನೀಡಿದ ವ್ಯಕ್ತಿಯನ್ನು ತಂದೆ ಎಂದು ಕರೆದಿದ್ದಾರೆ. ತನಗೆ ಸಹಾಯ ಮಾಡಿದ ಉಡುಪಿಯ ವ್ಯಕ್ತಿಯನ್ನು ಇಂದಿಗೂ ನೆನಪಿನಲ್ಲಿಟ್ಟುಕೊಂಡಿದ್ದಾರೆ.
ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ರಜನೀಕಾಂತ್ ಸಿನಿಮಾ ನೋಡದ ಸಿನಿರಸಿಕರೆ ಇಲ್ಲ ಅಂತಾ ಹೇಳಿದ್ರು ತಪ್ಪಾಗಲಾರದು. ಆದ್ರೆ ಇದೇ ರಜನೀಕಾಂತ್‌ಗೆ ಸಹಾಯ ಮಾಡಿದ್ದ ವ್ಯಕ್ತಿ ಹೆಚ್ಚಿನ ಮಂದಿಗೆ ಗೊತ್ತಿಲ್ಲ. ಅವರೇ ಈ ಫೋಟೋದಲ್ಲಿರುವ ನಾರಾಯಣ ರಾವ್. ಮೂಲತ ಉಡುಪಿಯವರಾದ ನಾರಾಯಣ್ ೫೦ ವರ್ಷದ ಹಿಂದೆಯೇ ಮದ್ರಾಸ್‌ನಲ್ಲಿ ನೆಲೆಸಿದ್ರು. ಅಲ್ಲಿ ವುಡ್ ಲ್ಯಾಂಡ್ ಹೋಟೆಲ್‌ನಲ್ಲಿ ಸಪ್ಲ್ಯಾಯರ್ ಕೆಲಸಕ್ಕಿದ್ರು. ಅಂದು ರಜನೀಕಾಂತ್ ಫಿಲ್ಮ್ ಇನ್ಸಟ್ಯೂಟ್ ಆಫ್ ಮದ್ರಾಸ್‌ನಲ್ಲಿ ತರಬೇತಿಗಾಗಿ ಸೇರಿದಾಗ ಇವರೇ ರಜನೀಕಾಂತ್‌ಗೆ ಸಹಾಯ ಮಾಡಿದ್ದರು. ಬಡತನದ ಅಂದಿನ ಸ್ಥಿತಿಯಲ್ಲಿ ರಜನೀಕಾಂತ್‌ಗೆ ಉಳಿಯುವ ಹಾಗೂ ಆಹಾರ ವ್ಯವಸ್ಥೆ ಮಾಡಿದ್ದರು. ಅದನ್ನು ನೆನಪಿನಲ್ಲಿಟ್ಟುಕೊಂಡಿರುವ ರಜನಿ ಸಿನಿಮಾದಲ್ಲಿ ಜನಮನ್ನಣೆ ಗಳಿಸಿದ ಬಳಿಕವೂ ಇವರನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ.
ರಜನೀಕಾಂತ್ ಈ ಅನ್ನದಾತನನ್ನು ತಂದೆ ಎಂದು ಕರೆದಿದ್ದಾರೆ. ಭೇಟಿಯಾದಾಗ ನೆನಪಿಗಾಗಿ ತನ್ನ ಇಷ್ಟ ದೇವರಾದ ರಾಘವೇಂದ್ರರ ಫೋಟೋವನ್ನು ಇವರಿಗೆ ನೀಡಿದ್ದಾರೆ. ಕಷ್ಟ ಕಾಲದಲ್ಲಿ ರಾವ್ ನೆರವಾದಕ್ಕೆ ರಾವ್ ಅವರ ಹೆಸರಿನ ಬ್ಯಾಂಕ್ ಖಾತೆಯಲ್ಲಿ ಒಂದೂವರೆ ಲಕ್ಷ ಠೇವಣಿಯನ್ನು ಇರಿಸಿದ್ದಾರೆ. ರಜನೀಕಾಂತ್ ಅವರ ಜೊತೆಗಿದ್ದ ಚಿತ್ರರಂಗದ ದಿಲೀಪ್, ರವೀಂದ್ರನಾಥ್, ನಿರ್ದೇಶಕ ಸತೀಶ್ ಕೂಡ ನಾರಾಯಾಣ್ ರಾವ್ ಅವರನ್ನು ನೆನಪಿನಲ್ಲಿಟ್ಟುಕೊಂಡಿದ್ದರು. ಆದ್ರೆ ಚೆನೈನಿಂದ ವಾಪಾಸ್ ತವರು ಊರು ಉಡುಪಿಯ ಹೆರ್ಗದಲ್ಲಿ ನಾರಾಯಣ್ ರಾವ್ ೧೯೯೭ರಲ್ಲಿ ಬಂದು ನೆಲೆಸಿದ್ರು. ಆ ಬಳಿಕ ನಿರ್ದೇಶಕ ಸತೀಶ್ ನಾರಾಯಣ್ ರಾವ್‌ಗೆ ಪತ್ರ ಬರೆದು ವಾಪಾಸ್ ಕರೆಸಿಕೊಂಡು ರಜನೀಕಾಂತ್ ಅವರನ್ನು ಭೇಟಿ ಮಾಡಿಸಿದ್ರು. ೧೯೩೦ರಲ್ಲಿ ಜನಿಸಿದ ರಾವ್ ಕಳೆದ ಮೇ ತಿಂಗಳಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆದ್ರೆ ಅನ್ನದಾತ ಇಹಲೋಕ ತ್ಯಜಿಸಿದ್ದ ವಿಷಯ ರಜನೀಕಾಂತ್‌ಗೆ ತಿಳಿದಿಲ್ಲ.
ಇದೀಗ ರಾವ್ ಅವರ ನಾಲ್ವರು ಮಕ್ಕಳು ಉಡುಪಿಯ ಹೆರ್ಗದ ಮನೆಯಲ್ಲಿದ್ದಾರೆ. ಇದೀಗ ತಮ್ಮ ತಂದೆ ಮತ್ತು ರಜನೀಕಾಂತ್ ಅವರ ಸಂಬಂಧ ನೆನಪುಗಳು ಕೇವಲ ಫೋಟೋದಲ್ಲಿ ಮಾತ್ರ ಉಳಿದುಕೊಂಡಿದೆ. ರಜನೀಕಾಂತ್‌ಗೆ ಅನ್ನದಾತ ಪರಲೋಕಕ್ಕೆ ಹೋದ ಸುದ್ದಿ ತಿಳಿಸಬೇಕು ಎಂಬ ಪ್ರಯತ್ನವನ್ನು ಇವರು ಮಾಡುತಿದ್ದಾರೆ. ರಜನೀ ಅವರ ಆಗಮನಕ್ಕೆ ಕಾಯುತ್ತಿದ್ದಾರೆ.This post first appeared on V4news, please read the originial post: here

Share the post

ಸೂಪರ್ ಸ್ಟಾರ್ ಕಷ್ಟದಲ್ಲಿದ್ದಾಗ ನೆರವು ನೀಡಿದ್ದ ಉಡುಪಿಯ ವ್ಯಕ್ತಿ, ನಾರಾಯಣ ರಾವ್‌ರನ್ನು ಡ್ಯಾಡಿ ಎಂದು ಕರೆಯುತ್ತಿದ್ದ ರಜನಿಕಾಂತ್

×

Subscribe to V4news

Get updates delivered right to your inbox!

Thank you for your subscription

×