Get Even More Visitors To Your Blog, Upgrade To A Business Listing >>

ಅಡಿಕೆ ಹಳದಿ ರೋಗ ಪೀಡಿತ ಪ್ರದೇಶಗಳಿಗೆ ಪ್ಯಾಕೇಜು ಬಿಡುಗಡೆಗೆ ಸುಳ್ಯ ಬಿಜೆಪಿ ಮಂಡಲ ಸಮಿತಿ ಆಗ್ರಹ

vlcsnap-2017-03-17-22h15m16s181-copy

ರಾಜ್ಯದ ಕಾಂಗ್ರೆಸ್ ಸರಕಾರ ರೈತರ ಸಾಲಮನ್ನಾ ಮಾಡದೇ ರೈತ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಕೇವಲ ಅಲ್ಪಸಂಖ್ಯಾತರ ಓಲೈಕೆಯಲ್ಲಿ ಕಾಲ ಕಳೆಯುವ ಕಾಂಗ್ರೆಸ್ ಸರಕಾರ ತಾಲೂಕಿನ ಅಡಿಕೆ ಬೆಳೆಗಾರರನ್ನು ಕಡೆಗಣಿಸಿದೆ. ಅಡಿಕೆಗೆ ಹಳದಿ ರೋಗ ವ್ಯಾಪಿಸಿದ ಪರಿಣಾಮ ರೈತ ಸಂಕಷ್ಟದಲ್ಲಿದ್ದಾನೆ. ಸರಕಾರ ಕೂಡಲೇ ಪರಿಹಾರ ಪ್ಯಾಕೇಜು ಬಿಡುಗಡೆ ಮಾಡಿ ಅಡಿಕೆ ಹಳದಿ ರೋಗದ ಸಂಕಷ್ಟಕ್ಕೆ ವಿಶೇಷ ನಿಧಿ ಘೋಷಣೆ ಮಾಡಬೇಕು ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಸರಕಾರವನ್ನು ಆಗ್ರಹಿಸಿದೆ.ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಸುಳ್ಯ ಮಂಡಲ ಬಿಜೆಪಿ ಸಮಿತಿ ಅದ್ಯಕ್ಷ ವೆಂಕಟ್ ವಳಲಂಬೆ ತಾಲೂಕಿನ ಹಲವು ಗ್ರಾಮಗಳಿಗೆ ಹಳದಿ ರೋಗ ವ್ಯಾಪಿಸಿದೆ. ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹಳದಿ ರೋಗ ಒಮ್ಮೆ ವ್ಯಾಪಿಸಿಕೊಂಡರೆ ಸಂಪೂರ್ಣ ಕೃಷಿ ನಾಶ ಆಗುತ್ತದೆ. ರೋಗ ನಿವಾರಣೆಗೆ ಸರಕಾರ ಯಾವ ಪ್ರಯತ್ನ ಮಾಡಿಲ್ಲ. ಬಜೆಟ್‌ನಲ್ಲಿ ಯಾವ ಘೋಷಣೆಯನ್ನು ಮಾಡಿಲ್ಲ. ಸರಕಾರ ಪರಿಹಾರ ಪ್ಯಾಕೇಜು ಬಿಡುಗಡೆ ಮಾಡಬೇಕು ಎಂದು ಹೇಳಿದ ಅವರು ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಜನರಿಗೆ ತೊಂದರೆ ಆಗಲಿದೆ. ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸುವಾಗ ವಿಳಂಬ ಆದ ಕಾರಣ ಕಸ್ತೂರಿ ರಂಗನ್ ಭೂತ ಕಾಡುತ್ತಿದೆ. ಪಶ್ಚಿಮ ಘಟ್ಟದ ಗಡಿ ಗುರುತು ಮಾಡಬೇಕು. ಅಲ್ಲದೇ ಪತ್ಯೇಕ ಕಾವಲು ಪಡೆಯನ್ನು ನೆಮಕ ಮಾಡಬೇಕು. ಜೀವ ವೈವೈಧ್ಯದ ಸಂರಕ್ಷಣೆಯ ಹೆಸರಿನಲ್ಲಿ ಬಡವರಿಗೆ ಅನ್ಯಾಯ ಆಗಬಾರದು ಎನ್ನುವ ಉದ್ದೇಶದಿಂದ ಕಸ್ತೂರಿ ರಂಗನ್ ವರದಿಯ ವಿರುದ್ದ ಹೋರಾಟ ನಡೆಸಲಾಗುವುದು. ಅಲ್ಲದೇ ಸುಳ್ಯದಲ್ಲಿ ಪಕ್ಷದ ಆಗುಹೋಗುಗಳನ್ನು ತಿಳಿಸಿಸಲು ಪಕ್ಷಕ್ಕೆ ಇಬ್ಬರು ವಕ್ತಾರರನ್ನು ನೇಮಕ ಮಾಡಲಾಗಿದೆ ಎಂದ ಅವರು ರಾಜ್ಯ ಸರಕಾರದ ವೈಫಲ್ಯತೆಯನ್ನು ಜನರಿಗೆ ತಿಳಿ ಹೇಳುವ ಕೆಲಸ ಮತ್ತು ಕೇಂದ್ರ ಸರಕಾರದ ಯೋಜನೆಯನ್ನು ಜನರಿಗೆ ಮುಟ್ಟಿಸುವ ಕೆಲಸ ನಡೆಯಲಿದೆ. ಈ ಮೂಲಕ ಪಕ್ಷದ ಬಲವರ್ಧನೆಗೊಳಿಸಿ ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲಾಗುವುದು. ಅಲ್ಲದೇ ಇದೇ ವರ್ಷ ಪಂಡಿತ್ ದೀನ್ ದಯಳ್ ಉಪಾದ್ಯಾಯ ಅವರ ೧೦೦ನೆ ಜನ್ಮ ಶತಮಾನೋತ್ಸವ ಇರುವುದರಿಂದ ವರ್ಷಪೂರ್ತಿ ಕಾರ್ಯಕ್ರಮ ಗಳ ಮೂಲಕ ಮಹಾ ಸಂಪರ್ಕ ಅಭಿಯಾನ ಹಾಗೂ ಅಂಬೇಡ್ಕರ್ ಜಯಂತಿ ದಿನದಂದು ಎಸ್.ಸಿ ಕಾಲನಿಗಳಲ್ಲಿ ಜಯಂತಿ ಆಚರಣೆ ಕಾರ್ಯಕ್ರಮ ನಡೆಸಲಾಗುವುದು. ಅಡುಗೆ ಅನಿಲ ಮತ್ತು ಪೆಟ್ರೋಲ್ ಉತ್ಪನ್ನಗಳ ಬೆಲೆ ಅಂತಾರಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳ ಏರಿಕೆಯಿಂದ ನಮ್ಮಲ್ಲಿ ಕೂಡ ಬೆಲೆ ಏರಿಕೆ ಆಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ವಿದ್ದಾಗ ಅಡುಗೆ ಅನಿಲದ ಸಿಲೀಂಡರ್‌ಗಳು ಕಾಲಸಂತೆಯಲ್ಲಿ ಮಾರಾಟ ಆಗುತ್ತಿತ್ತು. ಆದರೆ ಈಗ ಸಬ್ಸಿಡಿ ಮೂಲಕ ವಿತರಣೆ ಆಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.ಪತ್ರಿಕಾಗೋಷ್ಟಿಯಲ್ಲಿ ಮಾಜಿ ಜಿ.ಪಂ ಅದ್ಯಕ್ಷ ವೆಂಕಟ್ ದಂಬೆಕೋಡಿ, ನಗರ ಬಿಜೆಪಿ ಅದ್ಯಕ್ಷ ವಿನಯ ಕಂದಡ್ಕ, ಮಾಜಿ. ನ.ಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಮಾಜಿ ತಾ.ಪಂ ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಸೋಮನಾಥ ಪೂಜಾರಿ ಉಪಸ್ಥಿತರಿದ್ದರು.This post first appeared on V4news, please read the originial post: here

Share the post

ಅಡಿಕೆ ಹಳದಿ ರೋಗ ಪೀಡಿತ ಪ್ರದೇಶಗಳಿಗೆ ಪ್ಯಾಕೇಜು ಬಿಡುಗಡೆಗೆ ಸುಳ್ಯ ಬಿಜೆಪಿ ಮಂಡಲ ಸಮಿತಿ ಆಗ್ರಹ

×

Subscribe to V4news

Get updates delivered right to your inbox!

Thank you for your subscription

×