Get Even More Visitors To Your Blog, Upgrade To A Business Listing >>

ಲಂಡನ್ ವಿಂಬಲ್ಡನ್ ಸ್ಕ್ವಾಷ್ ಓಪನ್, ನಾಲ್ಕರ ಘಟ್ಟಕ್ಕೆ ಭಾರತದ ಸೌರವ್ ಘೋಷಾಲ್

saurav878

ಭಾರತದ ಸೌರವ್ ಘೋಷಾಲ್ ಲಂಡನ್ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಕ್ಲಬ್ ಸ್ಕ್ವಾಷ್ ಓಪನ್ನಲ್ಲಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಅಗ್ರ ಶ್ರೇಯಾಂಕದ ಘೋಷಾಲ್ ೧೨-೧೦, ೧೧-೫, ೧೧-೭ರಲ್ಲಿ ಇಂಗ್ಲೆಂಡ್ನ ಜಾಯ್ ಲೀ ಅವರನ್ನು ಮಣಿಸಿದರು. ಟೂರ್ನಿಯಲ್ಲಿ ಸ್ಪರ್ಧಿಸಿದ್ದ ಭಾರತದ ಮಹೇಶ್ ಮಂಗಾಂವ್ಕರ್ ಮತ್ತು ವಿಕ್ರಮ್ ಮಲ್ಹೋತ್ರ ನಾಲ್ಕರ ಘಟ್ಟ ತಲುಪುವಲ್ಲಿ ವಿಫಲರಾದರು. ಮಹೇಶ್ ೯-೧೧, ೧೦-೧೨, ೭-೧೧ ರಲ್ಲಿ ಮೂರನೇ ಶ್ರೇಯಾಂಕದ ಇಂಗ್ಲೆಂಡ್ನ ಟಾಮ್ ರಿಚರ್ಡ್ಸ್ ಎದುರು ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು. ವಿಕ್ರಮ್ ೧೦-೧೨, ೭-೧೧, ೧೧-೮, ೮-೧೧ರಲ್ಲಿ ಮಲೇಷ್ಯಾದ ಅದನಾನ್ ವಿರುದ್ಧ ಸೋತರು.This post first appeared on V4news, please read the originial post: here

Share the post

ಲಂಡನ್ ವಿಂಬಲ್ಡನ್ ಸ್ಕ್ವಾಷ್ ಓಪನ್, ನಾಲ್ಕರ ಘಟ್ಟಕ್ಕೆ ಭಾರತದ ಸೌರವ್ ಘೋಷಾಲ್

×

Subscribe to V4news

Get updates delivered right to your inbox!

Thank you for your subscription

×