Get Even More Visitors To Your Blog, Upgrade To A Business Listing >>

ಜಿ‌ಎಸ್‌ಟಿ ಸೆಸ್ ಗರಿಷ್ಟ ೧೫ ಶೇಕಡಾ, ದೆಹಲಿ ಮಂಡಳಿ ಸಭೆಯಲ್ಲಿ ತೀರ್ಮಾನ

gst_650x400_61485772190

ವಿಲಾಸಿ ಸರಕು, ತಂಪು ಪಾನೀಯ ಮತ್ತು ಆರೋಗ್ಯಕ್ಕೆ ಹಾನಿಕರವಾಗಿರುವ ತಂಬಾಕು ಮತ್ತು ಪಾನ್ ಮಸಾಲಾ ಮೇಲೆ ವಿಧಿಸಬಹುದಾದ ಸೆಸ್ನ ಗರಿಷ್ಠ ದರವನ್ನು ಶೇ. ೧೫ರಷ್ಟಕ್ಕೆ ನಿಗದಿಗೊಳಿಸಲಾಗಿದೆ.
ಸರಕು ಮತ್ತು ಸೇವಾ ತೆರಿಗೆ ಜಿ‌ಎಸ್ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಕೇಂದ್ರಾಡಳಿತ ಪ್ರದೇಶ ಜಿ‌ಎಸ್ಟಿ ಮತ್ತು ರಾಜ್ಯಗಳ ಜಿ‌ಎಸ್ಟಿ ಕರಡು ಮಸೂದೆಗಳಿಗೂ ಮಂಡಳಿಯು ತನ್ನ ಅನುಮೋದನೆ ನೀಡಿದೆ. ಸೆಸ್ನಿಂದ ಸಂಗ್ರಹವಾಗುವ ಮೊತ್ತವನ್ನು ಜಿ‌ಎಸ್ಟಿ ಜಾರಿಯ ಮೊದಲ ಐದು ವರ್ಷಗಳವರೆಗೆ ರಾಜ್ಯಗಳ ನಷ್ಟ ಭರ್ತಿ ಮಾಡಿಕೊಡಲು ಬಳಸಿಕೊಳ್ಳಲಾಗುವುದು. ಸೆಸ್ ವಿಧಿಸುವುದರ ಮೇಲೆ ಶೇ. ೧೫ರಷ್ಟು ಗರಿಷ್ಠ ಮಿತಿ ಹಾಕಿದ್ದರೂ, ಸದ್ಯಕ್ಕೆ ಶೇ. ೨೮ರಷ್ಟು ಜಿ‌ಎಸ್ಟಿ ತೆರಿಗೆಯ ಮೇಲೆ ಶೇ. ೧೨ರಷ್ಟನ್ನು ಮಾತ್ರ ವಿಧಿಸಲಾಗುವುದು. ಭವಿಷ್ಯದಲ್ಲಿ ಉದ್ಭವಿಸಬಹುದಾದ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಶೇ. ೧೫ರ ಗರಿಷ್ಠ?ಮಿತಿ ವಿಧಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಸದ್ಯಕ್ಕೆ ವಿಲಾಸಿ ಕಾರ್ ಮೇಲೆ ಶೇ. ೪೦ರಷ್ಟು ತೆರಿಗೆ ವಿಧಿಸುತ್ತಿದ್ದರೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ಶೇ. ೨೮ ಜಿ‌ಎಸ್ಟಿ ಮತ್ತು ಶೇ. ೧೨ ರಷ್ಟು ಸೆಸ್ ವಿಧಿಸಿ ತೆರಿಗೆ ಪ್ರಮಾಣ ಒಂದೇ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು ಎಂದರು.
ಸದ್ಯಕ್ಕೆ ಬೀಡಿ ಮೇಲೆ ವಿಧಿಸಬಹುದಾದ ತೆರಿಗೆ ದರದ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ಹಿಂದಿನ ಸಭೆಯಲ್ಲಿ ಮಂಡಳಿಯು, ಕೇಂದ್ರ ಸರ್ಕಾರದ ಜಿ‌ಎಸ್ಟಿ ಮತ್ತು ಸಮಗ್ರ ಜಿ‌ಎಸ್ಟಿಯ ಅಂತಿಮ ಕರಡಿಗೆ ಸಮ್ಮತಿ ನೀಡಿತ್ತು. ಜಿ‌ಎಸ್ಟಿ ಜಾರಿಗೆ ಅಗತ್ಯವಾಗಿರುವ ಎಲ್ಲ ಐದು ಕರಡು ಮಸೂದೆಗಳಿಗೆ ಈಗ ಮಂಡಳಿಯ ಸಮ್ಮತಿ ದೊರೆತಂತೆ ಆಗಿದೆ. ಜುಲೈ ೧ರಿಂದ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರಲು ಹಾದಿ ಇನ್ನಷ್ಟು ಸುಗಮವಾದಂತೆ ಆಗಿದೆ. ಈ?ಪೂರಕ ಮಸೂದೆಗಳು ಮತ್ತು ಜಿ‌ಎಸ್ಟಿ ಪರಿಹಾರ ಕಾಯ್ದೆಗಳಿಗೆ ಅಂತಿಮ ಒಪ್ಪಿಗೆ ಪಡೆಯಲು ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸಲಾಗುವುದು. ಅಲ್ಲಿ ಅಂಗೀಕಾರ ದೊರೆತನಂತರ ಸದ್ಯ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಗುವುದು.



This post first appeared on V4news, please read the originial post: here

Share the post

ಜಿ‌ಎಸ್‌ಟಿ ಸೆಸ್ ಗರಿಷ್ಟ ೧೫ ಶೇಕಡಾ, ದೆಹಲಿ ಮಂಡಳಿ ಸಭೆಯಲ್ಲಿ ತೀರ್ಮಾನ

×

Subscribe to V4news

Get updates delivered right to your inbox!

Thank you for your subscription

×