Get Even More Visitors To Your Blog, Upgrade To A Business Listing >>

ಕಟೀಲು ಕೊಂಡೆಮೂಲದಲ್ಲಿ ಬಡಮಹಿಳೆಗೆ ದಾನಿಗಳಿಂದ ಮನೆ,  ಮನೆ ಹಸ್ತಾಂತರಿಸಿದ ರೆ.ಫಾ. ರೊನಾಲ್ಡ್ ಕುಟಿನ್ಹಾ

house

housee
ಕಟೀಲು ಸಮೀಪದ ಕೊಂಡೆಮೂಲದ ಮೀನಾಕ್ಷಿ ಗಿಡಿಗೆರೆ ಅವರಿಗೆ ಸೀಮಾ ಸ್ಟ್ಯಾನಿ ಪಿಂಟೋ ದಂಪತಿ ಕರ್ನಾಟಕ ಸರಕಾರದ ಬಸವ ಯೋಜನೆಯ ಸಹಯೋಗದಲ್ಲಿ ನಿರ್ಮಿಸಿದ ಮನೆಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.
ಕಟೀಲು ಸಮೀಪದ ಕೊಂಡೆಮೂಲದಲ್ಲಿ ನಿರ್ಮಾಣಗೊಂಡ ಮನೆಯನ್ನು, ಕಟೀಲು ಸಂತ ಜಾಕೋಬರ ಚರ್ಚ್ ಧರ್ಮ ಗುರು ರೆ. ಫಾ. ರೊನಾಲ್ಡ್ ಕುಟಿನ್ಹಾ ಹಸ್ತಾಂತರಿಸಿದರು. ಅನಂತರ ಮಾತನಾಡಿದ ಅವರು, ಸರಕಾರ ಅನೇಕ ಸವಲತ್ತು ನೀಡುತ್ತದೆ ಆದರೆ ಅದನ್ನು ದೊರಕಿಸಿಕೊಳ್ಳುವಲ್ಲಿ ಸ್ವಲ್ಪ ಶ್ರಮ ವಹಿಸಿಕೊಳ್ಳಬೇಕಾಗುತ್ತದೆ ಎಂದರು.
ದಾನಿ ಸ್ಟ್ಯಾನಿ ಪಿಂಟೋ ಮಾತನಾಡಿ, ಮೀನಾಕ್ಷಿಯವರು ತಮ್ಮ ಸಮಸ್ಯೆಯನ್ನು ಮೂರು ವರ್ಷದ ಹಿಂದೆ ಹೇಳಿಕೊಂಡಿದ್ದು, ಅದಕ್ಕಾಗಿ ಸ್ಪಂದಿಸಿದ್ದೇನೆ, ಒಂದು ಬಡ ಕುಟುಂಬಕ್ಕೆ ಸಹಾಯ ಮಾಡಿದ ತೃಪ್ತಿ ನನ್ನಲ್ಲಿದೆ ಎಂದರು. ಈ ಸಂದರ್ಭ ಲಲಿತಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಆರೋಗ್ಯ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಶೈಲಾ ಸಿಕ್ವೇರಾ, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಮುಲ್ಕಿ ಮೂಡಬಿದಿರೆ ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ಅಭಿಲಾಶ್ ಶೆಟ್ಟಿ, ಕಟೀಲು ಗ್ರಾ. ಪಂ. ಸದಸ್ಯೆ ಪದ್ಮಲತಾ ಮತ್ತಿತರರು ಇದ್ದರು.



This post first appeared on V4news, please read the originial post: here

Share the post

ಕಟೀಲು ಕೊಂಡೆಮೂಲದಲ್ಲಿ ಬಡಮಹಿಳೆಗೆ ದಾನಿಗಳಿಂದ ಮನೆ,  ಮನೆ ಹಸ್ತಾಂತರಿಸಿದ ರೆ.ಫಾ. ರೊನಾಲ್ಡ್ ಕುಟಿನ್ಹಾ

×

Subscribe to V4news

Get updates delivered right to your inbox!

Thank you for your subscription

×