Get Even More Visitors To Your Blog, Upgrade To A Business Listing >>

ಶಾಲೆಯ ಸುತ್ತ ತರಕಾರಿ, ಬಗೆಬಗೆಯ ಹಣ್ಣುಗಳು, ವಿದ್ಯಾರ್ಥಿಗಳೇ ಕೃಷಿಕರು ಮಾಲಕರು, ಗಮನ ಸೆಳೆಯುತ್ತಿದೆ ಮಜಿ ಸರ್ಕಾರಿ ಶಾಲೆ

Tags: agravesup

vegschool

vegetable
ಅದೊಂದು ಸರ್ಕಾರಿ ಶಾಲೆ, ಶಾಲೆಯ ಸುತ್ತಾಲೂ ಅಡಕೆ, ತೊಂಡೆಕಾಯಿ, ಬೆಂಡೆಕಾಯಿ, ಒಂದೊಂದು ಗಿಡಗಳಲ್ಲಿ ವಿದ್ಯಾರ್ಥಿಗಳ ಹೆಸರು, ಅವರೇ ಅದರ ಮಾಲೀಕರು, ಅವರೇ ಅದರ ಪೋಷಣೆ ಮಾಡುತ್ತಾರೆ. ಮಕ್ಕಳಿಗೆ ಬಿಸಿಯೂಟಕ್ಕೆ ಇಲ್ಲಿಂದಲೇ ತರಕಾರಿ ಸಂಗ್ರಹ. ಇದರಿಂದ ಶಾಲೆಯಲ್ಲಿ ಆರ್ಥಿಕ ಸಮಸ್ಯೆಯೂ ತಲೆದೋರಿಲ್ಲ.
ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ಬಾರಿ ಪರಿಸರ ಮಿತ್ರ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ೨೧ ಶಾಲೆಗಳಲ್ಲಿ ಈ ಶಾಲೆಯೂ ಒಂದಾಗಿದೆ. ಶಾಲೆಯ ಸುತ್ತಲೂ ಇರುವ ಕೈತೋಟದಲ್ಲಿರುವ ಪ್ರತಿಯೊಂದು ಗಿಡದಲ್ಲೂ ಒಬ್ಬೊಬ್ಬ ವಿದ್ಯಾರ್ಥಿಯ ಹೆಸರಿದೆ. ಯಾರ ಹೆಸರಿದೆಯೋ ಆ ವಿದ್ಯಾರ್ಥಿಯೇ ಆ ಗಿಡದ ಮಾಲೀಕನಾಗಿದ್ದಾನೆ. ಹೀಗೆ ಒಂದರ ಮೇಲೊಂದರಂತೆ ಸುಂದರ, ಆಹ್ಲಾದಕರ ಅನುಭವ ನೀಡುವ ಶಾಲೆಯ ಬಗ್ಗೆ ಹಲವೆಡೆಯಿಂದ ಪ್ರಶಾಂಸೆ ವ್ಯಕ್ತವಾಗಿದೆ. ದೊಡ್ಡ ತೊಂಡೆಕಾಯಿ ಚಪ್ಪರದ ಹಸಿರು ನೋಟ ಮಕ್ಕಳಿಗೆ ಕೃಷಿ ಬದುಕಿನ ಪಾಠ ಹೇಳುತ್ತದೆ. ಸುಮಾರು ೫೦ ಅಡಕೆ ಗಿಡಗಳು ಇಲ್ಲಿವೆ. ಪ್ರತಿಯೊಂದು ಗಿಡದಲ್ಲೂ ಒಬ್ಬೊಬ್ಬ ವಿದ್ಯಾರ್ಥಿಗಳ ಹೆಸರು ಬರೆದು ಟ್ಯಾಗ್ ಮಾಡಲಾಗಿದೆ. ಆ ವಿದ್ಯಾರ್ಥಿಯೇ ಗಿಡದ ನಿತ್ಯ ನಿರ್ವಹಣೆ ಮಾಡಬೇಕು. ಬೆಳಗ್ಗೆ ಶಾಲೆಗೆ ಬಂದೊಡನೆ ಈ ಗಿಡಕ್ಕೆ ನೀರು ಸಹಿತ ಅಗತ್ಯ ವಸ್ತುವನ್ನು ಒದಗಿಸುವುದು ಹಾಗೂ ಬೆಳವಣಿಗೆ ಕುರಿತು ಶಿಕ್ಷಕರಿಂದ ಮಾಹಿತಿ ಪಡೆಯೋದು ಆತನ ಕೆಲಸ. ಏಳನೇ ತರಗತಿವರೆಗೆ ಶಿಕ್ಷಣ ಒದಗಿಸಲಾಗುವ ಈ ಶಾಲೆಯಲ್ಲಿ ೫೪ ಮಕ್ಕಳು ಕಲಿಯುತ್ತಿದ್ದಾರೆ.
ಆಟ, ಪಾಠದೊಂದಿಗೆ ಕೃಷಿ ಕುರಿತ ಜಾಗೃತಿ ಹಾಗೂ ಪರಿಸರ ಮಾಹಿತಿ ನೀಡುವುದು ಈ ಶಾಲೆಯ ವೈಶಿಷ್ಟ್ಯ. ಮುಖ್ಯೋಪಾಧ್ಯಾಯ ನಾರಾಯಣ ಪೂಜಾರಿ ನೇತೃತ್ವದ ಶಿಕ್ಷಕರ ತಂಡ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂಜೀವ ಮೂಲ್ಯ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ ಜೊತೆಗೆ ಶಾಲೆಯ ಸರ್ವಾಂಗೀಣ ಉನ್ನತಿಯ ಚಟುವಟಿಕೆಗಳಿಗೆ ತಾಲೂಕು ಫೊಟೋಗ್ರಾಫರ್ಸ್ ಎಸೋಸಿಯೇಶನ್ ಕೂಡ ಕೈಜೋಡಿಸಿದೆ. ಭವಿಷ್ಯದಲ್ಲಿ ಶಾಲೆಯ ಕೆಲ ಖರ್ಚು ವೆಚ್ಚಗಳ ನಿರ್ವಹಣೆಯೂ ಅಡಿಕೆ ಮರಗಳಿಂದ ಸಾಧ್ಯವಾಗಬಹುದು ಎನ್ನುತ್ತಾರೆ ಇಲ್ಲಿನ ಮುಖ್ಯೋಪಾಧ್ಯಾಯ ನಾರಾಯಣ ಪೂಜಾರಿ. ಸಹಶಿಕ್ಷಕಿಯರಾದ ಸಂಗೀತಾ ಶರ್ಮಾ, ಶಕುಂತಳಾ ಎಂ.ಬಿ, ಸಿಸಿಲಿಯಾ, ಹಾಗೂ ಗೌರವ ಶಿಕ್ಷಕಿ ಜ್ಯೋತಿ ಮಕ್ಕಳೊಂದಿಗೆ ಮಕ್ಕಳಾಗಿ ಪರಿಸರ ಅರಿವು ಮೂಡಿಸುತ್ತಿದ್ದಾರೆ.This post first appeared on V4news, please read the originial post: here

Share the post

ಶಾಲೆಯ ಸುತ್ತ ತರಕಾರಿ, ಬಗೆಬಗೆಯ ಹಣ್ಣುಗಳು, ವಿದ್ಯಾರ್ಥಿಗಳೇ ಕೃಷಿಕರು ಮಾಲಕರು, ಗಮನ ಸೆಳೆಯುತ್ತಿದೆ ಮಜಿ ಸರ್ಕಾರಿ ಶಾಲೆ

×

Subscribe to V4news

Get updates delivered right to your inbox!

Thank you for your subscription

×