Get Even More Visitors To Your Blog, Upgrade To A Business Listing >>

ನಂದಳಿಕೆ ಸಿರಿ ಅಯನದ ಪ್ರಚಾರಕ್ಕೆ ರೆಡಿಯಾಗಿವೆ ಮೈಲುಗಲ್ಲುಗಳು, ಕ್ಷೇತ್ರದ ವಿಭಿನ್ನ ಪ್ರಯತ್ನಕ್ಕೆ ಎಲ್ಲೆಡೆಯಿಂದ ಪ್ರಶಂಸೆ

Tags: agravesup

sirijatre

sirijaa
ತುಳುನಾಡಿನ ಕಾರಣಿಕ ಕ್ಷೇತ್ರ ನಂದಳಿಕೆ ಮಹಾಲಿಂಗೇಶ್ವರ ದೇವಳದಲ್ಲಿ ೨೦೧೩ರಲ್ಲಿ ಪ್ರಚಾರಕ್ಕೆ ಬಳಸಲಾದ ಭಾರೀ ಜನಪ್ರಿಯತೆ ಗಳಿಸಿದ್ದ ರಸ್ತೆ ಬದಿಯ ಮೈಲುಗಲ್ಲುಗಳು ಈ ಬಾರಿಯ ಸಿರಿ ಜಾತ್ರೆ ಪ್ರಚಾರಕ್ಕೂ ಸಿದ್ಧಗೊಂಡಿವೆ. ಅದ್ದೂರಿಯ ಸಿರಿ ಜಾತ್ರೆ ಎಪ್ರಿಲ್ ೧೧ ರಂದು ನಡೆಯಲಿದೆ.
ಇದರ ಪರಿಕಲ್ಪನೆಯ ರೂವಾರಿ ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಹಾಗು ತನ್ನ ಮಿತ್ರರ ಜತೆ ಸಿರಿಜಾತ್ರೆಯ ಪ್ರಚಾರದ ಮೈಲುಗಲ್ಲುಗಳನ್ನು ಬಿಡುಗಡೆಗೊಳಿಸಿದರು. ಹಿಂದೆ ೨೦೧೩ರಲ್ಲಿ ಸಿರಿ ಜಾತ್ರೆಯ ಪ್ರಚಾರಕ್ಕೆ ಇದೇ ರೀತಿಯ ಮೈಲುಗಲ್ಲುಗಳು ಭಕ್ತರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದ್ದು ಮತ್ತೆ ಈ ವರ್ಷದ ಜಾತ್ರೆಗೆ ಇದನ್ನೆ ಬಳಸಬೇಕೆಂಬ ಒತ್ತಾಯ ಕೇಳಿಬಂದ ಕಾರಣಕ್ಕೆ ಪ್ರಚಾರಕ್ಕೆ ಬಳಸಬೇಕಾಯಿತೆಂದು ಅವರು ಹೇಳಿದರು. ಪ್ಲಾಸ್ಟಿಕ್ ರಹಿತ ಪೇಪರ್ ಹಾಗು ಮರದ ಪೀಸ್‌ಗಳನ್ನು ಬಳಸಿ ಈ ಮೈಲುಗಲ್ಲುಗಳನ್ನು ರಚಿಸಲಾಗಿದ್ದು ೪,೦೦೦ ಮೈಲುಗಲ್ಲುಗಳು ಈಗಾಗಲೇ ತಯಾರಾಗಿವೆ, ಒಂದಕ್ಕೆ ತಗಲುವ ವೆಚ್ಚ ೧೪೦ ರೂಪಾಯಿಗಳದ್ದಾಗಿದೆ. ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಮಡಿಕೇರಿ ಸಹಿತ ಅಕ್ಕ ಪಕ್ಕದ ಎಲ್ಲಾ ಜಿಲ್ಲೆಗಳ ರಸ್ತೆಯ ಬದಿಗಳಲ್ಲಿ ಈ ಮೈಲುಗಲ್ಲುಗಳು ಜಾತ್ರೆ ಪ್ರಚಾರ ಮಾಡಲಿದೆ.
ಈ ಮೈಲುಗಲ್ಲು ಬಿಡುಗಡೆ ಸಂದರ್ಭ ಸುಹಾಸ್ ಹೆಗ್ಡೆಯವರ ಜತೆ ಸತೀಶ್ ಮಾಡ, ಪ್ರಸಾದ್ ಶೆಟ್ಟಿ, ಸುಭಾಸ್ ಕುಮಾರ್, ವಿನಾಯಕ ಕಾಮತ್, ಉದಯ ಕುಮಾರ್, ಗಿರೀಶ್, ರಾಜ ಭಟ್, ಅರುಣ್, ರಾಕೇಶ್ ಮತ್ತಿತರರಿದ್ದರು. ಈ ಹಿಂದೆ ಮೈಲುಗಲ್ಲು ಸಹಿತ ಅಂಚೆ ಕಾರ್ಡ್, ಕೊಡೆ, ಗೋಣಿಚೀಲದಂತಹ ಮೂಲಕ ಪ್ರಚಾರ ಪಡೆದಿದ್ದ ಸಿರಿ ಜಾತ್ರೆ ಈ ಬಾರಿ ಇನ್ನೊಂದು ಮೈಲುಗಲ್ಲುಗಳ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ಪಡೆಯಲಿದೆ.



This post first appeared on V4news, please read the originial post: here

Share the post

ನಂದಳಿಕೆ ಸಿರಿ ಅಯನದ ಪ್ರಚಾರಕ್ಕೆ ರೆಡಿಯಾಗಿವೆ ಮೈಲುಗಲ್ಲುಗಳು, ಕ್ಷೇತ್ರದ ವಿಭಿನ್ನ ಪ್ರಯತ್ನಕ್ಕೆ ಎಲ್ಲೆಡೆಯಿಂದ ಪ್ರಶಂಸೆ

×

Subscribe to V4news

Get updates delivered right to your inbox!

Thank you for your subscription

×