Get Even More Visitors To Your Blog, Upgrade To A Business Listing >>

ಉಡುಪಿಯ ವಿಭೂತಿ ಆರ್ಟ್ ಗ್ಯಾಲರಿ, ಅನ್ವೇಷಣೆ ಚಿತ್ರಕಲಾ ಪ್ರದರ್ಶನ ಉದ್ಘಾಟನೆ

Tags: agravesup

artexi

artexibi
ಮಂಗಳೂರಿನ ಮಹಲಾಸ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ ಅನ್ವೇಷಣೆ ಉಡುಪಿಯ ಚಿತ್ರಕಲಾ ಮಂದಿರದ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿತು.
ಅನ್ವೇಷಣೆ ಚಿತ್ರಕಲಾ ಪ್ರದರ್ಶನವನ್ನು ಮಣಿಪಾಲ ವಿವಿಯ ಅಸೋಸಿಯೇಟ್ ಪ್ರೋ. ಡಾ. ಉನ್ನಿಕೃಷ್ಣನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಚಿತ್ರಕಲಾ ವಿದ್ಯಾರ್ಥಿಗಳು ಸ್ಥಳೀಯ ಸಂಸ್ಕೃತಿಯನ್ನು ಮುಂದಿಟ್ಟುಕೊಂಡು ಮಾಡಿರುವ ಈ ಚಿತ್ರಕಲೆ ನಿಜಕ್ಕೂ ಅದ್ಭುತ. ವಿದ್ಯಾರ್ಥಿಗಳು ಕಲೆ, ಸಂಸ್ಕೃತಿಯನ್ನು ಈ ಚಿತ್ರಕಲೆ ಮೂಲಕ ಬಿಂಬಿಸಿದ್ದಾರೆ ಎಂದರು. ಸಮಾರಂಭದಲ್ಲಿ ಮಹಲಾಸ ಚಿತ್ರ ಮಂದಿರದ ಮುಖ್ಯಸ್ಥ ಎಸ್. ಎನ್. ಪತ್ತಾರ್, ಚಿತ್ರಕಲಾ ಮಂದಿರದ ಕಾರ್ಯದರ್ಶಿ ಯು. ಸಿ. ನಿರಂಜನ್, ಮಂಗಳೂರು ಚಿತ್ರಕಲಾ ಮಂದಿರದ ಪ್ರಾಚಾರ್ಯ ಪುರುಷೋತ್ತಮ್ ನಾಯಕ್, ರಾಜೇಂದ್ರ ತ್ರಾಸಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಂಗಳೂರು ಮಹಲಾಸ ಚಿತ್ರಕಲಾ ಮಂದಿರದ ೧೯ ವಿದ್ಯಾರ್ಥಿಗಳು ೩೦ಕ್ಕೂ ಹೆಚ್ಚು ಸೃಜನಶೀಲ ವರ್ಣ ಚಿತ್ರಗಳನ್ನು ರಚಿಸಿದ್ದು ಮಾ. ೧೯ರತನಕ ಈ ಪ್ರದರ್ಶನ ನಡೆಯಲಿದೆ. ಜಲವರ್ಣ, ಆಕ್ರಲಿಕ್, ತೈಲವರ್ಣ ಮಾಧ್ಯಮದಲ್ಲಿ ಈ ಕಲಾಕೃತಿಗಳು ಮೂಡಿಬಂದಿದ್ದು ಸ್ಥಳಿಯ ಸಂಸ್ಕೃತಿ, ಕಲಾ ಪ್ರಕಾರ ಮುಂದಿಟ್ಟು ಕಲಾತ್ಮಕವಾಗಿ ವಿದ್ಯಾರ್ಥಿಗಳು ಚಿತ್ರಕಲೆ ಬಿಡಿಸಿದ್ದಾರೆ.This post first appeared on V4news, please read the originial post: here

Share the post

ಉಡುಪಿಯ ವಿಭೂತಿ ಆರ್ಟ್ ಗ್ಯಾಲರಿ, ಅನ್ವೇಷಣೆ ಚಿತ್ರಕಲಾ ಪ್ರದರ್ಶನ ಉದ್ಘಾಟನೆ

×

Subscribe to V4news

Get updates delivered right to your inbox!

Thank you for your subscription

×