Get Even More Visitors To Your Blog, Upgrade To A Business Listing >>

ವಿಶ್ವ ದಾಖಲೆಗಳ ಮ್ಯಾರಥಾನ್ ಅಜ್ಜ ಎಡ್ ವಿಟ್ಲಾಕ್,  ೮೬ನೇ ವಯಸ್ಸಿನಲ್ಲಿ ಓಟ ನಿಲ್ಲಿಸಿ ಮರೆ

ed-whitlock_0

ಎಡ್ ವಿಟ್ಲಾಕ್ ಎಂಬ ಹೆಸರನ್ನು ಕೇಳದವರೇ ಇಲ್ಲ. ೮೬ ವರ್ಷದ ಅಜ್ಜನ ಜೀವನೋತ್ಸಾಹ, ಅವರ ಮ್ಯಾರಥಾನ್ ಜಗತ್ತಿನ ವಿಶ್ವ ದಾಖಲೆಗಳ ಸರಮಾಲೆಗಳನ್ನು ಕೇಳಿ ಮ್ಯಾರಥಾನ್ ಜಗತ್ತು ಅಚ್ಚರಿಗೊಂಡಿದ್ದರಲ್ಲಿ ವಿಶೇಷವೇನಿಲ್ಲ! ಅಂತಹ ವಿಶ್ವದಾಖಲೆಗಳ ಸರದಾರ ಮ್ಯಾರಥಾನ್ ಸಾಧಕ ವಿಟ್ಲಾಕ್ ಓಟವನ್ನು ನಿಲ್ಲಿಸಿ ತಮ್ಮ ೮೬ನೇ ವರ್ಷದಲ್ಲಿ ಗ್ರಂಥಿ ಕ್ಯಾನ್ಸರ್ನಿಂದ ಮೃತಪಟ್ಟಿದ್ದಾರೆ.
ಮೂಲತಾ ಎಡ್ ವಿಟ್ಲಾಕ್ ಇಂಗ್ಲೆಂಡ್ನವರು. ಓದಿದ್ದೆಲ್ಲ ಇಂಗ್ಲೆಂಡ್ನಲ್ಲೇ. ಆದರೆ ಬೆಳೆದಿದ್ದು ಕೆನಡಾದಲ್ಲಿ. ಎಂಜಿನಿಯರಿಂಗ್ ಪದವೀಧರರಾದ ಅವರು ವೃತ್ತಿಯನ್ನು ಅರಸಿಕೊಂಡು ಹೋಗಿ ಕೆನಡಾದಲ್ಲಿ ನೆಲೆಸಿದರು. ಅಲ್ಲಿಯ ಪ್ರಜೆಗಳೇ ಆದರು. ವಿಟ್ಲಾಕ್ ನಿಧನದಿಂದ ಮ್ಯಾರಥಾನ್ ಜಗತ್ತು ಮಹಾನ್ ಸಾಧಕನೊಬ್ಬನನ್ನು ಕಳೆದುಕೊಂಡಿದೆ. ಅತಿ ಕಿರಿಯ ವಯಸ್ಸಿನಲ್ಲಿ ಓಡುತ್ತಿದ್ದ ವಿಟ್ಲಾಕ್ ಮಧ್ಯದಲ್ಲಿ ಅದನ್ನು ನಿಲ್ಲಿಸಿದರು. ಅನಂತರ ತಮ್ಮ ೪೦ನೇ
ವಯಸ್ಸಿನಿಂದ ಪುನಃ ಶುರು ಮಾಡಿದರು. ತಮ್ಮ ೬೯ನೇ ವಯಸ್ಸಿನಲ್ಲಿ ಕೇವಲ ೩ ಗಂಟೆಯಲ್ಲಿ ೪೨ ಕಿ.ಮೀ.ಗಳ ಮ್ಯಾರಥಾನ್ ಮುಗಿಸಿ ಈ ಸಾಧನೆ ಮಾಡಿದ ವಿಶ್ವದ ಅತಿ ಹಿರಿಯ ವ್ಯಕ್ತಿ ಎನಿಸಿಕೊಂಡರು.
೨೦೦೩ನೆ ಟೊರಂಟೋ ಮ್ಯಾರಥಾನ್ನಲ್ಲಿ ಅವರು ಮೈಲುಗಲ್ಲು ಸ್ಥಾಪಿಸಿದರು. ತಮ್ಮ ೭೨ನೇ ವಯಸ್ಸಿನಲ್ಲಿ ೪೨ ಕಿ.ಮೀ. ದೂರವನ್ನು ಕೇವಲ ೨ ಗಂಟೆ ೫೯ ನಿಮಿಷ ೧೦ ಸೆಕೆಂಡ್ಗಳಲ್ಲಿ ಮುಗಿಸಿದರು. ೭೦ನೇ ವರ್ಷದನಂತರ ಇಂತಹ ಸಾಧನೆ ಮಾಡಿದ ವಿಶ್ವದ ಮೊದಲಿಗ ಎನಿಸಿಕೊಂಡರು. ಅವರು ತಮ್ಮ ಈ ಸಾಹಸವನ್ನು ಇನ್ನೂ ಉತ್ತಮಪಡಿಸಿದರು. ೭೫ನೇ ವಯಸ್ಸಿನಲ್ಲಿ, ೮೫ನೆ ವಯಸ್ಸಿನಲ್ಲೂ ಮತ್ತೆರಡು ವಿಶ್ವದಾಖಲೆ ನಿರ್ಮಿಸಿದರು. ಇವರ ನಿರ್ಗಮನಕ್ಕೆ ಜಗತ್ತು ಕಂಬನಿ ಮಿಡಿದಿದೆ.



This post first appeared on V4news, please read the originial post: here

Share the post

ವಿಶ್ವ ದಾಖಲೆಗಳ ಮ್ಯಾರಥಾನ್ ಅಜ್ಜ ಎಡ್ ವಿಟ್ಲಾಕ್,  ೮೬ನೇ ವಯಸ್ಸಿನಲ್ಲಿ ಓಟ ನಿಲ್ಲಿಸಿ ಮರೆ

×

Subscribe to V4news

Get updates delivered right to your inbox!

Thank you for your subscription

×