Get Even More Visitors To Your Blog, Upgrade To A Business Listing >>

ಹಣದುಬ್ಬರ ಬಹಳ ಏರಿಕೆ, ಆಹಾರ ಪದಾರ್ಥ ದುಬಾರಿ

download

ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆ ಕಂಡಿರುವುದರಿಂದ ಚಿಲ್ಲರೆ ಹಣದುಬ್ಬರವು ಫೆಬ್ರುವರಿಯಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇ. ೩.೬೫ಕ್ಕೆ ಏರಿಕೆ ಕಂಡಿದೆ.
ಗ್ರಾಹಕ ಬೆಲೆ ಸೂಚ್ಯಂಕ ಸಿಪಿ‌ಐ ಆಧರಿಸಿದ ಚಿಲ್ಲರೆ ಹಣದುಬ್ಬರ ನೋಟು ರದ್ದತಿಯ ಪ್ರಭಾವದಿಂದ ಜನವರಿಯಲ್ಲಿ ಶೇ. ೩.೧೭ಕ್ಕೆ ಇಳಿಕೆಯಾಗಿತ್ತು ಎಂದು ಕೇಂದ್ರ ಸರ್ಕಾರದ ಅಂಕಿ ಅಂಶ ಇಲಾಖೆಯು ಮಾಹಿತಿ ನೀಡಿದೆ. ಗ್ರಾಹಕ ಆಹಾರ ಬೆಲೆ ಸೂಚ್ಯಂಕವು ಜನವರಿಯಲ್ಲಿ ಶೇ. ೨.೦೧ಕ್ಕೆ ಏರಿಕೆಯಾಗಿದೆ. ಜನವರಿಯಲ್ಲಿ ಶೇ.?೦.೬೧ರಷ್ಟು ಅಲ್ಪ ಮಟ್ಟದಲ್ಲಿತ್ತು.
ಹಣ್ಣುಗಳ ಬೆಲೆ ಶೇ. ೮.೩೩ರಷ್ಟು, ಇಂಧನ ಮತ್ತು ವಿದ್ಯುತ್ ಬೆಲೆ ಶೇ. ೩.೯ ರಷ್ಟು ಏರಿಕೆಯಾಗಿವೆ. ಅಂತೆಯೇ, ಮಾಂಸ ಮತ್ತು ಮೀನಿನ ಬೆಲೆ ಶೇ. ೩.೬ರಷ್ಟು ಹೆಚ್ಚಾಗಿದೆ. ಸಕ್ಕರೆಯ ಬೆಲೆ ಶೇ. ೧೯ ರಷ್ಟು ಭಾರಿ ಏರಿಕೆ ಕಂಡಿದೆ. ಚಿಲ್ಲರೆ ಹಣದುಬ್ಬರ ಗ್ರಾಮೀಣ?ಭಾಗದಲ್ಲಿ ಶೇ. ೩.೩೬ರಿಂದ ಶೇ. ೩.೬೭ ಮತ್ತು ನಗರ ಪ್ರದೇಶದಲ್ಲಿ ಶೇ. ೨.೯ರಿಂದ ಶೇ. ೩.೫೫ಕ್ಕೆ ಏರಿಕೆಯಾಗಿದೆ.This post first appeared on V4news, please read the originial post: here

Share the post

ಹಣದುಬ್ಬರ ಬಹಳ ಏರಿಕೆ, ಆಹಾರ ಪದಾರ್ಥ ದುಬಾರಿ

×

Subscribe to V4news

Get updates delivered right to your inbox!

Thank you for your subscription

×