Get Even More Visitors To Your Blog, Upgrade To A Business Listing >>

ಸಿದ್ದರಾಮಯ್ಯರಿಂದ ೨೦೧೬-೧೭ರ ಬಜೆಟ್ ಮಂಡನೆ, ತಾಲೂಕು ರಚನೆ, ಅಗ್ಗದ ಊಟ, ಭರ್ಜರಿ ಕೊಡುಗೆ

m_id_460865_karantaka_budget

ಮುಖ್ಯಮಂತ್ರಿ ಮತ್ತು ಹಣಕಾಸು ಮಂತ್ರಿ ಸಿದ್ದರಾಮಯ್ಯನವರು ಈ ಸಾಲಿನ ಬಜೆಟ್ ಮಂಡಿಸಿ ಹಲವು ತಾಲೂಕುಗಳು ಹಾಗೂ ಅಗ್ಗದ ಆಹಾರಗಳ ಕ್ಯಾಂಟೀನ್ ಘೋಷಣೆ ಮಂಜೂರು ಮಾಡಿದರು.
ಬಜೆಟ್‌ನ ಮುಖ್ಯಾಂಶಗಳು ಮುಂದಿನಂತಿವೆ. ನಿವೃತ್ತ ಪತ್ರಕರ್ತರ ಮಾಸಾಶನ ೮ಸಾವಿರದಿಂದ ೧೦ ಸಾವಿರಕ್ಕೆ ಹೆಚ್ಚಳ. ಪೊಲೀಸ್ ತರಬೇತಿ ಶಾಲೆಗಳ ಬಲವರ್ಧನೆಗೆ ೧೦ ಕೋಟಿ ಅನುದಾನ. ರಾಯಚೂರಿನಲ್ಲಿ ಹೊಸ ವಿವಿ ಸ್ಥಾಪನೆ. ತೋಟಗಾರಿಕೆ ಇಲಾಖೆಗೆ ೧೦೯೧ ಕೋಟಿ ಅನುದಾನ. ೨ ಹಂತಗಳಲ್ಲಿ ೧,೧೯೧ ಪಿಯು ಉಪನ್ಯಾಸಕರ ನೇಮಕ. ಬೆಂಗಳೂರಿನ ಸಬ್ ಅರ್ಬನ್ ರೈಲ್ವೆ ಯೋಜನೆಗೆ ೩೪೫ ಕೋಟಿ. ಖಾಸಗಿ ಸಂಸ್ಥೆಗಳಲ್ಲಿ ನಿವೃತ್ತಿ ವಯಸ್ಸು ೫೮ರಿಂದ ೬೦ಕ್ಕೆ ಏರಿಕೆ.
ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ೧೦ ಕೋಟಿ ರೂಪಾಯಿ ಅನುದಾನ. ನಮ್ಮ ಮೆಟ್ರೋ ಹೆಚ್ಚುವರಿ ಮಾರ್ಗ ನಿರ್ಮಾಣ. ಸಿಲ್ಕ್ ಬೋರ್ಡ್ ನಿಂದ ಕೆ‌ಆರ್ ಪುರಂ ಜಂಕ್ಷನ್ ವರೆಗೆ ಮಾರ್ಗ. ಡಯಲ್ ೧೦೦ ಜಿಲ್ಲಾ ಕೇಂದ್ರಗಳಿಗೂ ವಿಸ್ತರಣೆ. ೧,೬೨೬ ಪ್ರೌಢಶಿಕ್ಷಕರ ನೇಮಕ. ಪ್ರೌಢಶಿಕ್ಷಣ ಇಲಾಖೆಗೆ ೧೮,೨೬೬ ಕೋಟಿ ರೂಪಾಯಿ ಮೀಸಲು. ಕಲಬುರಗಿಯಲ್ಲಿ ಪೊಲೀಸ್ ಆಯುಕ್ತಾಲಯ ಸ್ಥಾಪನೆ. ಜಿಲ್ಲಾ ಕೇಂದ್ರಗಳಲ್ಲಿನ ಪತ್ರಕರ್ತರಿಗೆ ಉಚಿತ ಬಸ್ ಪಾಸ್.
೧೦ ಸಾವಿರ ಆಟೋ ರಿಕ್ಷಾಗಳಿಗೆ ಸಹಾಯ ಧನ. ಅಪಘಾತದಲ್ಲಿ ಹಸು, ಎತ್ತು ಸಾವನ್ನಪ್ಪಿದರೆ ೧೦ ಸಾವಿರ ರೂಪಾಯಿ ಪರಿಹಾರ. ಉಡುಪಿ ಜಿಲ್ಲೆಯ ಬೈಂದೂರು, ಬ್ರಹ್ಮಾವರ, ಕಾಪು ಹೊಸ ತಾಲೂಕುಗಳಾಗಿ ಘೋಷಣೆ. ರಾಯಚೂದು ಜಿಲ್ಲೆಯ ಮಸ್ಕಿ, ಸಿರವಾರ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಕಡಬ ಹೊಸ ತಾಲೂಕುಗಳಾಗಿ ಘೋಷಣೆ. ೨ ಸ್ಟ್ರೋಕ್ ಆಟೋಗಳ ರದ್ದತಿಗೆ ಕ್ರಮ. ಕಾರವಾರ, ಮಡಿಕೇರಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಏರ್ ಸ್ಟ್ರಿಪ್ ನಿರ್ಮಾಣ. ೧೦ ಸಾವಿರ ಉತ್ಕೃಷ್ಟ ಟಗರು ಉತ್ಪಾದನಾ ಘಟಕ. ರಾಜ್ಯದ ಪ್ರತೀ ಮಾಂಸದಂಗಡಿಗೆ ೧.೨೫ ಲಕ್ಷ ರೂ. ಅನುದಾನ. ಉನ್ನತ ಶಿಕ್ಷಣ ಇಲಾಖೆಗೆ ಒಟ್ಟು ೪,೪೦೧ ಕೋಟಿ ರೂಪಾಯಿ ಅನುದಾನ. ಶಾಲಾ ನಿರ್ವಹಣೆ, ಸುಧಾರಣೆಗೆ ಶಿಕ್ಷಣ ಕಿರಣ ಯೋಜನೆ ಜಾರಿ. ಹಂಪಿ ಕನ್ನಡ ವಿವಿಗೆ ೨೫ ಕೋಟಿ ಯೋಜನೆ.
ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ವೈಫೈ ಯೋಜನೆ. ರಾಜ್ಯದ ೯ ಜಿಲ್ಲೆಗಳಲ್ಲಿ ಕರ್ನಾಟಕ ವನ್ ಕೇಂದ್ರ ಸ್ಥಾಪನೆ. ಅಬಕಾರಿ ಶುಲ್ಕದಲ್ಲಿ ಹೆಚ್ಚಳ. ರಾಜ್ಯದಲ್ಲಿ ನೀರಾ ನೀತಿ ಜಾರಿ. ರಾಜ್ಯ ಅಬಕಾರಿ ಕಾಯ್ದೆಗೆ ತಿದ್ದುಪಡಿ. ಕೆರೆ ಸಂಜೀವಿನಿ ಯೋಜನೆ ೧೦೦ ಕೋಟಿ ರೂಪಾಯಿ. ೨೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ಯೋಜನೆ. ಎಪಿ‌ಎಂಪಿಸಿಯಲ್ಲಿ ವೈಜ್ಞಾನಿಕವಾಗಿ ಹಣ್ಣು ಮಾಗಿಸುವ ವ್ಯವಸ್ಥೆಗೆ ೧೦ ಕೋಟಿ ಮೀಸಲು. ಕನ್ನಡ ಚಿತ್ರೋದ್ಯಮ ಅಭಿವೃದ್ಧಿಗೆ ಮೈಸೂರಿನ ಹಿಮ್ಮಾವು ಎಂಬಲ್ಲಿ ಚಿತ್ರನಗರಿ ನಿರ್ಮಾಣ. ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಪ್ರದರ್ಶನ ಕಡ್ಡಾಯ.
ಶ್ರವಣಬೆಳಗೊಳ ಮಹಾಮಸ್ತಾಕಾಭಿಷೇಕಕ್ಕೆ ೧೭೫ ಕೋಟಿ. ಖಾಸಗಿ ಸಂಸ್ಥೆಗಳಲ್ಲಿ ಎಸ್ ಸಿ, ಎಸ್ ಟಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಆಶಾದೀಪ ಯೋಜನೆ. ತುಂತುರು ನೀರಾವರಿ ಯೋಜನೆಗೆ ೩೭೫ ಕೋಟಿ ಅನುದಾನ. ಕೃಷಿ ಇಲಾಖೆಗೆ ೫,೦೮೦ ಕೋಟಿ ರೂಪಾಯಿ ಅನುದಾನ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್. ದಾವಣಗೆರೆ, ತುಮಕೂರು, ವಿಜಯಪುರ,ಕೋಲಾರ, ರಾಮನಗರದಲ್ಲಿ ಸೂಪರ್, ಸ್ಪೆಶಾಲಿಟಿ ಆಸ್ಪತ್ರೆ.
ಒಂದನೇ ತರಗತಿಯಿಂದಲೇ ಇಂಗ್ಲಿಷ್ ಬೋಧನೆ. ಬೆಳೆಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಕೆ. ಭತ್ತ, ಅಕ್ಕಿ, ಗೋಧಿ, ಕಾಳುಗಳ ಮೇಲೆ ತೆರಿಗೆ ವಿನಾಯ್ತಿ. ೪೨ ಕೋಟಿ ರೂಪಾಯಿ ವೆಚ್ಚದಲ್ಲಿ ೧೦ ಕೆರೆಗಳ ಅಭಿವೃದ್ಧಿ. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರಿಗಾಗಿ ೧೪೫ ಚಿಕಿತ್ಸಾ ಘಟಕ ಸ್ಥಾಪನೆ. ೪,೨೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ರೋ ೨ನೇ ಹಂತ ಜಾರಿ. ೩ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನೀರಾವರಿ ಯೋಜನೆ.
ಅಂಗನವಾಡಿ ಮಕ್ಕಳಿಗೆ ವಾರದಲ್ಲಿ ೨ ದಿನ ಮೊಟ್ಟೆ. ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ ೫ ದಿನ ಮಕ್ಕಳಿಗೆ ಹಾಲು ವಿತರಣೆ. ೨೦೧೭-೧೮ನೇ ಸಾಲಿನಲ್ಲಿ ೧,೮೬,೫೬೧ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ. ೨೫ ಲಕ್ಷ ರೈತರಿಗೆ ೧೩, ೫೦೦ ಕೋಟಿ ರೂಪಾಯಿ ಕೃಷಿ ಸಾಲ ನೀಡುವ ಗುರಿ.
೫ ರೂಪಾಯಿಗೆ ತಿಂಡಿ, ೧೦ ರೂಪಾಯಿಗೆ ಊಟ. ಇದು ನಮ್ಮ ಕ್ಯಾಂಟೀನ್ ವಿಶೇಷತೆ. ರೈತರ ಸಾಲ ಮನ್ನಾ ಇಲ್ಲ. ಸಾಲ ಮರುಪಾವತಿ ಅವಧಿ ವಿಸ್ತರಣೆ. ೧೨ ಲಕ್ಷ ಮಹಿಳೆಯರಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ. ಹೊಸ ತಾಲೂಕು ಪಂಚಾಯ್ತಿ ಕಚೇರಿ ನಿರ್ಮಾಣಕ್ಕೆ ೩೦೦ ಕೋಟಿ ಅನುದಾನ.This post first appeared on V4news, please read the originial post: here

Share the post

ಸಿದ್ದರಾಮಯ್ಯರಿಂದ ೨೦೧೬-೧೭ರ ಬಜೆಟ್ ಮಂಡನೆ, ತಾಲೂಕು ರಚನೆ, ಅಗ್ಗದ ಊಟ, ಭರ್ಜರಿ ಕೊಡುಗೆ

×

Subscribe to V4news

Get updates delivered right to your inbox!

Thank you for your subscription

×