Get Even More Visitors To Your Blog, Upgrade To A Business Listing >>

ಡ್ಯಾನ್ಸ್ ತರಗತಿಗೆ ನುಗ್ಗಿದ 25 ಮಂದಿ ತಂಡದಿಂದ ದಾಂಧಲೆ: ಶಿಕ್ಷಕಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ: ಹಲವರ ಸೆರೆ

Tags: agravesup

vlcsnap-2017-03-15-11h22m05s179-copy

ಮಂಜೇಶ್ವರ: ಮದುವೆ ನಿಶ್ಚಯ ಮಾಡಿದ ವಧು ವರನನ್ನು ನಿರಾಕರಿಸಿದಳೆಂಬ ಧ್ವೇಷದಿಂದ 25 ಮಂದಿಯ ತಂಡ ವಧು ಕಾರ್ಯನಿರ್ವಹಿಸುತಿದ್ದ ಡ್ಯಾನ್ಸ್ ತರಗತಿಗೆ ನುಗ್ಗಿ ಕಚೇರಿಯ ಶಟರ್ ಹಾಕಿ ವಧುವಿಗೆ ಹಿಗ್ಗಾ ಮಗ್ಗಾ ಥಳಿಸಿ ಗಂಭೀರ ಗಾಯಗೊಳಿಸಿದ ಘಟನೆ ಮಂಜೇಶ್ವರ ರಾಗಂ ಜಂಕ್ಷನ್ ನಲ್ಲಿ ನಡೆದಿದೆ.vlcsnap-2017-03-15-11h21m53s65-copyಮೂಲತಃ ಕೊಲ್ಯ ನಿವಾಸಿ ಸಂಧ್ಯಾ (25) ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಯುವತಿ. ಈಕೆಯನ್ನು ಕುಂಬಳೆ ಸಹಕಾರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈಕೆಯ ಮದುವೆ ಮಜಿಬೈಲು ಬೆಜ್ಜ ನಿವಾಸಿ ಮನೋಜ್ ಎಂಬತನ ಜೊತೆ ನಿಶ್ಚಿತವಾಗಿತ್ತು. ಆದರೆ ಬಳಿಕ ಏನೋ ಅನಿವಾರ್ಯ ಕಾರಣಗಳಿಂದ ಸಂಧ್ಯಾ ಈ ಸಂಬಂಧ ಬೇಡಾ ಎಂಬ ನಿರ್ಧಾರಕ್ಕೆ ಬಂದಿದ್ದಳು. ಇದರ ಪೂರ್ವ ಧ್ವೇಷವನ್ನು ಇಟ್ಟು ಕೊಂಡ ವರ ಆತನ ಸಹಚರರಾದ ಸುಮಾರು 25 ಮಂದಿಯನ್ನು ಮಂಜೇಶ್ವರ ರಾಗಂ ಜಂಕ್ಷನ್ ಸಮೀಪವಿರ್ವ ಮೆಟ್ರೋ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಡ್ಯಾನ್ಸ್ ತರಗತಿಗೆ ಕಳುಹಿಸಿ ಈ ಕೃತ್ಯ ನಡೆಸಿರುವುದಾಗಿ ಆರೋಪಿಸಲಾಗಿದೆ. ತರಗತಿಯ ಸಾಮಾಗ್ರಿಗಳನ್ನು ಹಾನಿಗೈದ ತಂಡ ಯುವತಿಗೆ ಗಂಭೀರವಾಗಿ ಹಲ್ಲೆಗೈದಿದೆ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿದ ಮಂಜೇಶ್ವರ ಪೊಲೀಸರು ಉದ್ಯಾವರ ನಿವಾಸಿ ವಿಶ್ವನಾಥ ಹಾಗು ಪೊಸೋಟು ನಿವಾಸಿ ನವೀನ್ ಎಂಬಾತನನ್ನು ಬಂಧಿಸಿ ಸುಮಾರು ಆರು ಮಂದಿಯನ್ನು ವಶಕ್ಕೆ ತೆಗೆದು ತನಿಖೆ ನಡೆಸುತಿದ್ದಾರೆ.



This post first appeared on V4news, please read the originial post: here

Share the post

ಡ್ಯಾನ್ಸ್ ತರಗತಿಗೆ ನುಗ್ಗಿದ 25 ಮಂದಿ ತಂಡದಿಂದ ದಾಂಧಲೆ: ಶಿಕ್ಷಕಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ: ಹಲವರ ಸೆರೆ

×

Subscribe to V4news

Get updates delivered right to your inbox!

Thank you for your subscription

×