Get Even More Visitors To Your Blog, Upgrade To A Business Listing >>

10ರೂಪಾಯಿ ನಾಣ್ಯಕ್ಕೂ ತಟ್ಟಿದ ನೋಟು ಅಮಾನ್ಯೀಕರಣದ ಭಯ

vlcsnap-2017-03-15-23h29m28s114-copy

ಪುತ್ತೂರು ನೋಟು ಅಮಾನ್ಯೀಕರಣದ ಭಯ ನಾಣ್ಯಕ್ಕೂ ತಟ್ಟಿದಂತಿದೆ. ಹೌದು, ಪುತ್ತೂರು ನಗರದಲ್ಲಿ ೧೦ ರೂಪಾಯಿ ನಾಣ್ಯಗಳ ಚಲಾವಣೆಗೆ ಜನರು ಹಿಂದೇಟು ಹಾಕುತ್ತಿದ್ದಾರೆ. ರಿಕ್ಷಾ ಚಾಲಕರು 10 ರೂಪಾಯಿಯ ನಾಣ್ಯ ಪಡೆಯಲು ಹಿಂದೇಟು ಹಾಕುತ್ತಿದ್ದಂತೆ ಜನರಲ್ಲಿ ದಿಗ್ಭ್ರಮೆ ಮೂಡಿದ್ದು ಸುಳ್ಳಲ್ಲ. ಆದರೆ ವಾಸ್ತವದಲ್ಲಿ 10 ರೂಪಾಯಿಯ ನಾಣ್ಯ ಚಲಾವಣೆಗೆ ಯಾವುದೇ ಅಧಿಕೃತ ಅಡ್ಡಿ ಉಂಟಾಗಿಲ್ಲ.ರಿಕ್ಷಾ ಚಾಲಕರು, ಅಂಗಡಿ ಮಾಲೀಕರು, ದಿನಸಿ, ಕಿರಣಿ ಅಂಗಡಿಯವರು 10 ರೂಪಾಯಿಯ ನಾಣ್ಯ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದೆ ಎನ್ನುವುದಷ್ಟೇ ಇವರು ನೀಡುವ ಕಾರಣ. ವರದಿ ಬಗ್ಗೆ ಬ್ಯಾಂಕ್ ನೀಡಿದ ಸ್ಪಷ್ಟೀಕರಣವನ್ನು ತಿಳಿದುಕೊಳ್ಳದ ಪರಿಣಾಮ ಜನಸಾಮಾನ್ಯರು ಭವಣೆ ಪಡುವಂತಾಗಿದೆ.10 ರೂಪಾಯಿಯ ನಾಣ್ಯ ಇರುವವರ ಏನು ಮಾಡಬೇಕು? ಇದು ಜನಸಾಮಾನ್ಯರು ಕೇಳುವ ಪ್ರಶ್ನೆ. ಹಾಗೆಂದು ಎಲ್ಲಾ ಕಡೆಯೂ ಈ ಸಮಸ್ಯೆ ಎದುರಾಗಿದೆ ಎಂದು ಹೇಳಿದರೆ ತಪ್ಪು. ರಿಸರ್ವ್ ಬ್ಯಾಂಕ್‌ನ ಹೇಳಿಕೆ ಬಗ್ಗೆ ತಿಳಿದುಕೊಂಡವರು, ಜನಸಾಮಾನ್ಯರ ತಪ್ಪಭಿಪ್ರಾಯವನ್ನು ತಿದ್ದುವ ಕೆಲಸವನ್ನು ಮಾಡಿದ್ದಾರೆ. ವಿದ್ಯಾವಂತರೇ 10 ರೂಪಾಯಿಯ ನಾಣ್ಯ ಪಡೆಯಲು ಹಿಂದೇಟು ಹಾಕಿದಾಗ, ತಿದ್ದಿ ಬುದ್ಧಿ ಹೇಳಿದವರು ಇದ್ದಾರೆ. ವಿದ್ಯಾವಂತರೇ ತಪ್ಪು ಮಾಡಿದರೆ, ಗ್ರಾಮೀಣ ಭಾಗದಿಂದ ಬರುವ ಜನಸಾಮಾನ್ಯ ಏನು ಮಾಡಬೇಕು. ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳುವಂತೆ ವಿವರಿಸಿದ್ದಾರೆ.ಒಂದು ರೀತಿಯಲ್ಲಿ ಸಮಸ್ಯೆ ಸೃಷ್ಟಿಗೆ ಬ್ಯಾಂಕ್‌ಗಳೆ ಹೊಣೆ. ಅಂದರೆ ಸಮಸ್ಯೆಯ ಮೂಲ ಕೆದಕುತ್ತಾ ಸಾಗಿದರೆ ಬ್ಯಾಂಕ್‌ನತ್ತಲೇ ಕೈ ಬೊಟ್ಟು ಮಾಡಿ ತೋರಿಸುತ್ತಿದೆ. ಬ್ಯಾಂಕ್‌ನಲ್ಲಿ ನಾಣ್ಯ ಪಡೆದುಕೊಳ್ಳುವುದು ಕಷ್ಟ. ಯಾಕೆಂದರೆ ಲೆಕ್ಕ ಮಾಡಲು ಪುರುಸೋತ್ತಿಲ್ಲ. ನೋಟು ನೀಡಿದರೆ ಎಣಿಸಲು ಮೆಷಿನ್ ಇದೆ. ಈ ಕಾರಣಕ್ಕೆ ಬ್ಯಾಂಕ್ ಸಿಬ್ಬಂದಿಗಳು, ನಾಣ್ಯವನ್ನು ನಿರಾಕರಿಸುತ್ತಿದ್ದಾರೆ. ನಾಣ್ಯದ ಬದಲು ನೋಟನ್ನೇ ನೀಡಿ ಎಂದು ಗ್ರಾಹಕರಿಗೆ ತಿಳಿಸುತ್ತಿದ್ದಾರೆ. ಇದು ಸಮಾಜಕ್ಕೆ ತಪ್ಪು ಅಭಿಪ್ರಾಯ ರವಾನೆಯಾಗುವಂತೆ ಮಾಡಿದೆ. ಬ್ಯಾಂಕ್ ಸಿಬ್ಬಂದಿಯ ಮಾತನ್ನು ಪೂರ್ತಿಯಾಗಿ ಕೇಳಿಕೊಳ್ಳದೇ ಇರುವುದು ಇನ್ನೊಂದು ಕಾರಣ. ನಾಣ್ಯವನ್ನು ಎಣಿಸಿ, ಪ್ಲಾಸ್ಟಿಕ್‌ನಲ್ಲಿ ತುಂಬಿಸಿ ನೀಡಿದರೆ ತೆಗೆದುಕೊಳ್ಳುವುದಾಗಿಯೂ ಹೇಳುತ್ತಾರೆ ಬ್ಯಾಂಕ್ ಸಿಬ್ಬಂದಿ. ಏನೇ ಇದ್ದರೂ, ಸಮಸ್ಯೆಯ ಮೂಲ ಬ್ಯಾಂಕ್‌ನಿಂದಲೇ ಹೊರಟಿರುವುದು ಸುಳ್ಳಲ್ಲ. ಈ ಗೊಂದಲಕ್ಕೆ ಪೂರ್ಣ ವಿರಾಮ ನೀಡುವ ಹೊಣೆಯೂ ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳಿಂದಲೇ ಆಗಬೇಕಿದೆ.ನೋಟು ಅಮಾನ್ಯೀಕರಣದ ಸಂದರ್ಭ ಚಿಲ್ಲರೆ ಮಾಡುವುದೇ ಸಮಸ್ಯೆ. ನಾಣ್ಯದ ವದಂತಿ ಹಿನ್ನೆಲೆಯಲ್ಲಿ 10 ರೂಪಾಯಿಯ ನಾಣ್ಯ ಇಟ್ಟುಕೊಳ್ಳಲೇ ಭಯ ಪಟ್ಟುಕೊಳ್ಳುತ್ತಿದ್ದಾರೆ. ತಮ್ಮ ಬಳಿ ಇರುವ ಎಲ್ಲಾ 10 ರೂಪಾಯಿಯ ನಾಣ್ಯಗಳನ್ನು ಇನ್ನೊಬ್ಬರಿಗೆ ರವಾನಿಸಿ ಕೈ ತೊಳೆದುಕೊಳ್ಳುವ ಪ್ರಸಂಗವೂ ನಡೆಯುತ್ತಿದೆ. ಒಂದು ರೀತಿಯಲ್ಲಿ ಗಮನಿಸಿದರೆ ಇದು ಚಿಲ್ಲರೆ ಸಮಸ್ಯೆಯೇ ಸರಿ.ನೋಟು ಅಮಾನ್ಯೀಕರಣದ ಬಳಿಕ ಸಾಮಾಜಿಕ ವಲಯದಲ್ಲಿ ಸಾಕಷ್ಟು ಆತಂಕ ತಲೆದೋರಿದೆ. ಯಾವ ಹೊತ್ತಿನಲ್ಲಿ ಯಾವ ಆದೇಶ ಹೊರಬೀಳುತ್ತಿದೆಯೋ, ಆದೇಶ ಇನ್ನೆಷ್ಟು ಸಮಸ್ಯೆ ಸೃಷ್ಟಿಸಲಿದೆಯೋ ಎಂಬ ಭಯವೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ. ನಾಣ್ಯ ಅಮಾನ್ಯೀಕರಣ ಮಾಡಿದರೆ ಎದುರಾಗುವ ಸಮಸ್ಯೆಗೆ ಈಗಲೇ ಪರಿಹಾರ ಕಂಡುಕೊಳ್ಳಲು ಮುಂದಾದಂತಿದೆ ಜನಸಾಮಾನ್ಯರ ಪರಿಸ್ಥಿತಿ. ಬ್ಯಾಂಕ್‌ನಿಂದಲೇ ಬಾಯಿ ಮಾತಿನಲ್ಲಿ ಜಾಗೃತಿ ಮೂಡಿಸಿದರೂ ನಂಬದಂತಹ ಸ್ಥಿತಿಯಿದೆ. ಅನಾವಶ್ಯಕ ಗೊಂದಲಗಳಿಗೆ ಒಳಗಾಗುವ ಜನಸಾಮಾನ್ಯರಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡುವ ಕೆಲಸ ಆಗಬೇಕಿದೆ. ರಿಕ್ಷಾ ಚಾಲಕರು, ಅಂಗಡಿ ಮಾಲೀಕರು, ಬ್ಯಾಂಕ್‌ನವರು ೧೦ ರೂಪಾಯಿಯ ನಾಣ್ಯ ಸ್ವೀಕರಿಸುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ. ರಿಸರ್ವ್ ಬ್ಯಾಂಕ್ ಈ ಬಗ್ಗೆ ಸ್ಪಷ್ಟೀಕರಣ ನೀಡಿದರೂ, ಜನಸಾಮಾನ್ಯರು ನಂಬದ ಸ್ಥಿತಿಯಿದೆ. ಆದ್ದರಿಂದ ಬ್ಯಾಂಕ್ ಅಧಿಕಾರಿಗಳೇ ಇದಕ್ಕೆ ಪರಿಹಾರ ಸೂಚಿಸಬೇಕು.



This post first appeared on V4news, please read the originial post: here

Share the post

10ರೂಪಾಯಿ ನಾಣ್ಯಕ್ಕೂ ತಟ್ಟಿದ ನೋಟು ಅಮಾನ್ಯೀಕರಣದ ಭಯ

×

Subscribe to V4news

Get updates delivered right to your inbox!

Thank you for your subscription

×