Get Even More Visitors To Your Blog, Upgrade To A Business Listing >>

ಉಡುಪಿ ಬಿಜೆಪಿ ಕಚೇರಿಗೆ ಮೊದಲ ಭೇಟಿಯಿತ್ತ ಜಯಪ್ರಕಾಶ್ ಹೆಗ್ಡೆ

Tags: agravesup

fxxo7pj5

ಪಕ್ಷ ಬದಲಾಯಿಸಿದ್ರೆ ಇದೇ ಸಮಸ್ಯೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಗೊಂಡ ಉಡುಪಿಯ ಪ್ರಬಾವೀ ರಾಜಕಾರಣಿ ಜಯಪ್ರಕಾಶ್ ಹೆಗ್ಡೆಗೆ ಇದೇ ಅನುಭವವಾಯಿತು. ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಜಯಪ್ರಕಾಶ್ ಹೆಗ್ಡೆ ಮಾತು ಆರಂಭಿಸುವಾಗ ಕುಂದಾಪುರ ಬ್ಲಾಕ್ ಕಾಂಗ್ರೆಸ್ ನ ಅಂತಾ ಶುರು ಮಾಡಿದ್ರು .. ತಕ್ಷಣ ಅಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರಿಗೆ ನಗೆಯೋ ನಗೆ. ತಕ್ಷಣ ಸುಧಾರಿಸುಕೊಂಡು ಈ ಹಿಂದೆ ಜನತಾ ಪಕ್ಷದಿಂದ ಕಾಂಗ್ರೆಸ್ ಗೆ ಬಂದಾಗ ಹೀಗಾಗಿತ್ತು ಎಂದು ಹೇಳಿದರು.  ಅಲ್ಲದೇ ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಎಂದು ಹೇಳಿದರು. ಮೊದಲ ಬಾರಿಗೆ ಕಚೇರಿಗೆ ಬಂದ ಜಯಪ್ರಕಾಶ್ ಹೆಗ್ಡೆಯವರನ್ನು ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ರಿಪೋರ್ಟರ್: ಸಂತೋಷ್ ಸರಳೇಬೆಟ್ಟುThis post first appeared on V4news, please read the originial post: here

Share the post

ಉಡುಪಿ ಬಿಜೆಪಿ ಕಚೇರಿಗೆ ಮೊದಲ ಭೇಟಿಯಿತ್ತ ಜಯಪ್ರಕಾಶ್ ಹೆಗ್ಡೆ

×

Subscribe to V4news

Get updates delivered right to your inbox!

Thank you for your subscription

×