Get Even More Visitors To Your Blog, Upgrade To A Business Listing >>

ಗ್ರಾಮೀಣ ಭಾಗದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಗಳ ಕೊರತೆ : ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ

vlcsnap-2017-03-15-10h02m29s37-copy

ಉಳ್ಳಾಲ: ಗ್ರಾಮೀಣ ಭಾಗದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಗಳ ಕೊರತೆ ಇದ್ದು, ಅಲ್ಲಿಯೂ ಸ್ಥಾಪನೆಗೊಂಡಲ್ಲಿ ಕನ್ನಡ ಚಿತ್ರರಂಗ ಇನ್ನಷ್ಟು ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಕನ್ನಡ ಚಿತ್ರರಂಗದ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. vlcsnap-2017-03-15-10h02m24s230-copy

vlcsnap-2017-03-15-10h02m40s143-copy

vlcsnap-2017-03-15-10h02m50s244-copyನಿಟ್ಟೆ ಸಂವಹನ ಕಾಲೇಜು ದೇರಳಕಟ್ಟೆಯ ಪಾನೀರು ಕ್ಯಾಂಪಸ್ಸಿನಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ವಿಚಾರಸಂಕಿರಣ ಮತ್ತು ಬೀಕಾನ್ಸ್ -೨ಕೆ೧೭ ಮೀಡಿಯಾ ಉತ್ಸವದಲ್ಲಿ ವಿದ್ಯಾರ್ಥಿಗಳ ಜತೆಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪುತ್ತೂರಿನ ಚಿತ್ರಮಂದಿರದಲ್ಲಿ ಕಿರಿಕ್ ಪಾರ್ಟಿ ಚಿತ್ರ ಪ್ರದರ್ಶನವಾಗದೆ, ಊರಿನ ಜನರಿಗೆ ಚಿತ್ರ ವೀಕ್ಷಿಸಲು ಸಾಧ್ಯವಾಗಿಲ್ಲ, ಕನ್ನಡ ಚಿತ್ರಗಳು ಉಳಿದ ರಾಜ್ಯಗಳಲ್ಲಿ ಪ್ರದರ್ಶನಗೊಳ್ಳುತ್ತಿಲ್ಲ, ನಿರ್ದೇಶಕನಾದ ಬಳಿಕ ಅನುಭವಗಳು, ಹೊಸ ಚಿತ್ರಗಳು, ಚಿತ್ರದ ಸಂಗೀತ ನೀಡುವವರು ಹೊರರಾಜ್ಯದವರೇ ಇದ್ದು, ಕರ್ನಾಟಕದವರೇಕಿಲ್ಲ?, ಹೊಡಿಮಗ ಸಾಹಿತ್ಯದ ನಡುವೆ ಮನಮುಟ್ಟುವ ಸಾಹಿತ್ಯದ ರಚನೆ ಹೇಗೆ ಸಾಧ್ಯವಾಯಿತು?, ತುಳು ಚಿತ್ರ ನಡೆಸುವ ಯೋಜನೆ ? ಅಪನಗದೀಕರಣದಿಂದ ಚಿತ್ರ ನಿರ್ಮಾಣಕ್ಕೆ ತೊಂದರೆ? ಅನ್ನುವ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ನಟ ರಕ್ಷಿತ್ ಶೆಟ್ಟಿ ಮುಂದಿಟ್ಟರು.ಚಿತ್ರ ವಿತರಣೆಯ ವಿಭಾಗ ಕರ್ನಾಟಕದಲ್ಲಿ 70-80 ವರ್ಷಗಳ ಹಿಂದಿನಂತೆ ಕಾರ‍್ಯಾಚರಿಸುತ್ತಿದೆ. ಇದರಿಂದಾಗಿ ಗ್ರಾಮೀಣ ಭಾಗದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರಕಟಿಸಲು ಅಸಾಧ್ಯವಾಗುತ್ತಿದೆ. ವಿತರಣೆ ವಿಭಾಗ ಮುಂಚೂಣಿಯಾಗಿ ಕಾರ‍್ಯಾಚರಿಸಿದಾಗ ಕರ್ನಾಟಕದ ಚಿತ್ರಗಳು ಬೆಳೆಯಲು ಸಾಧ್ಯವಾಗುತ್ತದೆ. ಆಯಾಯ ರಾಜ್ಯಗಳಲ್ಲಿ ಅವರ ಭಾಷೆಯ ನಾಯಕ ನಟರ ಚಿತ್ರಗಳು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತದೆ. ಇದರಿಂದ ಇತರೆ ಭಾಷೆಗಳ ಚಿತ್ರಗಳು ಯಶಸ್ವಿಯಾಗಿ ಪ್ರದರ್ಶನವಾಗಲು ಸಾಧ್ಯವಿಲ್ಲ. ಆದರೂ ಉಳಿದವರು ಕಂಡಂತೆ ಚಿತ್ರ ಚೆನ್ನೈನಲ್ಲಿ ಪ್ರದರ್ಶನ ಕಂಡಿತ್ತು, ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಎಲ್ಲಾ ಚಿತ್ರಗಳಿಗೂ ಅವಕಾಶ ಇರುವುದು ಉಲ್ಲೇಖನೀಯ.ಆತ್ಮವಿಶ್ವಾಸದಿಂದ ಕಿರುಚಿತ್ರಗಳನ್ನು ನಡೆಸಲು ಆರಂಭಿಸಿದ್ದೆ. ಚಿತ್ರಗಳ ವೀಕ್ಷಣೆ, ಓದುವುದು, ಸಂದರ್ಶನಗಳ ವೀಕ್ಷಣೆ ಇವೆಲ್ಲಾ ಯಶಸ್ವಿ ಚಿತ್ರಗಳನ್ನು ನಡೆಸಲು ಪ್ರೇರೇಪಿಸಿತು. ಉತ್ತಮ ನಿರ್ದೇಶಕನಾದಲ್ಲಿ, ಉತ್ತಮ ನಾಯಕ ನಟನಾಗಲು ಸಾಧ್ಯವೆಂದೆನಿಸಿತು. ಅದರಂತೆ ತುಘಲಕ್ ಚಿತ್ರದೊಂದಿಗೆ ಕ್ನನಡಚಿತ್ರರಂಗಕ್ಕೆ ಪ್ರವೇಶಿಸುವ ಅವಕಾಶ ಇದೀಗ ಯಶಸ್ಸಿನ ಹಾದಿಯನ್ನು ತಲುಪಿಸಿದೆ. ಕಿರುಚಿತ್ರಗಳನ್ನು ರಚಿಸಿ ಅದರ ಮೂಲಕ ಚಿತ್ರದ ಕಲ್ಪನೆ ಇರಿಸುವ ಮೂಲಕ ಮುಂದುವರಿದಲ್ಲಿ ಉತ್ತಮ ಚಿತ್ರಗಳನ್ನು ಹೊರತರಲು ಸಾಧ್ಯ ಅನ್ನುವ ಕಿವಿಮಾತನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಸಂಗೀತ ಕ್ಷೇತ್ರದಲ್ಲಿ ರಾಜ್ಯದ ತಂತ್ರಜ್ಞರ ಕೊರತೆಯಿದೆ. ಕೇರಳ ಮತ್ತು ಚೆನ್ನೈನ ತಂತ್ರಜ್ಞರೇ ಸಂಗೀತ ಕ್ಷೇತ್ರದಲ್ಲಿದ್ದು, ಇದರಿಂದ ಹಲವು ನ್ಯೂನ್ಯತೆಗಳು ಇವೆ. ಮಾತೃಭಾಷೆಯ ತಂತ್ರಜ್ಞರು ಸಂಗೀತ ಕ್ಷೇತ್ರದಲ್ಲಿ ತೊಡಗಿಸುವಂತೆ ಮಾಡಬೇಕಿದೆ. ಉಳಿದ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಿದೆ. ರಾಜ್ಯದ ಮೂಲೆಮೂಲೆಯಲ್ಲೂ ಮಲ್ಟಿಪ್ಲೆಕ್ಸ್ ಥಿಯೇಟರ್ ಗಳು ತೆರೆದರೆ ಕನ್ನಡ ಚಿತ್ರರಂಗದಲ್ಲಿ ಅಭಿವೃದ್ಧಿ ಕಾಣಬಹುದು. ಹೊಡೀಮಗಾ ಸಾಹಿತ್ಯನೇ ಉತ್ತಮ ಸಾಹಿತ್ಯ ಬರೆಯಲು ಪ್ರೋತ್ಸಾಹ ನೀಡಿತ್ತು. ಅಂತಹ ಸಾಹಿತ್ಯವನ್ನು ಕೇಳಿ ಪರ‍್ಯಾಯ ಸಾಹಿತ್ಯದ ಹಾಡುಗಳು ಹೊರಬರಬೇಕೆಂಬ ಉದ್ದೇಶದಿಂದ ಕೆಲ ಸಿದ್ಧಾಂತಗಳನ್ನು ಮನಸಿನಲ್ಲಿಟ್ಟು ರಚಿಸಿದ ಹಾಡುಗಳು ಜನಮೆಚ್ಚುಗೆ ಪಡೆಯಿತು. ನೋಟು ಅಪನಗದೀಕರಣ ವೇಳೆ ಕಿರಿಕ್ ಪಾರ್ಟಿ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯ ಕಂಡಿತ್ತು. ಆದರೆ ದಿನಗೂಲಿ ಕಾರ್ಮಿಕರಿಗೆ ನಗದು ರೂಪದಲ್ಲೇ ಹಣ ಕೊಡಬೇಕಾಗಿತ್ತು. ಇಲ್ಲವಾದಲ್ಲಿ ತೊಂದರೆಯಾಗುತಿತ್ತು ಎಂದು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.ತುಳು ಮಾತೃಭಾಷೆ ಆಗಿರುವುದರಿಂದ ತುಳು ಚಿತ್ರವನ್ನು ರಚಿಸುವ ಉದ್ದೇಶವನ್ನು ಹೊಂದಿದ್ದೇನೆ. ಮಯಾನ್ ಭಾಷೆಯ ‘ಎಪಕಾಲಿಪ್ಟೋ’ ಅನ್ನುವ ಚಿತ್ರ ವಿಶ್ವಾದ್ಯಂತ ಖ್ಯಾತಿಯನ್ನು ಪಡೆದಿತ್ತು. ಈ ಮೂಲಕ ಚಿತ್ರಕ್ಕೆ ಭಾಷೆಯ ಅಗತ್ಯವಿರುವುದಿಲ್ಲ, ನೋಡುವಂತದ್ದಾಗಿದ್ದರೆ ವಿಶ್ವದ ಜನತೆಯೂ ಒಪ್ಪುತ್ತಾರೆ ಅನ್ನುವುದನ್ನು ಚಿತ್ರ ತೋರಿಸಿ ಕೊಟ್ಟಿತ್ತು, ಇಂತಹದ್ದೇ ಮಾದರಿಯಲ್ಲಿ ಬಿಗ್ ಬಜೆಟಿನಲ್ಲಿ ತುಳು ಚಿತ್ರವನ್ನು ರಚಿಸುವ ಉದ್ದೇಶ ಇದೆ. ತುಳು ಸಿನೆಮಾವನ್ನು ವಿಶ್ವದಾದ್ಯಂತ ಜನ ಒಪ್ಪುವಂತೆ ಮಾಡಬೇಕಿದೆ ಎಂದರು.ಸಂವಾದದ ಕೊನೆಯಲ್ಲಿ ರಕ್ಷಿತ್ ಶೆಟ್ಟಿ ಅಭಿಮಾನಿ ವಿದ್ಯಾರ್ಥಿನಿಯೋರ್ವಳು ಅದೇ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವ ಸಹೋದರನ ಮೂಲಕ ನಟನ ಪರಿಚಯಿಸಿಕೊಂಡಳು. ಹಲವು ವರ್ಷಗಳಿಂದ ನಟ ರಕ್ಷಿತ್ ಅವರನ್ನು ಭೇಟಿ ಮಾಡುವ ಆಸೆ ಇಟ್ಟುಕೊಂಡಿದ್ದೆ. ಜಗತ್ತಿನಲ್ಲಿ ನನ್ನಷ್ಟು ಅಭಿಮಾನಿ ಬೇರೆ ಇಲ್ಲ. ಅದಕ್ಕಾಗಿ ಒಂದು ಅಪ್ಪುಗೆಯನ್ನು ನೀಡಬೇಕು ಎಂದು ಕೋರಿಕೊಂಡಾಗ , ನಟ ರಕ್ಷಿತ್ ಅವರ ಅನುಮತಿ ಮೇರೆಗೆ ಓರ್ವ ವಿದ್ಯಾರ್ಥಿನಿ ಅಪ್ಪಿಕೊಂಡೇ ಬಿಟ್ಟರು. ಇದನ್ನು ನೋಡುತ್ತಿದ್ದಂತೆ ಇನ್ನೋರ್ವ ವಿದ್ಯಾರ್ಥಿನಿಯೂ ಅಪ್ಪಿಕೊಳ್ಳುವ ಆಸೆಯನ್ನು ವ್ಯಕ್ತಪಡಿಸಿ ನೇರ ವೇದಿಕೆಗೆ ಆಗಮಿಸಿ ನಟನನ್ನು ಅಪ್ಪಿಯೇ ಬಿಟ್ಟಳು. ಇದರೊಂದಿಗೆ ಅಭಿಮಾನಿ ವಿದ್ಯಾರ್ಥಿಯೋರ್ವ ತಾನು ಚಿತ್ರಿಸಿದ ರಕ್ಷಿತ್ ಶೆಟ್ಟಿ ಭಾವಚಿತ್ರವನ್ನು ಹಸ್ತಾಂತರಿಸಿದರು.This post first appeared on V4news, please read the originial post: here

Share the post

ಗ್ರಾಮೀಣ ಭಾಗದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಗಳ ಕೊರತೆ : ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ

×

Subscribe to V4news

Get updates delivered right to your inbox!

Thank you for your subscription

×