Get Even More Visitors To Your Blog, Upgrade To A Business Listing >>

ಮೋದಿ ಬದಲಾವಣೆಯ ಆಶಾವಾದ ಹುಸಿ, ಕುದುರೆ ವ್ಯಾಪಾರದ ಮೂಲಕ ರಾಜಕೀಯಕ್ಕೆ ಮಸಿ,  ಮಂಗಳೂರಿನಲ್ಲಿ ಜನಾರ್ದನ ಪೂಜಾರಿ

poojary

ಪ್ರಧಾನಿ ಮೋದಿ ಬದಲಾವಣೆ ತರುತ್ತಾರೆ ಎಂಬ ಆಶಾವಾದ ಇತ್ತು. ಆದರೆ, ಕುದುರೆ ವ್ಯಾಪಾರದ ಮೂಲಕ ರಾಜಕೀಯಕ್ಕೆ ಮಸಿ ಬಳಿದಿದ್ದಾರೆ. ಸರ್ಕಾರ ಬೇಡ ಎಂಬ ಅಭಿಪ್ರಾಯಕ್ಕೆ ಜನ ಬರುವಂತಾಗಿದೆ. ಮಣಿಪುರ, ಗೋವಾದಲ್ಲಿ ಬಿಜೆಪಿ ನಡೆ ಸರಿ ಇಲ್ಲ ಅತಿ ದೊಡ್ಡ ಪಕ್ಷಕ್ಕೆ ಅವಕಾಶ ನೀಡಬೇಕು ದೇಶದ ಪ್ರಜಾಪ್ರಭುತ್ವ ಉಳಿಯಬೇಕು ಎಂದು ಮಂಗಳೂರಿನಲ್ಲಿ ಜನಾರ್ದನ ಪೂಜಾರಿ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜನಾರ್ದನ ಪೂಜಾರಿ, ನೋಟು ಅಮಾನ್ಯ ನಿರ್ಬಂಧ ಹಿಂತೆಗೆತ ಸೋಲು ಒಪ್ಪಿಕೊಂಡಂತೆ ಆಗಿದೆ. ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣ ಇಟ್ಟವರು ಖುಷಿಯಲ್ಲಿದ್ದಾರೆ. ತಾಕತ್ತಿದ್ದರೆ ಅಲ್ಲಿ ಇಟ್ಟ ಹಣ ದೇಶಕ್ಕೆ ತರುವ ಕೆಲಸ ಮಾಡಲಿ ಎಂದ ಪೂಜಾರಿ, ಮೋದಿ ಉತ್ತಮ ಭಾಷಣಕಾರ, ಆದರೆ ಬದಲಾವಣೆ ಮಾಡುವ ಭರವಸೆ ಮೂಡಿಸಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಈ ಮೋಡಿ ಇರಲ್ಲ. ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ, ಸಿದ್ದರಾಮಯ್ಯ ಅವರಿಂದ ಸೋಲಾದರಾದೀತು ಅಷ್ಟೆ ಎಂದರು.



This post first appeared on V4news, please read the originial post: here

Share the post

ಮೋದಿ ಬದಲಾವಣೆಯ ಆಶಾವಾದ ಹುಸಿ, ಕುದುರೆ ವ್ಯಾಪಾರದ ಮೂಲಕ ರಾಜಕೀಯಕ್ಕೆ ಮಸಿ,  ಮಂಗಳೂರಿನಲ್ಲಿ ಜನಾರ್ದನ ಪೂಜಾರಿ

×

Subscribe to V4news

Get updates delivered right to your inbox!

Thank you for your subscription

×