Get Even More Visitors To Your Blog, Upgrade To A Business Listing >>

ಕಾಸರಗೋಡು ಜಿಲ್ಲಾಧಿಕಾರಿ ಜನಸಂಪರ್ಕ ಕಾರ್ಯಕ್ರಮ, ಮುಖ್ಯ ಮಂತ್ರಿಯವರ ಪರಿಹಾರ ನಿಧಿಯಿಂದ ಪರಿಹಾರ

manje

ಜಿಲ್ಲಾಧಿಕಾರಿ ಕೆ. ಜೀವನ್ ಬಾಬುರವರ ನೇತೃತ್ವದಲ್ಲಿ ಸಮಕ್ಷಂ ೨೦೧೭ ಯೋಜನ್ಯ ದ್ವಿತೀಯ ಹಂತದ ಜನಸಂಪರ್ಕ ಕಾರ್ಯಕ್ರಮಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಾಲನೆ ದೊರಕಿತು.
ಮಂಜೇಶ್ವರ, ಕಾಸರಗೋಡು ತಾಲೂಕುಗಳಿಂದ ಲಬಿಸಿದ ದೂರುಗಳನ್ನು ಜನಸಂಪರ್ಕ ಕಾರ್ಯಕ್ರಮದಲ್ಲಿ ಪರಿಶೀಲಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ಪ್ರಮುಖ ಉದ್ದೇಶವಾಗಿತ್ತು. ಜನಸಂಪರ್ಕ ಕಾರ್ಯಕ್ರಮಕ್ಕೆ ಆನ್ ಲೈನ್ ಮೂಲಕ ದೂರು ಸಲ್ಲಿಸುವ ಸೌಕರ್ಯವನ್ನು ಏರ್ಪಡಿಸಲಾಗಿತ್ತು. ಇದರಂತೆ ಕಾಸರಗೋಡು ತಾಲೂಕಿನಲ್ಲಿ ೬೩೮ ಹಾಗು ಮಂಜೇಶ್ವರ ತಾಲೂಕಿನಲ್ಲಿ ೩೨೪ ದೂರುಗಳು ಸೇರಿದಂತೆ ಒಟ್ಟು ೯೫೨ ದೂರುಗಳು ಲಭಿಸಿದ್ದವು. ಇದರಲ್ಲಿ ಹೆಚ್ಚಿನವುಗಳು ಭೂದಾಖಲು ಪತ್ರ ಲಭಿಸುವಂತೆ ಮಾಡುವ ಹಾಗೂ ಮುಖ್ಯ ಮಂತ್ರಿಯವರ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕೇಳುವ ಅರ್ಜಿಗಳಾಗಿವೆ.
ಆನ್ ಲೈನ್ ಮೂಲಕ ದೂರು ಸಲ್ಲಿಸಲು ಸಾಧ್ಯವಾಗದವರಿಂದ ಕಾರ್ಯಕ್ರಮದಲ್ಲಿ ನೇರವಾಗಿ ಅರ್ಜಿ ಸ್ವೀಕರಿಸುವ ಸೌಕರ್ಯಗಳನ್ನು ಏರ್ಪಡಿಸಲಾಗಿದೆ. ಜನಸಂಪರ್ಕ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ. ಕರೆನ್ಸಿ ರಹಿತ ವ್ಯಹವಾರ ನಡೆಸುವ ಬಗ್ಗೆ ಜನರಿಗೆ ಪರಿಚಯ ನೀಡಲು ೧೨ ವಿಶೇಷ ಕೌಂಟರುಗಳನ್ನು ಸಜ್ಜೀಕರಿಸಲಾಗಿದೆ. ಇದರಲ್ಲಿ ನಗದು ರಹಿತ ವ್ಯಹವಾರವನ್ನು ಹೇಗೆ ನಡೆಸಬಹುದೆಂಬ ಮಾಹಿತಿಯನ್ನು ನೀಡಲಾಗಿತ್ತು.



This post first appeared on V4news, please read the originial post: here

Share the post

ಕಾಸರಗೋಡು ಜಿಲ್ಲಾಧಿಕಾರಿ ಜನಸಂಪರ್ಕ ಕಾರ್ಯಕ್ರಮ, ಮುಖ್ಯ ಮಂತ್ರಿಯವರ ಪರಿಹಾರ ನಿಧಿಯಿಂದ ಪರಿಹಾರ

×

Subscribe to V4news

Get updates delivered right to your inbox!

Thank you for your subscription

×