Get Even More Visitors To Your Blog, Upgrade To A Business Listing >>

ಬ್ರಹ್ಮಾವರ: ಕೋಡಿಬೆಂಗ್ರೆ ಬಾರ್ಜ್ ಸೇವೆಗೆ ಚಾಲನೆ : ಕ್ರೀಡಾಸಚಿವರಿಂದ ಲೋಕಾರ್ಪಣೆ

vlcsnap-2017-01-24-21h09m03s190-copy

ಬ್ರಹ್ಮಾವರ: ಕೋಡಿಬೆಂಗ್ರೆ ನಿವಾಸಿಗಳ ಬಹುದಿನಗಳ ಕನಸಾದ ಹಂಗಾರಕಟ್ಟೆ-ಕೋಡಿಬೆಂಗ್ರೆ ನಡುವಿನ ಬಾರ್ಜ್ ಸೇವೆಗೆ ಜ.24ರಂದು ಚಾಲನೆ ನೀಡಲಾಯಿತು. ಮೀನುಗಾರಿಕಾ, ಯುವಜನ ಸಬಲೀಕರಣ ಮತ್ತು ಕ್ರೀಡಾಸಚಿವ ಪ್ರಮೋದ್ ಮಧ್ವರಾಜ್ ಅವರು ನೂತನ ಬಾರ್ಜ್ ಲೋಕಾರ್ಪಣೆಗೊಳಿಸಿದರು. vlcsnap-2017-01-24-21h09m14s48-copyಅನಂತರ ಮಾತನಾಡಿದ ಸಚಿವರು, ಕೋಡಿಬೆಂಗ್ರೆಯ ಜನತೆಗೆ ತಮ್ಮ ಪಂಚಾಯತ್ ಕೇಂದ್ರ ಕೋಡಿಕನ್ಯಾಣ ಹಾಗೂ ಹಂಗಾರಕಟ್ಟೆ ಮೀನುಗಾರಿಕೆ ಜಟ್ಟಿಯನ್ನು ಸಂಪರ್ಕಿಸಲು ಬಾರ್ಜ್ ಅಗತ್ಯವಿತ್ತು. ಇದೀಗ 1.45 ಕೋಟಿ ವೆಚ್ಚದಲ್ಲಿ ಬಾರ್ಜ್ ನಿರ್ಮಾಣಗೊಂಡಿದೆ. ಇದನ್ನು ಪ್ರತಿನಿತ್ಯ ಇಲ್ಲಿನ ನಿವಾಸಿಗಳು ಬಳಸಿಕೊಳ್ಳಬೇಕು ಹಾಗೂ ಈ ಪ್ರದೇಶವನ್ನು ಪ್ರವಾಸಿ ತಾಣವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಬಾರ್ಜ್ ಕಾರ‍್ಯನಿರ್ವಹಿಸಬೇಕು ಎಂದು ಅಽಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭ ಸುಮಾರು 97ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮೀನುಗಾರಿಕಾ ಧಕ್ಕೆಗೆ ಚಾಲನೆ ನೀಡಲಾಯಿತು. ಹಂಗಾರಕಟ್ಟೆಯಿಂದ ಕೋಡಿಕನ್ಯಾಣಕ್ಕೆ ಬಾರ್ಜ್ ಮೂಲಕ ಸಚಿವರು ಪ್ರಯಾಣ ಬೆಳೆಸಿದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಉಡುಪಿ ಜಿ.ಪಂ.ಸದಸ್ಯ ಕೋಟ ರಾಘವೇಂದ್ರ ಕಾಂಚನ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು.
ಜಿ.ಪಂ.ಮಾಜಿ ಸದಸ್ಯ ಶಂಕರ ಕುಂದರ್, ತಾ.ಪಂ.ಸದಸ್ಯೆ ವಸಂತಿ ಪೂಜಾರಿ, ಬಂದರು ಇಲಾಖೆಯ ನಿರ್ದೇಶಕ ಕ್ಯಾಪ್ಟನ್ ಸ್ವಾಮಿ, ಆರ್.ಇ.ಒ. ನಿರಂಜನ್‌ಮೂರ್ತಿ, ಇ.ಒ.ದಯಾನಂದ, ಯಾಂತ್ರೀಕೃತ ಮೀನುಗಾರರ ಸಂಘದ ಅಧ್ಯಕ್ಷ ಬಿ.ಬಿ.ಕಾಂಚನ್, ಉಪಾಧ್ಯಕ್ಷ ಗೋವಿಂದ, ಐರೋಡಿ ಗ್ರಾ.ಪಂ.ಅಧ್ಯಕ್ಷ ಮೋಸೆಸ್ ರೋಡಿಗ್ರಸ್,ಉಪಾಧ್ಯಕ್ಷೆ ಬೇಬಿ ಸಾಲಿಯಾನ್, ಕೋಡಿ ಗ್ರಾ.ಪಂ. ಅಧ್ಯಕ್ಷೆ ರಂಜಿನಿ, ಸ್ಥಳೀಯರಾದ ಇಬ್ರಾಹಿಂ ಸಾಹೇಬ್, ಕೇಶವ ಕುಂದರ್, ತಿಮ್ಮ ಪೂಜಾರಿ ಕೋಟ, ಅಚ್ಯುತ್ ಪೂಜಾರಿ, ಕೋಡಿಬೆಂಗ್ರೆ ಹಾಗೂ ಹಂಗಾರಕಟ್ಟೆಯ ವಿವಿಧ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.



This post first appeared on V4news, please read the originial post: here

Share the post

ಬ್ರಹ್ಮಾವರ: ಕೋಡಿಬೆಂಗ್ರೆ ಬಾರ್ಜ್ ಸೇವೆಗೆ ಚಾಲನೆ : ಕ್ರೀಡಾಸಚಿವರಿಂದ ಲೋಕಾರ್ಪಣೆ

×

Subscribe to V4news

Get updates delivered right to your inbox!

Thank you for your subscription

×