Get Even More Visitors To Your Blog, Upgrade To A Business Listing >>

ಕಿನ್ನಿಗೋಳಿ ಗ್ರ್ರಾಮ ಪಂಚಾಯಿತಿ : ದ್ವಿತೀಯ ಹಂತದ ಗ್ರಾಮ ಸಭೆ

vlcsnap-2017-01-24-20h29m45s161-copy

ಕಿನ್ನಿಗೋಳಿ ಗ್ರ್ರಾಮ ಪಂಚಾಯಿತಿಯ 216-17 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷತೆಯಲ್ಲಿ ಸೋಮವಾರ ಪಂಚಾಯಿತಿ ವಠಾರದ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.vlcsnap-2017-01-24-20h29m53s242-copyವೇಗವಾಗಿ ಬೆಳೆಯುತ್ತಿರುವ ಕಿನ್ನಿಗೋಳಿ ಪೇಟೆಯಲ್ಲಿ ಮಾತ್ರ ಕಸ ವಿಲೇವಾರಿಯ ವ್ಯವಸ್ಥೆ ಇದೆ ಆದರೆ ದೂರದ ಎಸ್.ಕೋಡಿ, ತಾಳಿಪಾಡಿ ಎಳತ್ತೂರು, ಶಾಂತಿ ಪಲ್ಕೆ ಗುತ್ತಕಾಡು ಪರಿಸರದಲ್ಲಿ ಯಾಕೇ ಇಲ್ಲ ತೆರಿಗೆಯನ್ನು ಎಲ್ಲರೂ ಕಟ್ಟುತ್ತಾರೆ ಇಂತಹ ತಾರತಮ್ಯ ಯಾಕೆ? ಎಂದು ಪದ್ಮನೂರು ಗ್ರಾಮಸ್ಥ ಜೋಸೆಫ್ ಕ್ವಾಡ್ರಸ್ ಪ್ರಶ್ನಿಸಿದರು.
ಇದೀಗ ಮೆನ್ನಬೆಟ್ಟು ಪಂಚಾಯಿತಿಯೊಂದಿಗೆ ಜಂಟೀಯಾಗಿ ಮೆನ್ನಬೆಟ್ಟುವಿನಲ್ಲಿ ಕಸ ವಿಲೇವಾರಿ ಘಟಕದಲ್ಲಿ ಕಾರ್ಯ ನಿರ್ವಹಿಸಲ್ಪಡುತ್ತದೆ. ಮುಂದಿನ ದಿನಗಳಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಲ್ಬೆಟ್ ಸಮೀಪದ ಮಂಜಲಪಾದೆ ಎಂಬಲ್ಲಿ ಸರಕಾರದ ಮೂರುವರೆ ಎಕರೆ ಪ್ರದೇಶವಿದ್ದು ಕಂದಾಯ ಇಲಾಖೆಯ ಹಸ್ತಾಂತರದ ನಂತರ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸ್ವಂತ ನೆಲೆಯಲ್ಲಿ ಕಸ ವಿಲೇವಾರಿ ಮಾಡಲಾಗುವುದು ಎಂದು ಕಿನ್ನಿಗೋಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದರು.
ಕಿನ್ನಿಗೋಳಿ ಪೇಟೆಯ ಪುಟ್‌ಪಾತ್‌ನ್ನು ಅಂಗಡಿಯವರು ಆಕ್ರಮಿಸಿದ್ದಾರೆ ಇದನ್ನು ತೆರವು ಮಾಡಿಸಬೇಕು ಕಿನ್ನಿಗೋಳಿ ಟ್ರಾಫಿಕ್ ಸಮಸ್ಯೆ, ಬಸ್ಸು ನಿಲ್ಧಾಣದ ಪಾರ್ಕಿಂಗ್ ಸಮಸ್ಯೆ ಸರಿಪಡಿಸಿ. ಈ ಸಮಸ್ಯೆ ಪರಿಹಾರ ನೀಡುವ ಟ್ರಾಫಿಕ್ ಹಾಗೂ ಪೊಲೀಸ್ ಇಲಾಖೆ ಯಾಕೇ ಗ್ರಾಮ ಸಭೆಗೆ ಹಾಜರಾಗಿಲ್ಲ ಎಂದು ಗ್ರಾಮಸ್ಥರಾದ ವಲೇರಿಯನ್ ಸಿಕ್ವೇರಾ ಹಾಗೂ ಗಂಗಾಧರ ರಾವ್ ಕೇಳಿದರು.
ಮುಂದಿನ ಮಾರ್ಚ್ ೩೧ ರ ಒಳಗೆ ಕೆಲವು ಸಮಸ್ಯೆ ಗಳಿಗೆ ಖಂಡಿತಾ ಪರಿಹಾರ ಸಿಗಲಿ ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲಾಗುವುದು. ಕೆಲವೂಂದು ತಾಂತ್ರಿಕ ಸಮಸ್ಯೆಗಳಿಂದಾಗಿ ಹಿನ್ನಡೆಯಾಗಿದೆ ಇದಕ್ಕೆ ಗ್ರಾಮಸ್ಥರು ಸಹಕರಿಸಿದರೆ ತ್ವರಿತವಾಗಿ ಸಮಸ್ಯೆ ನಿವಾರಣೆಯಗಲಿದೆ. ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ ತಿಳಿಸಿದರುThis post first appeared on V4news, please read the originial post: here

Share the post

ಕಿನ್ನಿಗೋಳಿ ಗ್ರ್ರಾಮ ಪಂಚಾಯಿತಿ : ದ್ವಿತೀಯ ಹಂತದ ಗ್ರಾಮ ಸಭೆ

×

Subscribe to V4news

Get updates delivered right to your inbox!

Thank you for your subscription

×