Get Even More Visitors To Your Blog, Upgrade To A Business Listing >>

ಸುಳ್ಯ ಬಳಿ ಕಾರು ತಡೆದು ಉದ್ಯಮಿಯ ದರೋಡೆ, ಗನ್, ಚಾಕು ತೋರಿಸಿ ಬೆದರಿಸಿ ೫ ಲಕ್ಷ ದೋಚಿ ಪರಾರಿ, ಶ್ವಾನದಳ, ಬೆರಳಚ್ಚು ತಜ್ಞರ ಭೇಟಿ

dacoity

daacoiety
ಅಡಕೆ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ ೫ ಲಕ್ಷ ನಗದು ದರೋಡೆ ಮಾಡಿರುವ ಘಟನೆ ಸುಳ್ಯ ಸಮೀಪದ ಐವರ್ನಾಡಿನಲ್ಲಿ ಸೋಮವಾರ ನಡೆದಿದೆ.
ಗುತ್ತಿಗಾರಿನಲ್ಲಿ ಅಡಕೆ ವ್ಯಾಪಾರಿಯಾಗಿರುವ ಬೆಳ್ಳಾರೆಯ ಅಬ್ದುಲ್ ಖಾದರ್ ಬಯಂಬಾಡಿ ಎಂಬವರು ಬೆಳ್ಳಾರೆಯಿಂದ ಗುತ್ತಿಗಾರಿಗೆ ತೆರಳುತ್ತಿದ್ದಾಗ ಐವರ್ನಾಡಿನಲ್ಲಿ ಅವರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಪಿಸ್ತೂಲ್, ತಲವಾರು ತೋರಿಸಿ ಕಾರಲ್ಲಿದ್ದ ೫ ಲಕ್ಷ ರೂ. ನಗದು ಹಾಗೂ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ. ವ್ಯಾಪಾರಿ ಅಬ್ದುಲ್ ಖಾದರ್‌ರವರು ತನ್ನ ಮಿತ್ರ ಶಫೀಕ್ ಮತ್ತು ನೌಕರರರಾದ ಅಬ್ದುಲ್ ಜಾಸಿರ್ ಹಾಗೂ ಬಸವರಾಜ್‌ರೊಂದಿಗೆ ಬೆಳ್ಳಾರೆಯಿಂದ ಗುತ್ತಿಗಾರಿಗೆ ತನ್ನ ಕಾರಲ್ಲಿ ಹೊರಟಿದ್ದರು. ಕಾರು ಐವರ್ನಾಡು ತಲುಪುವ ವೇಳೆ ಹಿಂದಿನಿಂದ ಹಿಂಬಾಲಿಸಿಕೊಂಡು ಬಂದ ಕಾರೊಂದು ಇವರ ಕಾರಿನ ಮುಂದೆ ಹೋಗಿ ಅಡ್ಡ ನಿಂತಿತು. ಅದರಿಂದ ಇಳಿದ ನಾಲ್ವರು ಪಿಸ್ತೂಲ್ ಮತ್ತು ತಲವಾರು ತೋರಿಸಿ ಕಾರಲ್ಲಿದ್ದ ನಗದು, ಚೆಕ್ ಬುಕ್, ನಾಲ್ವರ ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ತಂಡದಲ್ಲಿ ಒಟ್ಟು ಐದು ಜನರಿದ್ದರು. ೨೫ರಿಂದ ೩೦ ವರ್ಷ ವಯಸ್ಸಿನೊಳಗಿನ ಯುವಕರೆಲ್ಲರೂ ಟೀ ಶರ್ಟ್ ಧರಿಸಿದ್ದರು. ಒಬ್ಬ ಕೆಂಪು ಬಣ್ಣದ ಟಿ ಶರ್ಟ್ ಧರಿಸಿದ್ದರೆ ಇನ್ನೊಬ್ಬ ಹಸಿರು ಮತ್ತೊಬ್ಬ ಕಪ್ಪು ಬಣ್ಣದ್ದು ಧರಿಸಿದ್ದ. ಬಿಳಿ ಬಣ್ಣದ ಮಾಸಿದ ಹಳೆಯ ಫೋರ್ಡ್ ಐಕಾನ್ ಕಾರಿನಲ್ಲಿ ದುಷ್ಕರ್ಮಿಗಳು ಬಂದಿದ್ದು, ತಮ್ಮ ಕಾರನ್ನು ಐವರ್ನಾಡಿನಿಂದ ಸುಮಾರು ೨೦೦ ಮೀಟರ್ ದೂರದಿಂದ ಓವರ್‌ಟೇಕ್ ಮಾಡುವ ಯತ್ನ ನಡೆಸಿದ್ದರು. ಬಳಿಕ ತಮ್ಮ ಕಾರನ್ನು ಒರೆಸಿಕೊಂಡು ಮುಂದೆ ಸಾಗಿ ಅಡ್ಡ ನಿಲ್ಲಿಸಿ ಬೆದರಿಸಿ ದರೋಡೆ ಮಾಡಿದ್ದಾರೆ. ನಾಲ್ವರಲ್ಲಿ ಒಬ್ಬ ಮಾತ್ರ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ, ಹಿಂದಿ ಮಾತನಾಡುತ್ತಿದ್ದರು ಎಂದು ಅಬ್ದುಲ್ ಖಾದರ್ ಹೇಳಿದ್ದಾರೆ. ಐವರು ದುಷ್ಕರ್ಮಿಗಳಲ್ಲಿ ನಾಲ್ವರು ಮಾತ್ರ ಕಾರಿನಿಂದ ಇಳಿದಿದ್ದು, ವ್ಯಾಪಾರಿಯ ಕಾರನ್ನು ಸುತ್ತುವರಿದು ನಾಲ್ಕು ಬಾಗಿಲುಗಳ ಮೂಲಕ ಆಯುಧ ತೋರಿಸಿ ಬೆದರಿಸಿದ್ದಾರೆ. ಮೊದಲಿಗೆ ಕಾರಿನ ಕೀಯನ್ನು ಪಡೆದ ಅವರು ಬಳಿಕ ಪರಾರಿಯಾಗಿದ್ದಾರೆ. ಘಟನೆ ಐವರ್ನಾಡು ಜಂಕ್ಷನ್‌ನಿಂದ ಕೇವಲ ೧೦೦ ಮೀಟರ್ ದೂರಲ್ಲಿ ನಡೆದಿದ್ದರೂ ಜಂಕ್ಷನ್‌ನಲ್ಲಿದ್ದ ಜನರು ನೋಡಿಯೂ ಸಹಾಯಕ್ಕೆ ಬರಲಿಲ್ಲ. ದುಷ್ಕರ್ಮಿಗಳು ಪರಾರಿಯಾದ ಬಳಿಕ ಪೊಲೀಸರಿಗೆ ದೂರು ನೀಡಲು ಫೋನ್‌ನ್ನು ಕೇಳಿದ್ದರೂ ಯಾರೂ ನೀಡಿಲ್ಲ. ಐದು ನಿಮಿಷದ ಬಳಿಕ ರಸ್ತೆಯಲ್ಲಿ ಬಂದ ಬೈಕ್ ಸವಾರರೊಬ್ಬರ ಮೊಬೈಲ್ ಮೂಲಕ ಅಡಕೆ ಅಂಗಡಿಗೆ ಫೋನ್ ಮಾಡಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದವರು ಹೇಳಿದರು.
ಐವರ್ನಾಡಿನಲ್ಲಿ ನಡೆದ ದರೋಡೆ ಸ್ಥಳಕ್ಕೆ ಶಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತಪಾಸಣೆ ನಡೆಸಿದರು. ಮಂಗಳೂರಿನಿಂದ ಆಗಮಿಸಿದ ಶ್ವಾನ ಘಟನೆ ನಡೆದ ಸ್ಥಳದಿಂದ ಆರೋಪಿಗಳು ಪರಾರಿಯಾದ ಸುಳ್ಯ ರಸ್ತೆಯಲ್ಲಿ ತೆರಳಿತು. ಬೆರಳಚ್ಚು ತಜ್ಞರು ತಾಂತ್ರಿಕ ಪರೀಕ್ಷೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ ಸ್ಥಳಕ್ಕೆ ಆಗಮಿಸಿದ್ದು, ತನಿಖೆಗೆ ಮಾರ್ಗದರ್ಶನ ಮಾಡಿದ್ದಾರೆ. ಐವರ್ನಾಡು ದರೋಡೆ ಪ್ರಕರಣದ ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಭೂಷಣ್ ಗುಲಾಬ್‌ರಾವ್ ಬೊರಸೆ ತಿಳಿಸಿದ್ದಾರೆThis post first appeared on V4news, please read the originial post: here

Share the post

ಸುಳ್ಯ ಬಳಿ ಕಾರು ತಡೆದು ಉದ್ಯಮಿಯ ದರೋಡೆ, ಗನ್, ಚಾಕು ತೋರಿಸಿ ಬೆದರಿಸಿ ೫ ಲಕ್ಷ ದೋಚಿ ಪರಾರಿ, ಶ್ವಾನದಳ, ಬೆರಳಚ್ಚು ತಜ್ಞರ ಭೇಟಿ

×

Subscribe to V4news

Get updates delivered right to your inbox!

Thank you for your subscription

×