Get Even More Visitors To Your Blog, Upgrade To A Business Listing >>

ಮಂಜೇಶ್ವರ:ಮುಟ್ಟಾಜೆ ಕುಂಞಾಲಿ ಫ್ಯಾಮಿಲಿ ಅಸೋಸಿಯೆಶನ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ

vlcsnap-2017-01-24-11h12m27s124-copy

ಮುಟ್ಟಾಜೆ ಕುಂಞಾಲಿ ಫ್ಯಾಮಿಲಿ ಅಸೋಸಿಯೆಶನ್ ವತಿಯಿಂದ ದಿವಂಗತ ಎಂ ಪಿ ಇಸ್ಮಾಯಿಲ್ ಹಾಜಿ ಪಾರೆ ಹಾಗು ನೆಫೀಸಾ ಇಸ್ಮಾಯಿಲ್ ಮುಟ್ಟಾಜೆ ಸ್ಮರಣಾರ್ಥ ಫೆಬ್ರವರಿ 12 ರಂದು ಭಾನುವಾರ ಕೊಲ್ಲರಕೋಡಿ ಪ್ರೌಢ ಶಾಲೆ ನರಿಂಗಾನದಲ್ಲಿ   ಉಚಿತ ವೈದ್ಯಕೀಯ ಶಿಬಿರ ನಡೆಯಲಿರುವುದಾಗಿ ಸಂಬಂಧಪಟ್ಟವರು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದ್ದಾರೆ.ಮುಟ್ಟಾಜೆ ಕುಂಞಾಲಿ ಹಾಜಿ ಕುಟುಂಬದ ವೈದ್ಯಕೀಯ ಸೇವೆ ಸಾಮಾನ್ಯ ಜನರಿಗೂ ದೊರಕಬೇಕೆಂಬ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಾ ಬರುತ್ತಿದೆ. ಶಿಬಿರದಲ್ಲಿ ಖ್ಯಾತ ಹೃದಯ ರೋಗ ತಜ್ಞರು,ಕಣ್ಣಿನ ತಜ್ಞರು, ಕಿವಿ ಮತ್ತು ಗಂಟಲು ತಜ್ಞರು, ಸ್ತ್ರೀ ರೋಗ ತಜ್ಞರು, ಸೇರಿದಂತೆ ಹಲವು ವೈದ್ಯಕೀಯ ತಪಾಸಣೆಗಳು ನಡೆಯಲಿರುವುದಾಗಿ ಹೇಳಿದ್ದಾರೆ. ಖ್ಯಾತ ಹೃದ್ರೋಗ ತಜ್ಞರಾದ ಡಾ. ಕುಂಞಾಲಿ ಯವರ ಲಭ್ಯತೆಗಾಗಿ 10 ಫೆಬ್ರವರಿ 2017 ಮುಂಚಿತವಾಗಿ 09448546494 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನೋಂದಾವಣೆ ನಡೆಸುವಂತೆ ತಿಳಿಸಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ಡಾ. ಕೆ ಕುಂಞಾಲಿ, ಹಾಜಿ ಹಮೀದ್ ಕುಂಞಲಿ ಮುಟ್ಟಾಜೆ, ಡಾ. ಉಮರ್, ಸಂಘಟನೆಯ ಪ್ರ. ಕಾರ್ಯದರ್ಶಿ ಹಮೀದ್ ಪಾರೆ ಹಾಗು ಅಲಿಕುಂಞಿ ಪಾರೆ ಮೊದಲಾದವರು ಉಪಸ್ಥರಿದ್ದರು.



This post first appeared on V4news, please read the originial post: here

Share the post

ಮಂಜೇಶ್ವರ:ಮುಟ್ಟಾಜೆ ಕುಂಞಾಲಿ ಫ್ಯಾಮಿಲಿ ಅಸೋಸಿಯೆಶನ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ

×

Subscribe to V4news

Get updates delivered right to your inbox!

Thank you for your subscription

×