Get Even More Visitors To Your Blog, Upgrade To A Business Listing >>

ಮಜಾ ಟಾಕೀಸಿನ ಬಿರುದು- ಪಡೀಲ್ ಜತೆಗೆ ತುಳುನಾಡಿಗೂ ಖದರು

naveen_d-_padil

ಸೃಜನ್ ಲೋಕೇಶ್ ಅವರು ನಿರೂಪಿಸುವ ಮಜಾ ಟಾಕೀಸ್ ಕಾರ್ಯಕ್ರಮವು ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಒಂದು ರಿಯಾಲಿಟಿ ಶೋ ಆಗಿದ್ದು, ಅದರಲ್ಲಿ ಪಾಲ್ಗೊಂಡವರಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವುದು ನಮ್ಮೂರಿನ ಕಲಾವಿದ ನವೀನ್ ಡಿ.ಪಡೀಲ್ ಎಂದು ಹೇಳಲು ನಾವೆಲ್ಲರೂ ಸಂತೋಷಪಡಬೇಕು, ಹೆಮ್ಮೆ ಪಡಬೇಕು. ಈಚೆಗೆ ಇದರ 200ನೇ ಕಾರ್ಯಕ್ರಮ ಜರಗಿದ್ದು, ಅದರಲ್ಲಿ ಖ್ಯಾತ ನಾಮ ಕಲಾವಿದರು ಪಾಲ್ಗೊಂಡಿದ್ದು, ಅವರ ಸಮ್ಮುಖದಲ್ಲಿ ಪಡೀಲ್‌ಗೆ ಡ್ಯಾನ್ಸಿಂಗ್ ಸ್ಟಾರ್ ಬಿರುದು ನೀಡಲಾಗಿದೆ.
ಕಳೆದ ಶನಿವಾರ ಮತ್ತು ಆದಿತ್ಯವಾಗ ಕಲರ‍್ಸ್ ಚಾನೆಲ್‌ನಲ್ಲಿ ರಾತ್ರಿ ೮ರಿಂದ 10 ಗಂಟೆ ತನಕ ಪ್ರಸಾರವಾದ ಈ ಅದ್ದೂರಿ ಮತ್ತು ವೈ‘ವದ ಕಾರ್ಯಕ್ರಮದಲ್ಲಿ ಬಿರುದು ಪ್ರದಾನಿಸಲಾಗಿದೆ. ಪ್ರಮುಖ ಎಲ್ಲ ಕಲಾವಿದರಿಗೂ ಬಿರುದು ನೀಡಲಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಅತಿ ಮುಖ್ಯ ಅಂಶವೆಂದರೆ-ಬಿರುದು ಸ್ವೀಕರಿಸಲು ಪಡೀಲ್ ಅವರು ವೇದಿಕೆಗೆ ಬಂದಾಗ ನೆರೆದವರ ಹರ್ಷೋಲ್ಲಾಸವನ್ನು! ಸೃಜನ್ ಲೋಕೇಶ್ ವೇದಿಕೆಗೆ ಬರುವಾಗಲೂ ಇಷ್ಟೊಂದು ಸಂ‘ಮ, ಖುಷಿ ಪ್ರೇಕ್ಷಕರಲ್ಲಿರಲಿಲ್ಲ ಎಂದು ಹೇಳಲೇಬೇಕಾಗುತ್ತದೆ.
ಇದಕ್ಕೆ ಮುಖ್ಯ ಕಾರಣ-ಮಜಾ ಟಾಕೀಸ್ ವೀಕ್ಷಕರಲ್ಲಿ ನವೀನ್ ಅವರು ಉಂಟು ಮಾಡಿರುವ ಅಲೆ. ಪಡೀಲ್ ಅವರ ಕುಡುಕನ ಪಾತ್ರ ಮತ್ತು ನಟನೆಯನ್ನು ಪ್ರೇಕ್ಷಕರೆಲ್ಲರೂ ಮುಕ್ತಕಂಠದಿಂದ ಶ್ಲಾಸಿದ್ದಾರೆ ಮತ್ತು ಆಸ್ವಾದಿಸಿದ್ದಾರೆ. ಇವರು ನಿಜವಾದ ಕುಡುಕನೋ ಎಂದೂ ಪ್ರೇಕ್ಷಕರು ಪ್ರಶ್ನಿಸುವಂಥ ವಾತಾವರಣವನ್ನು ಪಡೀಲ್ ಅವರು ಸೃಷ್ಟಿಸಿರುವುದು ಅವರ ಕಲಾಪ್ರೌಢಿಮೆಗೆ ಸಾಕ್ಷಿ.
ಪ್ರೇಕ್ಷಕರು ಮಜಾ ಟಾಕೀಸಿನಲ್ಲಿ ಯಾರನ್ನೂ ಬೇಕಾದರೂ ಮರೆಯಬಹುದು – ಆದರೆ ಕುಡುಕ ಪಾತ್ರ‘ರಿ ಪಡೀಲ್ ಅವರನ್ನು ಮಾತ್ರ ಖಂಡಿತಾ ಮರೆಯುವುದು ಸಾ‘ವಿಲ್ಲ. ಅಂಥದ್ದೊಂದು ಹವಾ ಸೃಷ್ಟಿಸಿರುವ ತುಳುನಾಡಿನ ಈ ಕಲಾವಿದನ ಬಗ್ಗೆ ನಾವೆಲ್ಲರೂ ಹೆಮ್ಮೆಪಡಲೇಬೇಕಾಗಿದೆ.
ಇದರ ಜತೆಗೆ ಪಡೀಲ್ ಅವರು ಪಿಲಿಬೈಲ್ ಯುಮುನಕ್ಕೆ, ಪನೊಡಾ ಬೊಡ್ಚಾ ಮುಂತಾದ ಸಿನಿಮಾಗಳಲ್ಲೂ ಅದ್ಭುತ ನಟನೆ ತೋರಿದ್ದು, ತುಳು ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯ ಕಲಾವಿದರಾಗಿ ರೂಪುಗೊಂಡಿದ್ದಾರೆ. ಅವರಿಲ್ಲದೆ ಚಿತ್ರ ಮಾಡಲೂ ಯಾರೂ ಮುಂದಾಗದ, ‘ರ್ಯ ಮಾಡದ ಪರಿಸ್ಥಿತಿ ಇರುವುದು ನಿಜಕ್ಕೂ ಆಶ್ಚರ್ಯದ ಸಂಗತಿಯೇ.
ಮಜಾ ಟಾಕೀಸಿನ ಮೂಲಕ ಇವರ ಕಲಾಪ್ರೌಢಿಮೆಯನ್ನು ರಾಜ್ಯದ ಎಲ್ಲೆಡೆ ಪಸರಿಸಿದ ಸೃಜನ್ ಲೋಕೇಶ್ ಅವರಿಗೂ ನಾವು ‘ನ್ಯವಾದ ಸಲ್ಲಿಸಬೇಕಾಗಿದೆ.
ಮೊನ್ನೆಯ 200ನೆ ಎಪಿಸೋಡ್ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಭಾಗವಹಿಸಿದ್ದರು. ಇದು ದಾಖಲೆಯೇ ಆಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಡೀಲ್ ಪ್ರತಿಭೆಯನ್ನು ಕೊಂಡಾಡಿದರೆ, ಸೃಜನ್ ತಾಯಿ ಗಿರಿಜಾ ಲೋಕೇಶ್ ನವೀನ್ ಪಡೀಲ್‌ರಿಗೆ ಡ್ಯಾನ್ಸಿಂಗ್ ಸ್ಟಾರ್ ಪ್ರಶಸ್ತಿ ನೀಡಿ ಪ್ರೇಮನಾಥೆ ಪಾಸ ಆತೇ ಹಾಡಿಗೆ ಪಡೀಲ್‌ರೊಂದಿಗೆ ಕುಣಿದು ಕುಪ್ಪಳಿಸಿದರು.This post first appeared on V4news, please read the originial post: here

Share the post

ಮಜಾ ಟಾಕೀಸಿನ ಬಿರುದು- ಪಡೀಲ್ ಜತೆಗೆ ತುಳುನಾಡಿಗೂ ಖದರು

×

Subscribe to V4news

Get updates delivered right to your inbox!

Thank you for your subscription

×