Get Even More Visitors To Your Blog, Upgrade To A Business Listing >>

ಎರ್ಮಾಳು : ತೆಂಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ : ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ

Tags: agravesup

vlcsnap-2017-01-24-12h39m56s130-copy

ಹಳೆ ವಿದ್ಯಾರ್ಥಿಗಳು ಆ ಗ್ರಾಮದ ದೊಡ್ಡ ಆಸ್ತಿ ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದ್ದಾರೆ. ಎರ್ಮಾಳು ತೆಂಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದರು.vlcsnap-2017-01-24-12h39m22s50-copy

vlcsnap-2017-01-24-12h39m37s202-copy

vlcsnap-2017-01-24-12h39m08s159-copyಅದ್ಯಾಪಕರು ಪಾಠ ಪ್ರವಚನ ಮುಗಿಸಿ ಮನೆಗೆ ತೆರಳುತ್ತಾರೆ. ಆಡಳಿತ ಮಂಡಳಿಯ ಸದಸ್ಯರು ತಮ್ಮ ಅವಧಿ ಪೂರೈಸಿದ ನಂತರ ಮತ್ತೊಂದು ಸಮಿತಿ ಬರುತ್ತದೆ. ಆದರೆ ಹಳೆ ವಿದ್ಯಾರ್ಥಿಗಳು ಎಲ್ಲಿದ್ದರೂ ತಾವು ಕಲಿತ ಶಾಲೆಯಲ್ಲಿ ನಿರಂತರ ಸಂಪರ್ಕ ಇರಿಸಿ ಶಾಲೆಯ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ ಎಂದರು. ನಮ್ಮ ರಾಷ್ಟ್ರವು ಅಪಾರ ಯುವ ಸಂಪತ್ತನ್ನು ಪಡೆದ ರಾಷ್ಟ್ರ. ಯುವ ಸಂಪತ್ತು ಒಳ್ಳೆಯ ರೀತಿಯಲ್ಲಿ ಸದ್ಬಳಕೆ ಅಗಬೇಕಿದ್ದರೆ, ಸಮಾಜದ ಸಂಘಟನೆಗಳು ಒಟ್ಟಾಗಿ ಸಮಾಜಕ್ಕೆ ಒಳಿತಿನ ಕೆಲಸ ಮಾಡಬೇಕೆಂದರು.
ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಮನುಷ್ಯ ಕೇವ ಸಂಸಾರ ಮುಖಿಯಾಗಿ ಬದುಕದೆ, ಸಮಾಜಮುಖಿಯಾಗಿ ಬದುಕಿದರೆ ಇಂತಹ ಹತ್ತು ಹಲವು ಸಂಘಟನೆಗಳು ಬೆಳೆಯುತ್ತದೆ ಎಂದರು. ಈ ಸಂದರ್ಭ ದಾನಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸದಸ್ಯ ಶಶಿಕಾಂತ್ ಪಡುಬಿದ್ರಿ, ಕೇಶವ ಮೊಯ್ಲಿ, ತೆಂಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಅರುಣಾ ಕುಮಾರಿ,ವೈ ಸುಧೀರ್ ಕುಮಾರ್, ಸಿರಾಜ್ ಎರ್ಮಳ್, ಶಾರದಾ ಪೂಜಾರಿ ವೇದಿಕೆಯಲ್ಲಿದ್ದರು.
೦೦೦೦೦೦೦೦೦೦೦೦



This post first appeared on V4news, please read the originial post: here

Share the post

ಎರ್ಮಾಳು : ತೆಂಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ : ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ

×

Subscribe to V4news

Get updates delivered right to your inbox!

Thank you for your subscription

×