Get Even More Visitors To Your Blog, Upgrade To A Business Listing >>

ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಬೃಹತ್ ಯುವ ರ್‍ಯಾಲಿ, ಐಸಿವೈ‌ಎಂ ಮಂಗಳೂರು ವತಿಯಿಂದ ಆಯೋಜನೆ

Tags: agravesup

youth

youthes
ಭಾರತೀಯ ಕ್ಯಾಥೊಲಿಕ್ ಯುವ ಸಂಚಲನ ಮಂಗಳೂರು ಧರ್ಮಪ್ರಾಂತ್ಯದ ವತಿಯಿಂದ ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಬೃಹತ್ ಯುವ ರ್‍ಯಾಲಿ ನಡೆಯಿತು.
ರಾಷ್ಟ್ರೀಯ ಯುವ ಸಮ್ಮೇಳನದ ಅಂಗವಾಗಿ ರಾಷ್ಟ್ರಮಟ್ಟದ ಬೃಹತ್ ಯುವ ರ್‍ಯಾಲಿ ಮಂಗಳೂರಿನಲ್ಲಿ ನಡೆಯಿತು. ನಗರದ ರೊಸಾರಿಯೋ ಕ್ಯಾಥೆಡ್ರಲ್‌ನಿಂದ ಆರಂಭಗೊಂಡ ರ್‍ಯಾಲಿಗೆ ಬೆಂಗಳೂರಿನ ಬಿಷಪ್ ಬರ್ನಾರ್ಡ್ ಮೊರಾಸ್ ಚಾಲನೆ ನೀಡಿದರು. ಬಳಿಕ ಬಾವುಟಗುಡ್ಡೆಯ ಸಂತ ಅಲೋಷಿಯಸ್ ಕಾಲೇಜುವರೆಗೆ ಶಾಂತಿ ಜಾಥಾ ನಡೆಯಿತು. ಈ ಸಂದರ್ಭ ಮಾತನಾಡಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್ .ಲೋಬೊ, ಯುವಕರಲ್ಲಿ ನಾಯಕತ್ವದ ಗುಣಗಳನ್ನು ಮೂಡಿಸುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಅಧ್ಯಕ್ಷ ಡಾ. ಅಲೋಷಿಯಸ್ ಪಾವ್ಲ್ ಡಿಸೋಜ ಮತ್ತು ಬೆಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ ಬರ್ನಾರ್ಡ್ ಮೊರಾಸ್ ಸಮಾವೇಶದ ಉದ್ದೇಶವನ್ನು ವಿವರಿಸಿದರು. ರ್‍ಯಾಲಿಯಲ್ಲಿ ಸಿಸಿಬಿ‌ಐನ ಅಧ್ಯಕ್ಷ ಓಸ್ವಾಲ್ಡ್ ಕಾರ್ಡಿನಲ್ ಗ್ರೇಷಿಯಸ್ ಸೇರಿದಂತೆ ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಯುವಜನತೆ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು.



This post first appeared on V4news, please read the originial post: here

Share the post

ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಬೃಹತ್ ಯುವ ರ್‍ಯಾಲಿ, ಐಸಿವೈ‌ಎಂ ಮಂಗಳೂರು ವತಿಯಿಂದ ಆಯೋಜನೆ

×

Subscribe to V4news

Get updates delivered right to your inbox!

Thank you for your subscription

×