Get Even More Visitors To Your Blog, Upgrade To A Business Listing >>

ಜ. ೨೮ ರಂದು ಕಂಬಳ ಆಯೋಜನೆ, ತೀರ್ಪು ಮೊದಲೇ ಬಂದರೆ ಕಂಬಳ ವಿಜಯೋತ್ಸವ, ಮಂಗಳೂರಿನಲ್ಲಿ ಮಾಜೀ ಮಂತ್ರಿ ಅಭಯ ಚಂದ್ರ ಜೈನ್

kambala

ಕಂಬಳ ಕ್ರೀಡೆಯನ್ನು ಉಳಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ನ್ಯಾಯಾಲಯದ ಗಮನ ಸೆಳೆಯುವ ಉದ್ದೇಶದಿಂದ ಜ. ೨೮ರಂದು ಮೂಡಬಿದ್ರೆಯಲ್ಲಿ ಕಂಬಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ಮುಖಂಡ ಅಭಯಚಂದ್ರ ಜೈನ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ಕಂಬಳ ಪ್ರಿಯರು ಇಂದೇ ಪ್ರತಿಭಟನೆಗೆ ಆಗ್ರಹಿಸಿದ್ದರು. ಆದರೆ ಜ. ೨೬ರವರೆಗೆ ಪ್ರತಿಭಟನೆ ಬೇಡವೆಂದು ನಿರ್ಧರಿಸಿ, ಜ. ೨೮ರಂದು ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಕಂಬಳದ ಕುರಿತು ಬೇಗ ತೀರ್ಪು ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಮೊದಲೇ ತೀರ್ಪು ಬಂದರೆ ಕಂಬಳ ನಡೆಸಿ ವಿಜಯೋತ್ಸವ ಮಾಡಲಾಗುವುದು. ಇಲ್ಲದಿದ್ದರೆ ಕಂಬಳ ಗದ್ದೆಯಲ್ಲಿ ಹಕ್ಕೊತ್ತಾಯ ಮಾಡಲಾಗುವುದು.
ಕಂಬಳ ಉಳಿಸಲು ಜೈಲಿಗೆ ಹೋಗಲೂ ನಾವು ಸಿದ್ಧ ಎಂದು ಜೈನ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಮುಖಂಡರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಮಿಥುನ್ ರೈ, ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್ ಮತ್ತಿತರರು ಉಪಸ್ಥಿತರಿದ್ದರು.



This post first appeared on V4news, please read the originial post: here

Share the post

ಜ. ೨೮ ರಂದು ಕಂಬಳ ಆಯೋಜನೆ, ತೀರ್ಪು ಮೊದಲೇ ಬಂದರೆ ಕಂಬಳ ವಿಜಯೋತ್ಸವ, ಮಂಗಳೂರಿನಲ್ಲಿ ಮಾಜೀ ಮಂತ್ರಿ ಅಭಯ ಚಂದ್ರ ಜೈನ್

×

Subscribe to V4news

Get updates delivered right to your inbox!

Thank you for your subscription

×