Get Even More Visitors To Your Blog, Upgrade To A Business Listing >>

ಉಡುಪಿಯ ಅಮಾಸೆಬೈಲು ವಿದ್ಯುತ್ ಸ್ವಾವಲಂಬಿ, ನಕ್ಸಲ್ ಪೀಡಿತ ಪ್ರದೇಶದ ಇಡೀ ಊರಿಗೇ ಸೋಲಾರ್

Tags: agravesup

solaar

solar
ಎಲ್ಲಾ ಸಮಸ್ಯೆಗಳಿಗೂ ಸಶಸ್ತ್ರ ಹೋರಾಟವೇ ಪರಿಹಾರ ಎಂದು ನಕ್ಸಲರು ಆ ಗ್ರಾಮದಲ್ಲಿ ಚಟುವಟಿಕೆ ಆರಂಭಿಸಿದ್ದರು. ಆದರೆ ಸ್ವಾವಲಂಬನೆಯೇ ಪರಿಹಾರ ಎಂದು ಅಲ್ಲಿನ ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ. ಉಡುಪಿ ಜಿಲ್ಲೆಯ ಅಮಾಸೆಬೈಲು ಎಂಬ ನಕ್ಸಲ್ ಪೀಡಿತ ಗ್ರಾಮ ವಿದ್ಯುತ್ ಸ್ವಾವಲಂಬಿಯಾಗಿ ರೂಪುಗೊಂಡಿದೆ.

soalar
ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಈ ಕನಸನ್ನು ನನಸು ಮಾಡಿದೆ. ನಮ್ಮ ಹಳ್ಳಿಗಳು ಮನಸ್ಸು ಮಾಡಿದರೆ ನಾಡಿಗೇ ಮಾದರಿಯಾಗಬಲ್ಲವು ಅನ್ನೋದಕ್ಕೆ ಈ ಗ್ರಾಮವೇ ಸಾಕ್ಷಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲು ಒಂದು ನಕ್ಸಲ್ ಪೀಡಿತ ಗ್ರಾಮ. ಆದರೆ ಹಾಗಂತ ಅಲ್ಲಿನ ಜನರು ಕರೆಸಿಕೊಳ್ಳುವುದಕ್ಕೆ ಬಯಸೋದಿಲ್ಲ. ಪ್ರಕೃತಿಯನ್ನು ಅವಲಂಭಿಸಿ ಅಭಿವೃದ್ಧಿಯ ಕನಸು ಕಂಡ ಈ ಹಳ್ಳಿ ಈಗ ಸಂಪೂರ್ಣ ಸೋಲಾರ್ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕನಸು ನನಸು ಮಾಡಿದ್ದು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್. ರಾಜಕೀಯದಲ್ಲಿ ವಿವಿಧ ಹುದ್ದೆ ಅನುಭವಿಸಿ, ಸದ್ಯ ರಾಜಕಾರಣದಿಂದ ನಿವೃತ್ತರಾಗಿರುವ ಹಿರಿಯ ನಾಯಕ ಎ. ಜಿ. ಕೊಡ್ಗಿ ಈ ಟ್ರಸ್ಟ್‌ನ ಮುಖ್ಯಸ್ಥರು. ಕಾಡುಗುಡ್ಡ ಪರಿಸರದ ಮಡಿಲಲ್ಲಿರುವ ಈ ಗ್ರಾಮದ ಎಲ್ಲಾ ಮನೆಗಳು‌ಈಗ ಸೋಲಾರ್ ಅಳವಡಿಸಿಕೊಂಡಿವೆ. ಮೂರು ಹಂತಗಳಲ್ಲಿ ಸುಮಾರು ಒಂದುವರೆ ಸಾವಿರ ಮನೆಗಳಿಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ.
ಗ್ರಾಮೀಣ ಕರ್ನಾಟಕದಲ್ಲಿ ವಿದ್ಯುತ್‌ನದ್ದೇ ಸಮಸ್ಯೆ, ಈ ಕಣ್ಣಾ ಮುಚ್ಚಾಲೆಯಿಂದ ರೋಸಿ ಹೋಗಿ ಎಲ್ಲಾ ಗ್ರಾಮಸ್ಥರು ಈ ಯೋಜನೆಗೆ ಕೈ ಜೋಡಿಸಿದ್ದಾರೆ. ಮಾಗ್ಸೆಸೆ ಪ್ರಶಸ್ತಿ ಪಡೆದ ಹರೀಶ್ ಹಂದೆ ಅವರ ನೇತೃತ್ವದ ಸೆಲ್ಕೋ ಸಂಸ್ಥೆ ಸಾಮಾನ್ಯ ದರದಲ್ಲಿ ಸೋಲಾರ್ ಯಂತ್ರಗಳ ವ್ಯವಸ್ಥೆ ಮಾಡಿದೆ. ಪ್ರತಿಯೊಬ್ಬ ಗ್ರಾಮಸ್ಥ ಒಂದು ನಿಗದಿತ ಮೊತ್ತವನ್ನು ನೀಡಿದರೆ ಉಳಿದ ಶೇ. ೭೫ರಷ್ಟು ಹಣವನ್ನು ಜಿಲ್ಲಾಡಳಿತ ಹಾಗೂ ಎಂ. ಎನ್. ಆರ್. ಇ. ಮತ್ತು ಕ್ರೆಡಲ್ ಮುಂತಾದ ಸಂಸ್ಥೆಗಳು ಕೈ ಜೋಡಿಸಿವೆ. ಕೆಲವು ಮನೆಗಳಿಗೆ ಎರಡು ದೀಪ, ಇನ್ನುಳಿದವಕ್ಕೆ ನಾಲ್ಕು ದೀಪಗಳ ವ್ಯವಸ್ಥೆ ಮಾಡಲಾಗಿದೆ. ಸಂಪೂರ್ಣ ಗ್ರಾಮ ಸೋಲಾರ್ ಅಳವಡಿಸಿಕೊಂಡ ಬೇರೆ ಉದಾಹರಣೆ ನಮ್ಮ ರಾಜ್ಯದಲ್ಲಿ ಕಾಣಸಿಗಲ್ಲ ಅನ್ನೋದು ಈ ಯೋಜನೆಯ ಹೆಗ್ಗಳಿಕೆ.
ಇಡೀ ರಾಜ್ಯಕ್ಕೇ ಮಾದರಿಯಾಗಿ ಈ ಅಮಾಸೆಬೈಲು ಗ್ರಾಮ ವಿದ್ಯುತ್ ಸ್ವಾವಲಂಬಿಯಾಗಿದೆ. ಇದು ಒಂದೆರಡು ದಿನಗಳಲ್ಲಿ ಆಗಿರುವ ಬದಲಾವಣೆಯಲ್ಲ. ಟ್ರಸ್ಟ್‌ನ ಸತತ ಪ್ರಯತ್ನದಿಂದ ಇದು ಸಾಕಾರವಾಗಿದೆ. ಇನ್ನಷ್ಟು ಗ್ರಾಮಗಳನ್ನು ಸೋಲಾರ್ ಗ್ರಾಮವನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಈ ಟ್ರಸ್ಟ್ ವಹಿಸಿಕೊಂಡಿದೆ.



This post first appeared on V4news, please read the originial post: here

Share the post

ಉಡುಪಿಯ ಅಮಾಸೆಬೈಲು ವಿದ್ಯುತ್ ಸ್ವಾವಲಂಬಿ, ನಕ್ಸಲ್ ಪೀಡಿತ ಪ್ರದೇಶದ ಇಡೀ ಊರಿಗೇ ಸೋಲಾರ್

×

Subscribe to V4news

Get updates delivered right to your inbox!

Thank you for your subscription

×