Get Even More Visitors To Your Blog, Upgrade To A Business Listing >>

ಕಿನ್ನಿಗೋಳಿ ; ಉಚಿತ ವೈದ್ಯಕೀಯ ಶಿಬಿರ

vlcsnap-2016-12-25-14h16m25s120-copy

ದೇಶ ಕಂಡ ಅದ್ಭುತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯನ್ನು ಉಚಿತ ವೈದ್ಯಕೀಯ ಶಿಬಿರದ ಮೂಲಕ ಮಾಡುತ್ತಿರುದು ಅಭಿನಂದನೀಯ ಎಂದು ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಹ ಸಂಚಾಲಕ ಡಾ. ನಿಶಾಂತ್ ಶೆಟ್ಟಿಗಾರ್ ಹೇಳಿದರು ಅವರು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆದ ಮುಲ್ಕಿ ಮೂಡಬಿದ್ರೆ ಬಿಜೆಪಿ ಯುವ ಮೂರ್ಚಾ, ಮಹಿಳಾ ಮೋರ್ಚಾ, ವೈದ್ಯಕೀಯ ಪ್ರಕೋಷ್ಟ್ ವತಿಯಿಂದ ಮುಕ್ಕ ಶ್ರೀನಿವಾಸ ಇನ್ ಸ್ಟಿಟ್ಯೂಟ್ ಅಪ್ ಡೆಂಟಲ್ ಸಯನ್ಸ್ ವತಿಯಿಂದ ಉಚಿತ ಆರೋಗ್ಯ ಮತ್ತು ದಂತ ವೈದ್ಯಕೀಯ ಶಿಬಿರದ ಉದ್ಘಟನೆಯನ್ನು ನೆರವೇರಿಸಿ ಮಾತನಾಡಿದರು. ವಾಜಪೇಯಿ ಅಜಾತ ಶತ್ರು ಎಂಬ ಹೆಸರು ಪಡೆದವರು, ವಿರೋಧ ಪಕ್ಷದವರು ಅವರನ್ನು ಗೌರವಿಸುತ್ತಿದ್ದರು ಅವರ ಉತ್ತಮ ನಡವಳಿಕೆಗೆ ಸಾಕ್ಷಿ ಎಂದರು. ಜಿಲ್ಲಾ ಮಹಿಳಾ ಮೋರ್ಚದ ಅಧ್ಯಕ್ಷೆ ಪೂಜಾ ಪೈ ಮಾತನಾಡಿ ವಾಜಪೇಯಿ ಅಡಳಿತ ಸಂದರ್ಭ ಮಾಡಿದ ಯೋಜನೆಗಳು ಇಂದಿಗೂ ನೆನಪಿನಲ್ಲಿ ಉಳಿಯುವಂತದ್ದೆ, ಅವರ ಮಾರ್ಗದರ್ಶನ ಇಂದಿಗೂ ಪಕ್ಷಕ್ಕೆ ಬೇಕಾಗಿದೆ ಎಂದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಬೊಳ್ಳೂರು, ಮೂಲ್ಕಿ ಮೂಡಬಿದ್ರೆ ಮಂಡಲ ಅಧ್ಯಕ್ಷ ಈಶ್ವರ್ ಕಟೀಲ್, ಯುವ ಮೋರ್ಚಾದ ಅಬಿಲಾಷ್ ಶೆಟ್ಟಿ, ಮಹಿಳಾ ಮೋರ್ಚಾದ ಲೀಲಾವತಿ ರಾವ್, ಭುವನಾಭಿರಾಮ ಉಡುಪ, ವೈದ್ಯಧಿಕಾರಿ ಶ್ರೀನಿಧಿ, ಗುರುರಾಜ ಮಲ್ಲಿಗೆಯಂಗಡಿ ಮತ್ತಿತರರು ಇದ್ದರು.



This post first appeared on V4news, please read the originial post: here

Share the post

ಕಿನ್ನಿಗೋಳಿ ; ಉಚಿತ ವೈದ್ಯಕೀಯ ಶಿಬಿರ

×

Subscribe to V4news

Get updates delivered right to your inbox!

Thank you for your subscription

×