Get Even More Visitors To Your Blog, Upgrade To A Business Listing >>

ಕುಂದಾಪುರ: ಡಿ.29 ಐತಿಹಾಸಿಕ ಕೋಟ ಸಂತೆಗೆ ಚಾಲನೆ

vlcsnap-2016-12-25-14h34m57s233-copy

ಡಿ.29ರಿಂದ 20ವರ್ಷಗಳಿಂದ ನಿಂತು ಹೋಗಿರುವ ಐತಿಹಾಸಿಕ ಕೋಟ ಸಂತೆಗೆ ಚಾಲನೆ ನೀಡಲಾಗುತ್ತದೆ‌ಎಂದುಕೋಟಸಂತೆ ಮಾರುಕಟ್ಟೆ ಸಮಿತಿಗೌರವಾಧ್ಯಕ್ಷ‌ಆನಂದ ಸಿ. ಕುಂದರ್ ಹೇಳಿದರು. ಅವರುಕೋಟಗ್ರಾಮಪಂಚಾಯತ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಕೋಟ ಸಂತೆ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಕಾಲಾನುಕ್ರಮದಲ್ಲಿ ನಿಂತಿರುತ್ತದೆ. ಈಗ ಬಹುಜನರ‌ಅಪೇಕ್ಷೆ ಮತ್ತುಕೋಟ ಪಂಚಾಯತ್‌ನ ಮುತುವರ್ಜಿಯಿಂದ ಸಂತೆ ಪುನರಾಂಭಗೊಳ್ಳಲಿದೆ. ಡಿ.29ರಂದು ಸಚಿವ ಪ್ರಮೋದ್ ಮಧ್ವರಾಜ್ ಸಂತೆಯನ್ನು‌ಉದ್ಘಾಟಿಸಲಿದ್ದು, ವ್ಯಾಪಾರ ಮಳಿಗೆಗಳಿಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಚಾಲನೆ ನೀಡಲಿದ್ದಾರೆ. ಈಗಾಗಲೇ ಕಳೆದ ಎರಡುಗುರುವಾರದಿಂದ ಸಂತೆತನ್ನಕಾರ್ಯಚಟುವಟಿಕೆ ಆರಂಭಿಸಿದ್ದು ಬಹಳಷ್ಟು ಮಂದಿ ವ್ಯಾಪಾರ ಆರಂಭಿಸಿದ್ದಾರೆ. ಕೆಲವು ತಿಂಗಳುಗಳ ವರೆಗೆಯಾವುದೇ ಸುಂಕವಿಲ್ಲದೆ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತದೆ. ಪ್ರತಿಗುರುವಾರ ಸಂತೆಯಂದು ಸರ್ವಿಸ್‌ರಸ್ತೆಯಲ್ಲಿ ಸಂಚಾರಕ್ಕೆ ನಿರ್ಬಂದ ಹೇರಲಾಗಿದ್ದು, ಈ ಕುರಿತು ಪೊಲೀಸ್ ಇಲಾಖೆಗೂ ಮನವಿ ಸಲ್ಲಿಸಲಾಗಿದೆ. ಮತ್ತು ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಹಿರೇ ಮಹಾಲಿಂಗೇಶ್ವರ ದೇವಳದ ಸಮೀಪದಲ್ಲಿ ವ್ಯವಸ್ಥೆ ಮಾಡಲಾಗಿದೆ. ಪ್ಲಾಸ್ಟಿಕ್ ಮುಕ್ತ ಸಂತೆಯನ್ನಾಗಿ ಪರಿವರ್ತಿಸಬೇಕೆನ್ನುವ‌ಇಚ್ಚೆಯನ್ನು‌ಇಟ್ಟುಕೊಂಡಿದ್ದು ಸಾರ್ವಜನಿಕರ ಸಹಕಾರದೊರೆತಲ್ಲಿ ಈ ನಮ್ಮ ಕನಸು ಯಶಸ್ವಿಗೊಳಿಸಲಾಗುತ್ತದೆ ಎಂದರು.
ಈ ಸಂದರ್ಭ ಪಂಚಾಯತ್‌ಅಧ್ಯಕ್ಷೆ ವನಿತಾ ಶ್ರೀಧರ್ ಆಚಾರ್ಯ. ಸಂತೆ ಮಾರುಕಟ್ಟೆ ಸಮಿತಿ ಸದಸ್ಯರುಗಳಾದ ಶಿವ ಪೂಜಾರಿ, ಚಂದ್ರ ಶೇಖರ‌ಆಚಾರ್, ಜಯರಾಮ್ ಶೆಟ್ಟಿ, ಕೋ. ಗಿರೀಶ್ ನಾಯಕ್, ಪಾರ್ವತಿ ಹಂದೆ, ಮಾಜಿ‌ಅಧ್ಯಕ್ಷೆಜಯಂತಿಜೆ. ಶೆಟ್ಟಿ, ಶಿವರಾಮ್ ಶೆಟ್ಟಿ, ಪಂಚಾಯತ್ ಪಿಡಿ‌ಓಜ್ಯೋತಿ, ಮೊದಲಾದವರು ಉಪಸ್ಥಿತರಿದ್ದರು.This post first appeared on V4news, please read the originial post: here

Share the post

ಕುಂದಾಪುರ: ಡಿ.29 ಐತಿಹಾಸಿಕ ಕೋಟ ಸಂತೆಗೆ ಚಾಲನೆ

×

Subscribe to V4news

Get updates delivered right to your inbox!

Thank you for your subscription

×