Get Even More Visitors To Your Blog, Upgrade To A Business Listing >>

ಕಟೀಲಿನಲ್ಲಿ ಕ್ರಿಸ್‌ಮಸ್ ಸೌಹಾರ್ದ ಸಂಗಮ, ಕ್ರಿಸ್ಮಸ್ ಸಂದೇಶ ನೀಡಿದ ಡಾ. ಫಾ. ರೊನಾಲ್ದ್ ಕುಟಿನ್ಹೊ

christm

christmas
ಸಂತೋಷ, ಸಮಾಧಾನ, ಪ್ರೀತಿ, ಸೌಹಾರ್ದ ಜೀವನ ನಮ್ಮದಾಗಬೇಕು. ಸಮಾಜಕ್ಕಾಗಿ ತಮ್ಮ ಕೈಲಾದಷ್ಟು ಸಹಾಯ, ಸೇವೆ ನೀಡಿದಾಗ ಬದುಕು ಪಾವನವಾಗುತ್ತದೆ ಎಂದು ಕಟೀಲು ಸಂತ ಜಾಕೊಬರ ಚರ್ಚ್ ಪ್ರಧಾನ ಧರ್ಮಗುರು ಡಾ. ಫಾ. ರೊನಾಲ್ದ್ ಕುಟಿನ್ಹೊ ಹೇಳಿದರು.
ಕಟೀಲು ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ಗುರುವಾರ ನಡೆದ ಕ್ರಿಸ್ಮಸ್ ಸೌಹಾರ್ದ ಸಂಗಮ- ೨೦೧೬ ಕಾರ್ಯಕ್ರಮದಲ್ಲಿ ಅವರು ಕ್ರಿಸ್ಮಸ್ ಸಂದೇಶ ನೀಡಿ ಮಾತನಾಡಿದರು. ಈ ಸಂದರ್ಭ ಕಟೀಲು ಸಂತ ಜಾಕೊಬರ ಚರ್ಚ್ ಪ್ರಧಾನ ಧರ್ಮಗುರು ಡಾ. ಫಾ. ರೊನಾಲ್ದ್ ಕುಟಿನ್ಹೊ ಅವರನ್ನು ಸನ್ಮಾನಿಸಲಾಯಿತು.
ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಕಟೀಲು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ. ಸಂಜೀವ ಮಡಿವಾಳ, ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಸಂತಿ ಎನ್. ಶೆಟ್ಟಿ, ಶೈಲಾ ಸಿಕ್ವೇರಾ, ಮೇರಿ ಡಿಸೋಜ, ಸುಜಾತಾ, ಪುಷ್ಪ, ಸ್ಟೇನಿ ಪಿಂಟೋ, ಉಷಾ, ಕೆ. ಬಿ. ಸುರೇಶ್ ಉಪಸ್ಥಿತರಿದ್ದರು.



This post first appeared on V4news, please read the originial post: here

Share the post

ಕಟೀಲಿನಲ್ಲಿ ಕ್ರಿಸ್‌ಮಸ್ ಸೌಹಾರ್ದ ಸಂಗಮ, ಕ್ರಿಸ್ಮಸ್ ಸಂದೇಶ ನೀಡಿದ ಡಾ. ಫಾ. ರೊನಾಲ್ದ್ ಕುಟಿನ್ಹೊ

×

Subscribe to V4news

Get updates delivered right to your inbox!

Thank you for your subscription

×