Get Even More Visitors To Your Blog, Upgrade To A Business Listing >>

ಕನ್ಯಾನ ಬಾಳೆಕೋಡಿ ಬಳಿಯ ಬಾರ್ಗೆ ಬೀಗ : ಬಾರ್ ಮುಚ್ಚುವಂತೆ ಅಧಿಕಾರಿಗಳ ಆದೇಶ

images

ಕನ್ಯಾನ ಬಾಳೆಕೋಡಿಯ ಸಮೀಪ ಕಾರ್ಯಾಚರಿಸುತ್ತಿದ್ದ ಮದ್ಯದಂಗಡಿಗೆ ಬೀಗ ಹಾಕಲಾಗಿದ್ದು, ಇದರಿಂದ ಸ್ಥಳೀಯರು ನಡೆಸಿದ ಪ್ರತಿಭಟನೆಗೆ ಹಾಗೂ ವಿ೪ನ್ಯೂಸ್ ನಲ್ಲಿ ಸಮಸ್ಯೆಯ ಕುರಿತು ಬಿತ್ತರಿಸಲಾದ ವರದಿಗೆ ಫಲಶ್ರೂತಿ ಸಿಕ್ಕಂತಾಗಿದೆ. ಹೌದು ಇತ್ತೀಚೆಗೆ ಈ ಪರಿಸರದಲ್ಲಿ ತೆರೆಯಲಾದ ಮದ್ಯದಂಗಡಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಹಾಗೂದನ್ನು ಮುಚ್ಚುವಂತೆ ಪ್ರತಿಭಟನೆಯನ್ನು ನಡೆಸಿದ್ದರು. ಅಲ್ಲದೆ ಅಬಕಾರಿ ಅಧಿಕಾರಿಗಳು ತಡೆಯಾಜ್ಞೆಯನ್ನೂ ನೀಡಿದ್ದರು. ಆದರೆ ಇವು ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದ ಬಾರ್ ಮಾಲೀಕರು ಮದ್ಯದಂಗಡಿಯನ್ನು ಆರಂಭಿಸಿದ್ದರು. ಈ ಹಿನ್ನಲೆಯಲ್ಲಿ ಬಾಳೆಕೋಡಿ ಸ್ವಾಮೀಜಿಯವರು ಸುದ್ದಿಗೋಷ್ಠಿ ನಡೆಸಿ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ವಿ4ನ್ಯೂಸ್ ನಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗುದ್ದುವಿನಲ್ಲೂ ಬಹಳಷ್ಟು ಚರ್ಚೆಗಳು ನಡೆದಿದ್ದವು. ಇದೀಗ ಅಧಿಕಾರಿಗಳು ಮದ್ಯದಂಗಡಿಗೆ ಬೀಗ ಹಾಕುವ ಮೂಲಕ ಸ್ಥಳೀಯರ ಪ್ರತಿಭಟನೆ ಹಾಗೂ ವಿ೪ನ್ಯೂಸ್ ನ ಸುದ್ದಿಗುದ್ದು ಕಾರ್ಯಕ್ರಮಕ್ಕೆ ಪ್ರತಿಕ್ರಿಯಿಸಿದ್ದು ಎಲ್ಲರಿಗೂ ಸಂತಸ ತಂದಿದೆ.This post first appeared on V4news, please read the originial post: here

Share the post

ಕನ್ಯಾನ ಬಾಳೆಕೋಡಿ ಬಳಿಯ ಬಾರ್ಗೆ ಬೀಗ : ಬಾರ್ ಮುಚ್ಚುವಂತೆ ಅಧಿಕಾರಿಗಳ ಆದೇಶ

×

Subscribe to V4news

Get updates delivered right to your inbox!

Thank you for your subscription

×