Get Even More Visitors To Your Blog, Upgrade To A Business Listing >>

ಭ್ರೂಣ ಲಿಂಗಹತ್ಯೆ ವಿರುದ್ಧ ಜಾಗೃತಿ ಕಾರ್ಯಕ್ರಮ, ಕುಂದಾಪುರದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ

betibachao

betiba
ಉಡುಪಿ ಜಿಲ್ಲಾ ಪಂಚಾಯಿತಿ, ತಾಲುಕು ಆರೋಗ್ಯ ಅಧಿಕಾರಿಯವರ ಕಚೇರಿ, ಕುಂದಾಪುರ, ಐ‌ಎಂಎ ಕುಂದಾಪುರ, ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ ಕುಂದಾಪುರ, ಇವರ ಸಂಯುಕ್ತಾಶ್ರಯದಲ್ಲಿ ಲಿಂಗ ಭ್ರೂಣಹತ್ಯೆ ನಿಷೇಧ ಕಾಯಿದೆ ಅಡಿಯಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಾಗಾರವು ಕುಂದಾಪುರದ ಹೋಟೆಲ್ ಗ್ರಾಂಡ್ ಹರಿಪ್ರಸಾದದಲ್ಲಿ ನಡೆಯಿತು.
ಕಾರ್ಯಾಗಾರವನ್ನು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು ದೇಶದಲ್ಲಿ ಗಂಡು ಮತ್ತು ಹೆಣ್ಣುಗಳ ಅನುಪಾತ ವರ್ಷದಿಂದ ವರ್ಷಕ್ಕೆ ಇಳಿಯುತ್ತಿದೆ. ಕಾನೂನು ಅಡಿಯಲ್ಲಿ ಭ್ರೂಣ ಹತ್ಯೆಗೆ ಅವಕಾಶ ಇಲ್ಲದೇ ಇದ್ದರೂ ಕೆಲವೊಂದು ಲೋಪಗಳಿಂದ ಭ್ರೂಣ ಹತ್ಯೆ ಗುಪ್ತವಾಗಿ ನಡೆಯುತ್ತಿರುವುದು ದುರಂತ ಎಂದು ಹೇಳಿದರು. ಇಂತಹಾ ಕಾರ್ಯಾಗಾರದಲ್ಲಿ ಭಾಗವಹಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮುಡಿಸುವ ಪ್ರಾಮಾಣಿಕ ಕೆಲಸ ಮಾಡಬೆಕು ಎಮದು ಕರೆ ನೀಡಿದರು.
ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಲಾವಣ್ಯ ಹೆಚ್. ಎನ್. ಮಾತನಾಡಿ, ಮೊದಲು ಭ್ರೂಣ ಹತ್ಯೆ ಮಾಡುವವರು ಅನಕ್ಷರಸ್ಥರು ಮತ್ತು ಅತ್ಯಂತ ಬಡವರು ಎನ್ನುವ ಮಾತಿತ್ತು. ಆದರೆ ತಂತ್ರಜ್ಞಾನದ ಬಳಕೆ ಮೂಲಕ ಈ ಮಾತು ಸುಳ್ಳಾಗಿದ್ದು, ಶ್ರೀಮಂತರೇ ಈ ಕಾನುನು ಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿರುವುದು ಕಂಡು ಬಂದಿದೆ. ಎಲ್ಲೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯುವುದು ಕಂಡು ಬಂದರೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು. ಡಿವೈ‌ಎಸ್ಪಿ ಪ್ರವೀಣ್ ನಾಯಕ್, ಹೋಟೆಲ್ ಮಾಲಕ ಅಭಿನಂದನ ಶೆಟ್ಟಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ನಾಗಭೂಷಣ್ ಉಡುಪ, ಇಂಡಿಯನ್ ಮೆಡಿಕಲ್ ಎಸೋಸಿಯೆಶನ್ನಿನ ಡಾ. ನಿಕಿಲ್ ರೈ, ಬನ್ನಾಡಿ ಸೋಮನಾಥ ಹೆಗ್ಡೆ ಇದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಭವಾನಿ ರಾವ್ ಹಾಗು ಉದಯ್ ಗಾಂವ್ಕರ್ ಮಾಹಿತಿ ನೀಡಿದರು.This post first appeared on V4news, please read the originial post: here

Share the post

ಭ್ರೂಣ ಲಿಂಗಹತ್ಯೆ ವಿರುದ್ಧ ಜಾಗೃತಿ ಕಾರ್ಯಕ್ರಮ, ಕುಂದಾಪುರದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ

×

Subscribe to V4news

Get updates delivered right to your inbox!

Thank you for your subscription

×