Get Even More Visitors To Your Blog, Upgrade To A Business Listing >>

ಮಂಗಳೂರು ಮನಪಾ ಆಸ್ತಿ ತೆರಿಗೆ ಹೆಚ್ಚಳ ವಿಚಾರ, ತೆರಿಗೆ ಹೆಚ್ಚಳ ಮಾಡಿದ್ದು, ಮೋಸ, ಕ್ಷಮಿಸಲಾರದ ಅಪರಾಧ, ಕಾಂಗ್ರೆಸ್ ವಿರುದ್ಧ ಜನಾರ್ದನ ಪೂಜಾರಿ ವಾಗ್ದಾಳಿ

Tags: agravesup

poojary

ಕಾಂಗ್ರೆಸ್ ಜನತೆಗೆ ಕೊಟ್ಟ ಮಾತು ತಪ್ಪಿದೆ. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಮಂಗಳೂರಿನ ಜನತೆಗೆ ದೊಡ್ಡ ಮೋಸ ಮಾಡಿದೆ. ಕಾಂಗ್ರೆಸ್ ಮತ್ತು ಮಂಗಳೂರು ಮಹಾನಗರ ಪಾಲಿಕೆ ವಿರುದ್ಧ ಹೀಗೆಲ್ಲಾ ಹರಿಹಾಯ್ದದ್ದು ಬಿಜೆಪಿ ಮುಖಂಡರಲ್ಲ. ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನಪಾ ವ್ಯಾಪ್ತಿಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆಯಲ್ಲಿ ೧೫ ಶೇಕಡಾ ಹೆಚ್ಚಳ ಮಾಡಿದ್ದಾರೆ. ಚುನಾವಣೆಗೆ ಮುನ್ನ ತೆರಿಗೆ ಹೆಚ್ಚಿಸಲ್ಲ ಎಂದು ನಾವು ಹೇಳಿದ್ದೆವು. ತೆರಿಗೆ ಹೆಚ್ಚಿಸುವುದಿಲ್ಲ ಎಂದು ಪಕ್ಷ ವಾಗ್ದಾನ ನೀಡಿತ್ತು. ನಾನೇ ಪ್ರಮಾಣ ವಚನ ಭೋದಿಸಿದ್ದೆ. ಆದರೆ ನಮ್ಮ ಪಕ್ಷ ಜನರಿಗೆ ಕೊಟ್ಟ ಮಾತನ್ನು ಉಳಿಸಿಲ್ಲ. ಜನೆತೆಗೆ ಈ ಮೂಲಕ ದೊಡ್ಡ ಮೋಸ ಮಾಡಿದ್ದು, ಕ್ಷಮಿಸಲಾರದ ಅಪರಾಧ. ಈ ತಪ್ಪಿಗಾಗಿ ನಾನು ಮನಪಾ ವ್ಯಾಪ್ತಿಯ ಜನರ ಕ್ಷಮೆ ಯಾಚಿಸುತ್ತಿದ್ದೇನೆ ಎಂದರು.
ಇನ್ನು ಸಿ‌ಎಂ ವಿರುದ್ಧ ಎಂದಿನಂತೆ ವಾಗ್ದಾಳಿ ನಡೆಸಿದ ಪೂಜಾರಿ, ಸಿ‌ಎಂಗೆ ಆಡಳಿತ ಮಾಡಲು ಗೊತ್ತಿಲ್ಲ. ಸಿ‌ಎಂ ಸಂಪೂರ್ಣ ವಿಫಲರಾಗಿದ್ದಾರೆ. ಸಿ‌ಎಂ ಆಗಿ ನಿದ್ದೆ ಮಾಡಬೇಡಿ. ಅಧಿಕಾರ ಬಿಟ್ಟು ಮನೆಗೆ ಹೋಗಿ. ಈ ಮೂಲಕ ಕಾಂಗ್ರೆಸ್ ಪಕ್ಷವನ್ನು ಉಳಿಸಿ ಎಂದರು. ಇನ್ನು ಎತ್ತಿನಹೊಳೆ ಯೋಜನೆ ಸಂಪೂರ್ಣ ಹಿಂಪಡೆಯಬೇಕು. ಕರ್ನಾಟಕವನ್ನು ಸಹರಾ ಮರುಭೂಮಿ ಮಾಡಬೇಡಿ ಎಂದು ಕಿವಿಮಾತು ಹೇಳಿದರು.



This post first appeared on V4news, please read the originial post: here

Share the post

ಮಂಗಳೂರು ಮನಪಾ ಆಸ್ತಿ ತೆರಿಗೆ ಹೆಚ್ಚಳ ವಿಚಾರ, ತೆರಿಗೆ ಹೆಚ್ಚಳ ಮಾಡಿದ್ದು, ಮೋಸ, ಕ್ಷಮಿಸಲಾರದ ಅಪರಾಧ, ಕಾಂಗ್ರೆಸ್ ವಿರುದ್ಧ ಜನಾರ್ದನ ಪೂಜಾರಿ ವಾಗ್ದಾಳಿ

×

Subscribe to V4news

Get updates delivered right to your inbox!

Thank you for your subscription

×