Get Even More Visitors To Your Blog, Upgrade To A Business Listing >>

ಭಟ್ಕಳ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ

Tags: agravesup

dsc06926_fotor

ರೈಲು ನಿಲ್ದಾಣಗಳಲ್ಲಿ ಕ್ರೂರಿ ಅಕ್ಬರ್‌ನನ್ನು ಚಿತ್ರಿಸಿದಲ್ಲಿ ಹಿಂದೂಗಳಲ್ಲಿ ಜನಾಕ್ರೋಶ ಭುಗಿಲೇಶಬಹುದು ಎಂದು ಆಗ್ರಹಿಸಿ ಕೇಂದ್ರ ರೈಲ್ವೇ ಸಚಿವರಿಗೆ, ಕೇಂದ್ರ ಸರಕಾರವು ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸಬೇಕೆಂದು ಕೇಂದ್ರ ವಿದೇಶಾಂಗ ಸಚಿವರಿಗೆ ಮತ್ತು ಇಸ್ಲಾಮಿಕ್ ಬ್ಯಾಂಕಿಂಗ್ನ ಮತಾಂಧ ಪ್ರಸ್ತಾಪವನ್ನು ಮಾಡುವ ರಿಸರ್ವ್ ಬ್ಯಾಂಕ್‌ನ ಅಧಿಕಾರಿಯ ವಿಚಾರಣೆ ಮಾಡಬೇಕೆಂದು ಆಗ್ರಹಿಸಿ ವಿತ್ತ ಸಚಿವರಿಗೆ ಹಾಗೂ ಡಿಸೆಂಬರ್ ೩೧ ಕ್ಕೆ ಹೊಸ ವರ್ಷದ ಹೆಸರಿನಲ್ಲಿ ನಡೆಯುವ ತಪ್ಪು ಆಚರಣೆ ನಿಲ್ಲಿಸಿ, ರಾಜ್ಯದ ತೀರ್ಥ ಕ್ಷೇತ್ರಗಳು, ಐತಿಹಾಸಿಕ ಮತ್ತು ಸಾರ್ವಜನಿಕ ಸ್ಥಳಗಳ ವಿಡಂಬನೆ ತಡೆಯಿರಿ ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಭಟ್ಕಳ ಹಿಂದೂ ಜನಜಾಗೃತಿ ಸಮಿತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲನವನ್ನು ಸಹಾಯಕ ಆಯುಕ್ತರ ಕಛೇರಿಯಲ್ಲಿ ನಡೆಸಿ ಸಹಾಯಕ ಆಯುಕ್ತರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
dsc06926_fotordsc06927_fotor
ಮನವಿಯಲ್ಲಿ ಶೌರ್ಯ ಪರಾಕ್ರಮದ ಪರಂಪರೆ ಹೊಂದಿರುವ ಭಾರತ ಭೂಮಿಯಲ್ಲಿ ಅನೇಕ ತೇಜಸ್ವಿ ಹಿಂದೂ ರಾಜರು ಆಯಾ ಕಾಲದಲ್ಲಿ ಎದುರಾದ ಆಕ್ರಮಣಗಳ ಸಂಕಷ್ಟಗಳನ್ನು ತಮ್ಮ ಪರಾಕ್ರಮದಿಂದ ಎದುರಿಸಿ ಹಿಮ್ಮೆಟ್ಟಿದ್ದಾರೆ. ಹೀಗಿರುವಾಗ ರೈಲ್ವೆ ಸಚಿವಾಲಯವು ರೈಲು ನಿಲ್ದಾಣದಲ್ಲಿ ಆಧುನೀಕರಣದ ಯೋಜನೆಯಡಿ ವಿವಿಧ ರೈಲು ನಿಲ್ದಾಣಗಳ ಗೋಡೆಗಳ ಮೇಲೆ ರಾಮಾಯಣ ಮತ್ತು ಅಕ್ಬರನ ತಥಾಕಥಿತ ಪರಾಕ್ರಮಗಳ ಪ್ರಸಂಗವನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸಲು ನಿರ್ಣಯಿಸಿದೆ. ಹೀಗೆ ಮಾಡುವುದು ಹಿಂದೂಗಳ ವಿಶ್ವಾಸದ್ರೋಹವೇ ಆಗಿದೆ. ಆದುದರಿಂಧ ರೈಲು ನಿಲ್ದಾಣದಲ್ಲಿ ಕ್ರೂರಿ ಅಕ್ಬರನ ಚಿತ್ರಗಳನ್ನು ಬಿಡಿಸಿದಲ್ಲಿ ರೈಲು ಸಚಿವಾಲಯವು ಹಿಂದೂಗಳ ಜನಾಕ್ರೋಶವನ್ನು ಎದುರಿಸಬೇಕಾಗುತ್ತದೆಂದು ಎಚ್ಚರಿಸಿ ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ಕೇಂದ್ರ ರೈಲ್ವೇ ಸಚಿವರಿಗೆ ಮನವಿಯನ್ನು ಸಲ್ಲಿಸಲಾಯಿತು. ಇನ್ನು ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಹಿಂದೂಗಳ ಮೇಲೆ ಮತಾಂಧರಿಂದ ಆಗುತ್ತಿರುವ ಆಕ್ರಮಣಗಳು, ಹಿಂದುಗಳ ಭೂಮಿಯನ್ನು ಕಬಳಿಸುವುದು, ದೇವಸ್ಥಾನಗಳ ಮೇಲೆ ದಾಳಿ ಮಾಡುವುದು, ದೇವತೆಗಳ ಮೂರ್ತಿಗಳನ್ನು ಭಗ್ನಗೊಳಿಸುವುದು ಮುಂತಾದ ದುಷ್ಕೃತ್ಯಗಳು ದಿನನಿತ್ಯ ನಡೆಯುತ್ತಿದೆ. ಅದರಲ್ಲು ಕಳೆದ ಕೆಲವು ದಿನಗಳಲ್ಲಿ ಬೃಹತ್ ಪ್ರಮಾಣದಲ್ಲಿ ಹೆಚ್ಚಾಗಿದೆ. ಮುಸ್ಲಿಂ ರಾಷ್ಟ್ರದಲ್ಲಿನ ಹಿಂದೂಗಳಿಗೆ ಇಂತಹ ಸಂಧರ್ಭದಲ್ಲಿ ಭಾರತದ ಸಹಾಯ ಹಸ್ತದ ಅವಶ್ಯಕತೆ ಇದೆ. ಅವರಿಗಾಗುತ್ತಿರುವ ದೌರ್ಜನ್ಯದ ವಿಷಯವನ್ನು ಭಾರತ ವಿಶ್ವಸಂಸ್ಥೆಯಲ್ಲಿ ಮಂಡಿಸಿ ಹಿಂದೂಗಳ ಸುರಕ್ಷತೆಯ ಕುರಿತು ಬಾಂಗ್ಲಾದೇಶದ ಮೇಲೆ ಒತ್ತಡವನ್ನು ಹೇರಬೇಕೇಂದು ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿಯನ್ನು ಸಲ್ಲಿಸಲಾಯಿತು. ಹಾಗೂ ಶರಿಯತ್ ಆಧಾರದಲ್ಲಿ ದೇಶದ ಬ್ಯಾಂಕುಗಳಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ಆರಂಬಿಸುವ ಸಂಧರ್ಬದಲ್ಲಿ ಕೇಂದ್ರ ಸರಕಾರಕ್ಕೆ ರಿಸರ್ವ ಬ್ಯಾಂಕ್ ನೀಡಿದ ಪ್ರಸ್ತಾಪವು ಅನುಚಿತವಾಗಿದೆ ಎಂದು ಲೋಕಸಭೆಯಲ್ಲಿ ಸ್ಪಷ್ಟವಾಗಿದೆ. ಆದರೆ ಧರ್ಮನಿರಪೇಕ್ಷತೆಯ ಹೆಸರಿನಲ್ಲಿ ಮುಸಲ್ಮಾನರ ಓಲೈಕೆಯನ್ನು ಮಾಡುವ ವ್ಯವಸ್ಥೆಯನ್ನು ಆರಂಬಿಸುವ ಪ್ರಸ್ತಾಪವನ್ನು ಮಂಡಿಸುವ ಸಂಬಂಧಿತ ಅಧಿಕಾರಿಯ ಮನೋಭೂಮಿಕ ಏನಿತ್ತು, ಯಾವ ಆಧಾರದಲ್ಲಿ ಇಂತಹ ಪ್ರಸ್ತಾಪವನ್ನು ಹಾಗೂ ಯಾರ ಒತ್ತಡಕ್ಕೆ ಮಣಿದು ಅಥವಾ ಇನ್ಯಾವುದಾದರೂ ಕಾರಣ ಇದೆಯಾ ಎನ್ನುವ ಬಗ್ಗೆ ವಿಚಾರಣೆ ಮಾಡಬೇಕೆಂದು ಕೋರಿಕೆ ಮನವಿಯನ್ನು ಸಹಾಯಕ ಆಯುಕ್ತರ ಮೂಲಕ ವಿತ್ತ ಸಚಿವರಿಗೆ ಸಲ್ಲಿಸಲಾಯಿತು. ಹಾಗೂ ಪಾಶ್ಚಾತ್ಯರ ಅಂಧಾನುಕರಣೆಯಿಂದ ಭಾರತದಲ್ಲಿಯೂ ಹೊಸವರ್ಷವನ್ನು ಯುಗಾದಿಯ ಬದಲು ಡಿಸೆಂಬರ್ ೩೧ರ ಮಧ್ಯರಾತ್ರಿ ೧೨ಗಂಟೆಗೆ ಆಚರಿಸುತ್ತಿರುವ ಕೆಟ್ಟ ರೂಡಿ ಹೆಚ್ಚಾಗಿದೆ. ಅಂದು ಯುವಕರು ತೀರ್ಥಸ್ಥಳಗಳು, ಪ್ರವಾಸಿತಾಣಗಳು ಐತಿಹಾಸಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯಪಾನ-ಧೂಮಪಾನ ಮಾಡುವುದು, ಜೋರಾಗಿ ವಾಹನ ಚಲಾಯಿಸಿ ಅಪಘಾತ ಮಾಡುವುದು, ಪಟಾಕಿ ಸಿಡಿಸಿ ಪ್ರದರ್ಶನ ಮಾಡುವುದು, ಕರ್ಕಶ ಧ್ವನಿವರ್ಧಕದಲ್ಲಿ ಹಾಡು ಹಾಕುವುದು, ಅಶ್ಲೀಲ ಹಾವಭಾವ ಮಾಡುತ್ತ ನೃತ್ಯ ಮಾಡುವುದು, ಯುವತಿಯರನ್ನು -ಸ್ತ್ರೀಯರನ್ನು ಛೇಡಿಸುವುದು ಮುಂತಾದ ಅನಾಚಾರಗಳು ನಡೆಯುತ್ತಿದೆ. ಈ ರೀತಿ ಅನಾಚಾರದ ಕಾರ್ಯಕ್ಕೆ ಆರಕ್ಷಕ ಇಲಾಖೆ ಮುಂದಾಳತ್ವ ವಹಿಸಬೇಕು. ಹಾಘೂ ಇಂತಹ ತಪ್ಪು ಕೃತ್ಯಗಳನ್ನು ತಡೆಯಲು ಒಂದು ವಿಶೇಷ ಆಂದೋಲನವನ್ನು ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿ ಸಹಾಯಕ ಆಯುಕ್ತರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ಸಹಾಯಕ ಆಯುಕ್ತರ ಮೂಲಕ ಅನುಪಸ್ಥಿತಿಯಲ್ಲಿ ಕಛೇರಿಯ ಅಧಿಕಾರಿಗಳು ಮನವಿಯನ್ನು ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ಪುಂಡಲೀಕ ಪೈ, ಸುಧಾಕರ ಮಹಾಲೆ, ಉಲ್ಲಾಸ ಪ್ರಭು, ಗುರು ಸಾಣೀಕಟ್ಟಾ, ದಯಾನಂದ ಪ್ರಭು, ರಾಜು ಮೂಡಭಟ್ಕಳ, ಕೇಶವ ನಾಯ್ಕ, ಮೋಹನ ಶಿರಾಲಿಕರ, ಪಾಂಡುರಂಗ ನಾಯ್ಕ, ರಂಗ ಪ್ರಭು, ರಾಮಚಂದ್ರ ನಾಯ್ಕ ಮುಂತಾದವರು ಇದ್ದರು.

ರಾಘವೇಂದ್ರ ಮಲ್ಯ ಭಟ್ಕಳThis post first appeared on V4news, please read the originial post: here

Share the post

ಭಟ್ಕಳ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ

×

Subscribe to V4news

Get updates delivered right to your inbox!

Thank you for your subscription

×