Get Even More Visitors To Your Blog, Upgrade To A Business Listing >>

ಒಪ್ಪಂದದ ಉದ್ಯೋಗದಲ್ಲಿರುವ ಮಹಿಳೆ, ರಕ್ಷಣೆ ನೀಡದಿದ್ದರೆ ಪರವಾನಿಗೆ ರದ್ದು, ಕರ್ನಾಟಕ ಒಪ್ಪಂದ ನಿಯಂತ್ರಣ ಜಾರಿಗೆ

gettyimages-158546932-cropped

ಒಪ್ಪಂದ ಆಧಾರದಲ್ಲಿ ಕೆಲಸ ನಿರ್ವಹಿಸುವ ಮಹಿಳಾ?ಉದ್ಯೋಗಿಗಳಿಗೆ ಸುರಕ್ಷತೆ, ಕನಿಷ್ಠ ಸೌಲಭ್ಯ ಒದಗಿಸದೆ?ಇದ್ದರೆ ಉದ್ದಿಮೆಗಳ ಪರವಾನಗಿ ರದ್ದುಪಡಿಸಲು ಅವಕಾಶ?ಇರುವ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದೆ.
‘ಕರ್ನಾಟಕ ಒಪ್ಪಂದ ಕಾರ್ಮಿಕರ ನಿಯಂತ್ರಣ ಮತ್ತು ರದ್ದತಿ ತಿದ್ದುಪಡಿ ನಿಯಮಗಳು-೨೦೧೬’ ಅನ್ನು ರಚಿಸಿ ಕಾರ್ಮಿಕ ಇಲಾಖೆ ಇದೇ ೧೯ರಂದು ಅಂತಿಮ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರದ ಒಪ್ಪಂದ ಕಾರ್ಮಿಕರ ಕಾಯ್ದೆ ೧೯೭೦ರ ಅನ್ವಯ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ.
ಐಟಿ, ಬಿಟಿ ಕಂಪೆನಿಗಳ ಉದ್ಯೋಗಿಗಳ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ನಡೆದಾಗ ಗೃಹ ಇಲಾಖೆ, ಮಹಿಳಾ?ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಮಹಿಳಾ?ಉದ್ಯೋಗಿಗಳಿಗೆ ಭದ್ರತೆ ಒದಗಿಸುವ ಕಠಿಣ ನಿಯಮ ರೂಪಿಸಿದ್ದವು.
ಕಾರ್ಮಿಕ ಇಲಾಖೆ ಹೊಸದಾಗಿ ತರಲು ಉದ್ದೇಶಿಸಿರುವ ನಿಯಮಗಳ ಪ್ರಕಾರ, ಶರತ್ತುಗಳನ್ನು ಪಾಲಿಸದ ಉದ್ದಿಮೆಗಳ ಪರವಾನಗಿ ರದ್ದು ಮಾಡುವ ಅವಕಾಶ ಕಲ್ಪಿಸಲಾಗಿದೆ. ಮಹಿಳಾ ಉದ್ಯೋಗಿಗಳಿಗೆ ರಕ್ಷಣೆ, ಸೌಲಭ್ಯ ಒದಗಿಸುವ ಕುರಿತು ೧೫ ಶರತ್ತುಗಳನ್ನು ವಿಧಿಸಿ ನಿಯಮಗಳನ್ನು ರೂಪಿಸಲಾಗಿದೆ.

ಮಹಿಳೆಯರ ಸಮ್ಮತಿ ಇಲ್ಲದೇ ರಾತ್ರಿ ಪಾಳಿಗೆ ನಿಯೋಜಿಸುವಂತಿಲ್ಲ. ರಾತ್ರಿ ಪಾಳಿಯಲ್ಲಿ ಮಹಿಳೆಯರನ್ನು ನಿಯೋಜಿಸುವಾಗ ಒಬ್ಬರಿಗಿಂತ ಹೆಚ್ಚಿನ ಮಹಿಳೆಯರು ಇರುವುದು ಕಡ್ಡಾಯ. ತಿಂಗಳಿಡೀ ಕೆಲವರನ್ನು ಮಾತ್ರ ರಾತ್ರಿ ಪಾಳಿಗೆ ನಿಯೋಜಿಸಬಾರದು. ಎಲ್ಲ ಉದ್ಯೋಗಿಗಳನ್ನು ರೊಟೇಶನ್ ಆಧಾರದಲ್ಲಿ ನಿಯೋಜನೆ ಮಾಡಬೇಕು. ಮಹಿಳಾ ಸಿಬ್ಬಂದಿ ಸಂಖ್ಯೆಗೆ ತಕ್ಕಂತೆ ಭದ್ರತಾ ಸಿಬ್ಬಂದಿ ಇರಬೇಕು. ಉದ್ಯೋಗಿಗಳ ಸಂಖ್ಯೆಗೆ ತಕ್ಕಂತೆ ವಿಶ್ರಾಂತಿ ಕೊಠಡಿ, ಖಾಸಗಿತನಕ್ಕೆ ಧಕ್ಕೆ ಬರದಂತೆ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಕೆಲಸ ನಿರ್ವಹಿಸುವ ಅವಧಿಯಲ್ಲಿ ಉದ್ಯೋಗಿಗಳ ಮಕ್ಕಳನ್ನು ಆರೈಕೆ ಮಾಡುವ ಶಿಶುಪಾಲನಾ ಕೇಂದ್ರಗಳ ವೆಚ್ಚವನ್ನು ಉದ್ದಿಮೆಗಳು ಭರಿಸಬೇಕು. ಉದ್ಯೋಗಿಗಳನ್ನು ಕರೆತರುವ ಮತ್ತು ಮನೆಗೆ ಬಿಡುವ ವಾಹನಗಳ ಚಾಲಕರ ವೈಯಕ್ತಿಕ ಮಾಹಿತಿ ಪಡೆಯಬೇಕು. ನೇಮಕಾತಿಗೂ ಮುನ್ನ ಚಾಲಕರ ಸನ್ನಡತೆ ಮಾಹಿತಿ ಪಡೆಯುವುದು ಅಗತ್ಯ. ಉದ್ಯೋಗಿಗಳ ಮೊಬೈಲ್ ಸಂಖ್ಯೆ, ಮನೆ ವಿಳಾಸವನ್ನು ಯಾವುದೇ ವ್ಯಕ್ತಿಗೂ ನೀಡಕೂಡದು. ಕಚೇರಿಗೆ ಕರೆತರುವ ವಾಹನಗಳಲ್ಲಿ ಮಹಿಳೆಯರನ್ನು ಮೊದಲಿಗೆ ಹತ್ತಿಸಿಕೊಳ್ಳದೆ ಕೊನೆಯಲ್ಲಿ ಹತ್ತಿಸಿಕೊಳ್ಳಬೇಕು. ಮನೆಗೆ ಬಿಡುವ ವಾಹನಗಳಲ್ಲಿ ಪ್ರಯಾಣದ ಕೊನೆಯಲ್ಲಿ ಬಿಡಬಾರದು. ವಾಹನಗಳ ಓಡಾಟದ ಕಣ್ಗಾವಲಿಗೆ ನಿಯಂತ್ರಣ ಕೊಠಡಿ ಅಥವಾ ಹೆಲ್ಪ್ ಡೆಸ್ಕ್ ಸ್ಥಾಪಿಸಬೇಕು.This post first appeared on V4news, please read the originial post: here

Share the post

ಒಪ್ಪಂದದ ಉದ್ಯೋಗದಲ್ಲಿರುವ ಮಹಿಳೆ, ರಕ್ಷಣೆ ನೀಡದಿದ್ದರೆ ಪರವಾನಿಗೆ ರದ್ದು, ಕರ್ನಾಟಕ ಒಪ್ಪಂದ ನಿಯಂತ್ರಣ ಜಾರಿಗೆ

×

Subscribe to V4news

Get updates delivered right to your inbox!

Thank you for your subscription

×