Get Even More Visitors To Your Blog, Upgrade To A Business Listing >>

ಎಲ್ಲ ಧರ್ಮ ಪಕ್ಷಗಳಿಗಿಂತ ಮಾನವತೆ ಮುಖ್ಯ, ಸುಳ್ಯದಲ್ಲಿ ಬಿಶಪ್ ಅಲೋಶಿಯಸ್ ಪಾವ್ಲ್ ಡಿಸೋಜಾ

download

ಧರ್ಮಗಳು, ಪಕ್ಷಗಳು ಯಾವುದೇ ಆಗಿರಲಿ ನಾವೆಲ್ಲ ದೇವರ ಮಕ್ಕಳು, ಭಾರತೀಯರು ಎಂದ ಮೇಲೆ ಅನ್ಯೋನ್ಯತೆಯಿಂದ ಜೀವಿಸಬೇಕು. ಪ್ರೀತಿ, ಸೌಹಾರ್ದದಿಂದ ಬಾಳಬೇಕು. ಅಂತಹ ಅನ್ಯೋನ್ಯತೆ ಸುಳ್ಯದಲ್ಲಿದೆ ಎಂದು ಮಂಗಳೂರಿನ ಧರ್ಮಪ್ರಾಂತ್ಯದ ಬಿಶಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಹೇಳಿದರು.

ಸುಳ್ಯ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿಸ್ತರಿತ ಕಟ್ಟಡ ಮತ್ತು ಮುಖ್ಯ ಪ್ರವೇಶ ದ್ವಾರಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ನಾಲ್ಕೂ ರಾಜಕೀಯ ಪಕ್ಷಗಳ ಮುಖಂಡರು ಸೇರಿದ್ದು, ಅವರ ಅನ್ಯೋ ನ್ಯತೆಯನ್ನು ತೋರಿಸುತ್ತದೆ ಎಂದು ಹೇಳಿದರು. ದಾನಿಗಳನ್ನು ಹಾಗೂ ಗುತ್ತಿಗೆದಾರರನ್ನು ಸಮಾರಂಭದಲ್ಲಿ ಸನ್ಮಾನಿ ಸಲಾಯಿತು.
ಮಂಗಳೂರಿನ ಧರ್ಮಪ್ರಾಂತ್ಯದ ಬಿಷಪ್ ಅಲೋಶೀಯಸ್ ಪಾವ್ಲ್ ಡಿಸೋಜ ಸೇವೆ ಹಾಗೂ ಪ್ರೀತಿಯಲ್ಲಿ ಅದ್ವಿತೀಯರಾಗಿದ್ದಾರೆ ಎಂದು ಸುಳ್ಯದ ಸೇಂಟ್ ಬ್ರಿಜಿಡ್ಸ್ ಚರ್ಚಿನ ಧರ್ಮಗುರು ಫಾದರ್ ವಿನ್ಸೆಂಟ್ ಡಿಸೋಜ ಕೊಂಡಾಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಮಾತನಾಡಿ, ‘ಆಂಗ್ಲ ಭಾಷಾ ಅಗತ್ಯವನ್ನು ಎಲ್ಲರೂ ತಿಳಿದಿದ್ದು, ಅದರ ಮೋಹ ಹೋಗುವುದಿಲ್ಲ. ತಾಲ್ಲೂಕಿನಲ್ಲಿರುವ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಅತಿ ಹೆಚ್ಚು ವಿದ್ಯಾರ್ಥಿ ಗಳನ್ನು ಸೇಂಟ್ ಜೋಸೆಫ್ ಶಾಲೆ ಹೊಂದಿದೆ’ ಎಂದರು. ಎಂ.ಬಿ.ಸದಾಶಿವ, ವೆಂಕಟ್ ವಳಲಂಬೆ, ರಾಬರ್ಟ್ ಡಿ’ಸೋಜ ಸಹ ಮಾತನಾಡಿದರು. ಸುನಿತಾ ಮೊಂತೆರೊ, ಕೆಂಪಲಿಂಗಪ್ಪ, ಅರುಳಪ್ಪನ್, ಸಿಸ್ಟರ್ ಬಿನೋಮಾ, ಲೂಸಿ ಡಿಸೋಜ, ಭಾಸ್ಕರ್ ರಾವ್, ಸೇಂಟ್ ಜೋಸೆಫ್ ಪ್ರಾಥಮಿಕ ಗೀತಾಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.



This post first appeared on V4news, please read the originial post: here

Share the post

ಎಲ್ಲ ಧರ್ಮ ಪಕ್ಷಗಳಿಗಿಂತ ಮಾನವತೆ ಮುಖ್ಯ, ಸುಳ್ಯದಲ್ಲಿ ಬಿಶಪ್ ಅಲೋಶಿಯಸ್ ಪಾವ್ಲ್ ಡಿಸೋಜಾ

×

Subscribe to V4news

Get updates delivered right to your inbox!

Thank you for your subscription

×