Get Even More Visitors To Your Blog, Upgrade To A Business Listing >>

ಪೆರ್ಮುದೆ ಬಳಿ ಅಪರಿಚಿತ ಯುವಕನ ಜಜ್ಜಿ ಕೊಲೆ, ಬಜ್ಪೆ ಪೋಲೀಸರಿಂದ ತನಿಖೆ ಆರಂಭ

bajpe

bajape
ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆ ಭಟ್ರಕೆರೆ ಸಮೀಪದ ಕಣಿಕಟ್ಟ ಕಿರು ಸೇತುವೆಯ ಮೇಲೆ ಒಬ್ಬ ಯುವಕನನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು, ಶವವನ್ನು ಎಸೆದುಹೋದ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ.
ಬಜ್ಪೆ ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ಟಿ. ಡಿ. ನಾಗರಾಜ್ ನೇತೃತ್ವದ ಪೊಲೀಸ್ ತಂಡ ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಿದೆ. ಅಂದಾಜು ೨೫-೩೦ ವರ್ಷ ವಯಸ್ಸಿನ ಅಪರಿಚಿತ ಯುವಕನನ್ನು ನಿನ್ನೆ ರಾತ್ರಿಯೇ ಕೊಲೆಗೈದಿರಬೇಕೆಂದು ಶಂಕಿಸಲಾಗಿದೆ. ಇಂದು ಬೆಳಗ್ಗೆ ೮.೩೦ ಸುಮಾರಿಗೆ ಸ್ಥಳೀಯರು ಸೇತುವೆಯ ಕೆಳಭಾಗದಲ್ಲಿ ಅಪರಿಚಿತ ಶವ ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಪರಿಶೀಲನೆ ನಡೆಸಿ ವೆನ್ಲಾಕ್ ಶವಾಗಾರಕ್ಕೆ ಸಾಗಿಸಿದ್ದಾರೆ. ಯುವಕನ ಕತ್ತಿನಲ್ಲಿ ಹಗ್ಗ ಬಿಗಿಯಲಾಗಿದ್ದರೆ ಹಣೆ ಹಾಗೂ ತಲೆಯ ಹಿಂಭಾಗದಲ್ಲಿ ಆಳವಾದ ಗಾಯದ ಗುರುತು ಇದೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಬಳಿಕ ಕಲ್ಲಿನಿಂದ ಜಜ್ಜಿ ಯುವಕನ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆಗೈದು ಕಿರುಸೇತುವೆಯ ಕೆಳಗೆ ಎಸೆದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳದಲ್ಲಿ ಕೊಲೆಗೆ ಉಪಯೋಗಿಸಿದ ಗೋಡೆಕಟ್ಟುವ ಕಲ್ಲು ಪತ್ತೆಯಾಗಿದ್ದು, ಸೇತುವೆಯ ಮೇಲ್ಬಾಗದಲ್ಲಿ ರಕ್ತದ ಕಲೆ ಗೋಚರವಾಗಿದೆ. ಬೆಳಗ್ಗಿನ ಜಾವ ನೀರು ರಕ್ತದಲ್ಲಿ ತೋಯ್ದುಕೊಂಡಿರುವುದು ಬೆಳಕಿಗೆ ಬಂದಿತ್ತು. ಮೃತ ಯುವಕ ಜೀನ್ಸ್ ಪ್ಯಾಂಟ್, ಬನಿಯನ್ ಧರಿಸಿದ್ದು ಹಿಂದಿ ಭಾಷಿಗನಂತೆ ಗೋಚರಿಸುತ್ತಾನೆ. ಈತ ಸಮೀಪದ ಪೆರ್ಮುದೆಯಲ್ಲಿರುವ ಕಂಪೆನಿಗಳ ಕಾರ್ಮಿಕನಾಗಿರಬಹುದೆಂದು ಹೇಳಲಾಗುತ್ತಿದೆ. ಗುರುತು ಪತ್ತೆಹಚ್ಚಲು ಆತನ ಬಳಿ ಯಾವುದೇ ದಾಖಲೆ ದೊರಕಿಲ್ಲ. ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪರಿಚಿತನ ಪರಿಚಯ ಸಿಗದ ಕಾರಣ ವಾರಿಸುದಾರರಿದ್ದಲ್ಲಿ ಬಜ್ಪೆ ಠಾಣೆಯ ದೂರವಾಣಿ ಸಂಖ್ಯೆಯಾದ ೦೮೨೪-೨೨೦೫೩೧ ಅಥವಾ ೯೪೮೦೮೦೨೩೧೩ ಇದನ್ನು ಸಂಪರ್ಕಿಸುವಂತೆ ಬಜ್ಪೆ ಇನ್ಸ್ಪೆಕ್ಟರ್ ಟಿ. ಡಿ. ನಾಗರಾಜ್ ಮನವಿ ಮಾಡಿದ್ದಾರೆ.This post first appeared on V4news, please read the originial post: here

Share the post

ಪೆರ್ಮುದೆ ಬಳಿ ಅಪರಿಚಿತ ಯುವಕನ ಜಜ್ಜಿ ಕೊಲೆ, ಬಜ್ಪೆ ಪೋಲೀಸರಿಂದ ತನಿಖೆ ಆರಂಭ

×

Subscribe to V4news

Get updates delivered right to your inbox!

Thank you for your subscription

×