Get Even More Visitors To Your Blog, Upgrade To A Business Listing >>

ಸುಳ್ಯ ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆ, ಕಿಂಡಿ ಅಣೆಕಟ್ಟಗಳ ಸ್ಥಿತಿಗತಿಗಳ ವರದಿ ಸಲ್ಲಿಸಲು ಆದೇಶ

tpsull

tpsullia
ತಾಲೂಕಿನಲ್ಲಿರುವ ಎಲ್ಲಾ ಕಿಂಡಿ ಅಣೆಕಟ್ಟುಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ವರದಿ ಸಲ್ಲಿಸಬೇಕು ಎಂದು ಗ್ರಾಮ ಪಂಚಾಯತ್ ಮತ್ತು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ತಾ. ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಧುಕುಮಾರ್ ಈ ಬಾರಿ ಜನವರಿ ತಿಂಗಳಲ್ಲೇ ಕುಡಿಯುವ ನೀರಿನ ಅಭಾವ ತಲೆದೋರಲಿದ್ದು ಇದಕ್ಕಾಗಿ ಎಲ್ಲಾ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕಿ ನೀರನ್ನು ಶೇಖರಿಸಬೇಕಾದ ಅನಿವಾರ್ಯತೆ ಇದೆ. ಗ್ರಾಮ ಪಂಚಾಯತ್ ಕೂಡ ತುರ್ತು ಕುಡಿಯುವ ನೀರಿನ ಬೇಡಿಕೆಯ ಅಂದಾಜು ಪಟ್ಟಿ ತಯಾರಿಸಿ ಜಿಲ್ಲಾ ಪಂಚಾಯತ್‌ಗೆ ಕಳುಹಿಸಬೇಕು ಹೇಳಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ಕಳೆದ ಕೆಡಿಪಿ ಸಭೆಯಲ್ಲಿಯೆ ಕಿಂಡಿ ಅಣೆಕಟ್ಟುಗಳ ಮಾಹಿತಿ ಕೇಳಿದ್ದರೂ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಿಲ್ಲ. ತಾಲೂಕಿನಲ್ಲಿರುವ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕಿ ನೀರನ್ನು ಸಂಗ್ರಹಿಸುವ ಕೆಲಸ ಆಗಬೇಕು. ನೀರು ಶೇಖರಣೆ ಆಗದ ಅಣೆಕಟ್ಟುಗಳನ್ನು ದುರಸ್ತಿ ಮಾಡಬೇಕು. ಇದಕ್ಕೆ ಎನ್‌ಆರ್‌ಜಿ ಮತ್ತು ಜಲಾನಯನ ಇಲಾಖೆಯ ಮುಖಾಂತರ ಅನುದಾನ ದೊರೆಯುತ್ತದೆ. ತಾಲೂಕಿನ ೮೦% ಕಿಂಡಿ ಅಣೆಕಟ್ಟುಗಳಲ್ಲಿ ಹಲಗೆಗಳಿಲ್ಲ. ಇದಕ್ಕೆ ಕೃಷಿ ಇಲಾಖೆ ಸಹಕಾರ ನೀಡಬೇಕು. ಎಂದು ಹೇಳಿದ ಅವರು ಅಂತರ್ಜಲ ಮಾಹಿತಿ ಕಾರ್ಯಾಗಾರಗಳಿಗೆ ಅನುದಾನ ಹೆಚ್ಚು ಖರ್ಚು ಆಗುತ್ತಿದೆ. ಆದರೆ ಯಾವ ಯೋಜನೆಗಳು ಕೂಡ ಅನುಷ್ಠಾನ ಆಗುತ್ತಿಲ್ಲ. ಈ ಕೆಲಸಗಳು ನವೆಂಬರ್ ತಿಂಗಳಲ್ಲಿ ಆಗಬೇಕಿತ್ತು. ಇಚ್ಚಾಶಕ್ತಿಯ ಕೊರತೆಯಿಂದ ಕೆಲಸಗಳು ಆಗುತ್ತಿಲ್ಲ ಎಂದು ಹೇಳಿದರು.
ಪ್ರತಿ ಗ್ರಾಮ ಪಂಚಾಯತ್ ಅಭಿವೃದ್ದಿ ಅದಿಕಾರಿಗಳಿಂದ ಕಿಂಡಿ ಅಣೆಕಟ್ಟುಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನಾ ವರದಿ ತರಿಸಿ ಕೂಡಲೇ ವರದಿ ನೀಡುವಂತೆ ಕೃಷಿ ಅಧಿಕಾರಿಗೆ ಸೂಚನೆ ನೀಡಲಾಯಿತು.
ಕುಡಿಯುವ ನೀರಿನ ಯೋಜನೆಯ ಪೈಪು ಅಳವಡಿಕೆ, ಮೆಸ್ಕಾಂ ಇಲಾಖೆ ಚರಂಡಿಯಲ್ಲಿ ಮತ್ತು ರಸ್ತೆಗಳಲ್ಲಿ ವಿದ್ಯುತ್ ಕಂಬ ಮತ್ತು ಪೈಪುಗಳನ್ನು ಅಳವಡಿಸಲಾಗುತ್ತಿದ್ದಾರೆ. ಇದನ್ನು ಹಾಕುವಾಗಲೇ ದೂರದಲ್ಲಿ ಹಾಕಬೇಕು. ಹಳ್ಳಿಗಳಲ್ಲಿ ಎಲ್ಲ ಕಂಬಗಳು ಚರಂಡಿಯಲ್ಲಿದೆ. ಇದರಿಂದ ಸರಕಾರದ ಅನುದಾನ ದುರ್ಬಳಕೆ ಆಗುತ್ತಿದೆ ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು.
ಸಭೆಯಲ್ಲಿ ನಿರ್ಗತಿಕರಿಗೆ, ವಿಧವೆಯವರಿಗೆ ಬ್ಯಾಂಕ್ ಸಾಲ ನೀಡುತ್ತದೆಯೇ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಬೊಳ್ಳೂರು ಕೇಳಿದರು. ಅಮೃತ ಯೋಜನೆಯಡಿಯಲ್ಲಿ ೧.೨೦ ಲಕ್ಷ ರೂ ಗಳ ಹಸು ಘಟಕ ಸ್ಥಾಪಿಸಲು ನಿರ್ಗತಿಕ ಮತ್ತು ವಿಧವೆಯರಿಗೆ ಸರ್ಕಾರದಿಂದ ಸಹಾಯಧನ ನೀಡಲಾಗುವುದು. ೩೦ ಸಾವಿರ ಇಲಾಖೆಯಿಂದ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಬ್ಯಾಂಕ್‌ಗಳಿಂದ ಸಾಲ ಪಡೆಯಬೇಕು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭ ಇವರಿಗೆ ಬ್ಯಾಂಕ್‌ಗಳು ಸಾಲ ನೀಡುತ್ತದೆಯೇ, ಬ್ಯಾಂಕ್‌ಗಳು ಕೇಳುವ ದಾಖಲೆ ಪತ್ರಗಳನ್ನು ನೀಡಲು ಇವರಿಗೆ ಸಾಧ್ಯವಾಗತ್ತದೋ ಎಂದು ಬೊಳ್ಳೂರು ಪ್ರಶ್ನಿಸಿದರು. ಈ ರೀತಿಯ ಯೋಜನೆಗಳ ಫಲಾನುಭವಿಗಳಿಗೆ ಬೇಕಾದ ಎಲ್ಲ ದಾಖಲೆಗಳನ್ನು ಇಲಾಖೆಯೇ ಸಿದ್ದಪಡಿಸಿ ನೀಡಬೇಕು ಎಂದು ಸಭೆ ತಿಳಿಸಿತು. ಸಭೆಯಲ್ಲಿ ತಾ. ಪಂ. ಉಪಾಧ್ಯಕ್ಷೆ ಸುಭದಾ ಎಸ್. ರೈ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



This post first appeared on V4news, please read the originial post: here

Share the post

ಸುಳ್ಯ ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆ, ಕಿಂಡಿ ಅಣೆಕಟ್ಟಗಳ ಸ್ಥಿತಿಗತಿಗಳ ವರದಿ ಸಲ್ಲಿಸಲು ಆದೇಶ

×

Subscribe to V4news

Get updates delivered right to your inbox!

Thank you for your subscription

×